Jaggery: ಚಳಿಗಾಲದಲ್ಲಿ ಅತಿಯಾದ ಬೆಲ್ಲ ಸೇವನೆ ಹಾನಿಕಾರಕ

Jaggery In Winter: ನೀವು ಚಳಿಗಾಲದಲ್ಲಿ ಹೆಚ್ಚು ಬೆಲ್ಲವನ್ನು ಸೇವಿಸಿದರೆ, ಅದು ನಿಮಗೆ ಹಾನಿಕಾರಕವಾಗಿದೆ. ಇದರಿಂದ ಅನೇಕ ಸಮಸ್ಯೆಗಳು ಹೆಚ್ಚಾಗುತ್ತವೆ.  

Written by - Yashaswini V | Last Updated : Dec 22, 2021, 09:24 AM IST
  • ಬೆಲ್ಲದ ಅತಿಯಾದ ಸೇವನೆಯು ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು
  • ಇದರಿಂದ ಮಲಬದ್ಧತೆ ಸಮಸ್ಯೆ ಹೆಚ್ಚಾಗುತ್ತದೆ
  • ಇದು ಅಲರ್ಜಿಯ ಸಮಸ್ಯೆಯನ್ನು ಸಹ ಉಂಟುಮಾಡಬಹುದು
Jaggery: ಚಳಿಗಾಲದಲ್ಲಿ ಅತಿಯಾದ ಬೆಲ್ಲ ಸೇವನೆ ಹಾನಿಕಾರಕ title=
Jaggery Side Effects

Jaggery In Winter: ಬೆಲ್ಲ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ, ಅತಿಯಾದರೆ ಅಮೃತವೂ ವಿಷ ಎಂಬಂತೆ, ಚಳಿಗಾಲದಲ್ಲಿ ಹೆಚ್ಚು ಬೆಲ್ಲವನ್ನು ಸೇವಿಸಿದರೆ, ಅದು ನಿಮಗೆ ಹಾನಿಕಾರಕವಾಗಿದೆ. ಬೆಲ್ಲವನ್ನು ಅತಿಯಾಗಿ ಸೇವಿಸುವುದರಿಂದ ಹಲವಾರು ತೊಂದರೆಗಳು ಉಂಟಾಗುತ್ತವೆ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದಲ್ಲದೆ, ತೂಕ ಹೆಚ್ಚಾಗುವುದು ಮತ್ತು ಊತದ ಸಮಸ್ಯೆಯೂ ಹೆಚ್ಚಾಗಬಹುದು.

ತೂಕ ಹೆಚ್ಚಳದ ಸಮಸ್ಯೆ:
ನೀವು ತೂಕ ಇಳಿಸುವ (Weight Loss) ಆಹಾರಕ್ರಮದಲ್ಲಿದ್ದರೆ, ಬೆಲ್ಲವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ. ಬೆಲ್ಲದಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ ಇರುತ್ತದೆ. ಬೆಲ್ಲವನ್ನು ಅತಿಯಾಗಿ ತಿನ್ನುವುದರಿಂದ ತೂಕ ಹೆಚ್ಚಾಗಬಹುದು. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಬೆಲ್ಲವನ್ನು ಬಹಳ ಸೀಮಿತ ಪ್ರಮಾಣದಲ್ಲಿ ಸೇವಿಸಿ. 

ರಕ್ತದ ಸಕ್ಕರೆಯ ಮಟ್ಟ:
ನೀವು ಬೆಲ್ಲವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಸಕ್ಕರೆಯ ಬದಲಿಗೆ ಬೆಲ್ಲವನ್ನು ಸೇವಿಸಿದರೆ ಅದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದಿಲ್ಲ ಎಂದು ಭಾವಿಸಿ ಹಲವರು ಹೆಚ್ಚು ಬೆಲ್ಲವನ್ನು ಸೇವಿಸುತ್ತಾರೆ. ಆದರೆ ಅತಿಯಾಗಿ ಬೆಲ್ಲ ತಿನ್ನುವುದರಿಂದಲೂ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ. ಹಾಗಾಗಿ, ಅದನ್ನು ಬಹಳ ಸೀಮಿತ ಪ್ರಮಾಣದಲ್ಲಿ ಸೇವಿಸಿ.

ಇದನ್ನೂ ಓದಿ- Black Tea Benefits For Skin: ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಬ್ಲಾಕ್ ಟೀ; ಈ ಸಮಸ್ಯೆಗೆ ಸಿಗುತ್ತೆ ಶಾಶ್ವತ ಪರಿಹಾರ

ಜೀರ್ಣಕ್ರಿಯೆಯೊಂದಿಗೆ ಸಮಸ್ಯೆಗಳು:
ಬೆಲ್ಲದ ಅತಿಯಾದ (Jaggery Side Effects) ಸೇವನೆಯು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು. ಬೆಲ್ಲವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಮಲಬದ್ಧತೆ ಉಂಟಾಗುತ್ತದೆ. ಇದರಿಂದ ಮೂಗಿನಿಂದ ರಕ್ತಸ್ರಾವದ ಸಮಸ್ಯೆಯೂ ಉಂಟಾಗುತ್ತದೆ. ಬೆಲ್ಲವು ದೇಹದ ಉಷ್ಣತೆಯನ್ನು ಹೆಚ್ಚಿಸುವ ಸ್ವಭಾವವನ್ನು ಹೊಂದಿದೆ, ಆದ್ದರಿಂದ ಬೆಲ್ಲವನ್ನು ಹೆಚ್ಚು ಸೇವಿಸಬಾರದು ಎನ್ನಲಾಗುತ್ತದೆ.

ನೀವು ಹೆಚ್ಚಿನ ಪ್ರಮಾಣದಲ್ಲಿ ಬೆಲ್ಲವನ್ನು ಸೇವಿಸಿದರೆ, ಅದು ಉಬ್ಬುವಿಕೆಯ ಸಮಸ್ಯೆಗೆ ಕಾರಣವಾಗಬಹುದು. ಬೆಲ್ಲದಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗಿದ್ದು, ಇದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಸಂಧಿವಾತದ ಸಮಸ್ಯೆ ಇದ್ದರೆ ಬೆಲ್ಲ ತಿನ್ನುವುದನ್ನು ತಪ್ಪಿಸುವುದು ಒಳ್ಳೆಯದು.

ಇದನ್ನೂ ಓದಿ-  Benefits Of Jaggery : ಚಳಿಗಾಲದ ಈ ಸಮಯದಲ್ಲಿ ಬೆಲ್ಲ ಸೇವಿಸಿ, ಈ ರೋಗಗಳಿಂದ ದೂರವಿರಿ!

ಅಲರ್ಜಿ ಸಮಸ್ಯೆ: 
ಬೆಲ್ಲದಿಂದ ಅನೇಕರಿಗೆ ಅಲರ್ಜಿಯೂ ಇರುತ್ತದೆ. ಇದು ಅತಿಸಾರ, ಆಯಾಸ, ಜ್ವರ, ಚರ್ಮದ ದದ್ದು, ತಲೆನೋವು ಸೇರಿದಂತೆ ಇತರ ಸಮಸ್ಯೆಗಳಿಗೂ ಕಾರಣವಾಗಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News