ನಿಮಗೆ ಹಸಿವೇ ಆಗುತ್ತಿಲ್ಲವೇ? ಹಸಿವಿನ ಕೊರತೆ ನೀಗಿಸಲು ಸಿಂಪಲ್ ಮನೆಮದ್ದುಗಳಿವು!

Home Remedies: ಈ ಬದಲಾದ ಜೀವನ ಶೈಲಿಯಲ್ಲಿ ಕೆಲಸದ ಒತ್ತಡ, ಅನಾರೋಗ್ಯಕಾರ ಆಹಾರ ಪದ್ದತಿಯಿಂದಾಗಿ ಹಸಿವಿನ ಕೊರತೆ ಕಾಡಬಹುದು. ಇದನ್ನು ತಪ್ಪಿಸಲು ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳು ತುಂಬಾ ಪ್ರಯೋಜನಕಾರಿ ಆಗಿದೆ.   

Written by - Yashaswini V | Last Updated : Mar 28, 2024, 01:27 PM IST
  • ನಮ್ಮಲ್ಲಿ ಕೆಲವರಿಗೆ ಹಸಿವೇ ಆಗುವುದಿಲ್ಲ.
  • ಹಸಿವಿನ ಕೊರತೆಯಿಂದಾಗಿ ಅವರು ಆಹಾರದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ.
  • ಈ ಸಮಸ್ಯೆ ಮಕ್ಕಳಲ್ಲಿ, ವಯಸ್ಕರಲ್ಲಿ ಇಬ್ಬರಲ್ಲೂ ಕಾಣಬಹುದು.
ನಿಮಗೆ ಹಸಿವೇ ಆಗುತ್ತಿಲ್ಲವೇ? ಹಸಿವಿನ ಕೊರತೆ ನೀಗಿಸಲು ಸಿಂಪಲ್ ಮನೆಮದ್ದುಗಳಿವು!  title=

Home Remedies To Increase Hunger: ಸರಿಯಾಗಿ ಆಹಾರ ಸೇವಿಸದಿದ್ದರೆ ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗಿ ಇದರಿಂದಾಗಿ ದೇಹವು ರೋಗಗಳ ಉಗ್ರಾಣವಾಗಬಹುದು. ಇದನ್ನು ತಪ್ಪಿಸಲು ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದು ಅಗತ್ಯ. ಆದರೆ, ನಮ್ಮಲ್ಲಿ ಕೆಲವರಿಗೆ ಹಸಿವೇ ಆಗುವುದಿಲ್ಲ. ಹಸಿವಿನ ಕೊರತೆಯಿಂದಾಗಿ ಅವರು ಆಹಾರದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಈ ಸಮಸ್ಯೆ ಮಕ್ಕಳಲ್ಲಿ, ವಯಸ್ಕರಲ್ಲಿ ಇಬ್ಬರಲ್ಲೂ ಕಾಣಬಹುದು. ಆದರೆ, ಕೆಲವು ಮನೆಮದ್ದುಗಳ ಸಹಾಯದಿಂದ ಈ ಸಮಸ್ಯೆಯಿಂದ ಸುಲಭವಾಗಿ ಪರಿಹಾರ ಪಡೆಯಬಹುದು. 

ಹಸಿವಿನ ಕೊರತೆ ನೀಗಿಸಲು ಸಿಂಪಲ್ ಮನೆಮದ್ದುಗಳು: 
ಪರಂಗಿ ಹಣ್ಣು: 

ಪ್ರತಿ ನಿತ್ಯ ಖಾಲಿ ಹೊಟ್ಟೆಯಲ್ಲಿ ಪರಂಗಿ ಹಣ್ಣನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಮಾತ್ರವಲ್ಲದೆ, ಇದು ಹಸಿವನ್ನು ಹೆಚ್ಚಿಸಲು ಕೂಡ ಪ್ರಯೋಜನಕಾರಿ ಆಗಿದೆ. 

ಬ್ಲ್ಯಾಕ್ ಬೆರ್ರಿ ವಿನೆಗರ್: 
ಪ್ರತಿದಿನ ಬ್ಲ್ಯಾಕ್ ಬೆರ್ರಿ ವಿನೆಗರ್ ಅನ್ನು ಕುಡಿಯುವುದರಿಂದಲೂ ಹಸಿವಿನ ಕೊರತೆಯನ್ನು ನೀಗಿಸಬಹುದು. 

ಇದನ್ನೂ ಓದಿ- RO Water: ಆರೋಗ್ಯಕ್ಕೆ ಆರ್‌ಓ ವಾಟರ್ ಬಳಕೆ ಎಷ್ಟು ಉತ್ತಮ? ತಜ್ಞರು ಹೇಳಿದ್ದೇನು?

ಸಿಟ್ರಿಕ್ ಹಣ್ಣಿನ ರಸ: 
ಪ್ರತಿದಿನ ಸಿಟ್ರಿಕ್ ಹಣ್ಣುಗಳ ರಸವನ್ನು ನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ಇದು ದೇಹದಲ್ಲಿರುವ ಕಲ್ಮಶಗಳನ್ನು ಕಡಿಮೆ ಮಾಡಿ ಹಸಿವು ಹೆಚ್ಚಾಗುವಂತೆ ಮಾಡುತ್ತದೆ. 

ಚಟ್ನಿ:
ನಿಯಮಿತವಾಗಿ ಹಸಿರು ಕೊತ್ತಂಬರಿ ಸೊಪ್ಪು, ಟೊಮೇಟೊ, ನಿಂಬೆ, ಕಪ್ಪು ಉಪ್ಪು ಮತ್ತು ಹಸಿರು ಮೆಣಸಿನಕಾಯಿಗಳನ್ನು ಬೆರೆಸಿ ಚಟ್ನಿ ತಯಾರಿಸಿ ಊತದೊಂದಿಗೆ ಸೇವಿಸುವುದರಿಂದ ಇದು ಕ್ರಮೇಣ ಹಸಿವನ್ನು ಹೆಚ್ಚಿಸುತ್ತದೆ. 

ಇದನ್ನೂ ಓದಿ- ಕಿಡ್ನಿ ಸ್ಟೋನ್ ಇದ್ದರೆ ಈ ಜ್ಯೂಸ್ ಕುಡಿಯಿರಿ, ಒಂದೇ ವಾರದಲ್ಲಿ ಕಲ್ಲು ಹೊರ ಬರುತ್ತದೆ !

ಮ್ಯಾಜಿಕಲ್ ಡ್ರಿಂಕ್: 
ಕೊತ್ತಂಬರಿ ಸೊಪ್ಪು, ಕಪ್ಪು ಜೀರಿಗೆ, ಒಣ ಶುಂಠಿ ಮತ್ತು ಕಲ್ಲು ಉಪ್ಪನ್ನು ಒಟ್ಟಿಗೆ ಮಿಶ್ರಣ ಮಾಡಿ, ಆ ಪುಡಿಯನ್ನು ದಿನಕ್ಕೆ ಮೂರ್ನಾಲ್ಕು ಬಾರಿ ನೀರಿನೊಂದಿಗೆ ಬೆರೆಸಿ ಸೇವಿಸಿ. ಇದರಿಂದ ಹಸಿವಿನ ಕೊರತೆಯನ್ನು ನೀಗಿಸಬಹುದು. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News