Banana Shake: ನೀವೂ ಬಾಳೆಹಣ್ಣಿನ ಶೇಕ್ ಕುಡಿತೀರಾ? ಅದರ ಅಡ್ಡಪರಿಣಾಮಗಳ ಬಗ್ಗೆಯೂ ಇರಲಿ ಎಚ್ಚರ

Banana Shake Side Effects: ನೀವೂ ಸಹ ಉತ್ತಮ ಆರೋಗ್ಯಕ್ಕಾಗಿ ಬಾಳೆಹಣ್ಣಿನ ಶೇಕ್ ಸೇವಿಸುತ್ತಿದ್ದರೆ ಈ ಲೇಖನವನ್ನು ತಪ್ಪದೇ ಓದಿ.

Written by - Yashaswini V | Last Updated : Dec 17, 2021, 01:01 PM IST
  • ಹಾಲು ಮತ್ತು ಹಣ್ಣುಗಳ ಸ್ವಭಾವವು ವಿಭಿನ್ನವಾಗಿದೆ
  • ಹಾಲಿನೊಂದಿಗೆ ಹಣ್ಣುಗಳನ್ನು ಸೇವಿಸಬಾರದು
  • ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು
Banana Shake: ನೀವೂ ಬಾಳೆಹಣ್ಣಿನ ಶೇಕ್ ಕುಡಿತೀರಾ? ಅದರ ಅಡ್ಡಪರಿಣಾಮಗಳ ಬಗ್ಗೆಯೂ ಇರಲಿ ಎಚ್ಚರ title=
Banana Shake Side Effects

Banana Shake Side Effects: ನಮ್ಮಲ್ಲಿ ಬಹಳ ಮಂದಿಗೆ ಬಾಳೆಹಣ್ಣನ್ನು ಹಾಗೆ ತಿನ್ನಲು ಇಷ್ಟವಿಲ್ಲ. ಕೆಲವರಿಗೆ ಬಾಳೆಹಣ್ಣಿನ ಶೇಕ್ ತಯಾರಿಸಿ ಕುಡಿಯುವ ಅಭ್ಯಾಸ ಇರುತ್ತದೆ. ಆದರೆ ಬಾಳೆಹಣ್ಣಿನ ಶೇಕ್ ಸೇವನೆಯಿಂದ ಆರೋಗ್ಯಕ್ಕೆ ಹಾನಿಯಾಗಬಹುದು ಎಂಬ ಕಲ್ಪನೆಯೂ ಅವರಿಗೆ ಇರುವುದಿಲ್ಲ. ಆಯುರ್ವೇದದ ಪ್ರಕಾರ, ಬಾಳೆಹಣ್ಣಿನ ಶೇಕ್ ಸೇವನೆಯು ರೋಗಗಳನ್ನು ಉಂಟುಮಾಡುತ್ತದೆ. ವಿವಿಧ ಬಾಳೆಹಣ್ಣುಗಳು ಮತ್ತು ಹಾಲನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ನಿಮಗೆ ಲಾಭದಾಯಕವಾಗಿದೆ, ಆದರೆ ಅದನ್ನು ಶೇಕ್ ರೂಪದಲ್ಲಿ ಕುಡಿಯುವುದರಿಂದ ನಿಮಗೆ ಈ ಪ್ರಯೋಜನಗಳು ಸಿಗುವುದಿಲ್ಲ, ಬದಲಿಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉದ್ಭವವಾಗುತ್ತವೆ.

ತಜ್ಞರ ಪ್ರಕಾರ, ಮೊದಲನೆಯದಾಗಿ, ಹಾಲಿನೊಂದಿಗೆ ಹಣ್ಣುಗಳನ್ನು (Fruits With Milk) ಸೇವಿಸಬಾರದು. ಹಾಲು ಮತ್ತು ಹಣ್ಣುಗಳ ಸ್ವಭಾವವು ವಿಭಿನ್ನವಾಗಿದೆ. ಇವೆರಡೂ ದೇಹಕ್ಕೆ ಪ್ರಯೋಜನಕಾರಿ, ಆದರೆ ಇವುಗಳನ್ನು ಒಟ್ಟಿಗೆ ಸೇವಿಸುವುದರಿಂದ ದೇಹದಲ್ಲಿ ಹಲವಾರು ರೋಗಗಳು ಉಂಟಾಗಬಹುದು. ನೀವು ನಿಯಮಿತವಾಗಿ ಬಾಳೆಹಣ್ಣು ಶೇಕ್ ಕುಡಿಯುತ್ತಿದ್ದರೆ, ಅದು ದೇಹದಲ್ಲಿ ನೋವಿನ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ನಿಮಗೆ ತಿಳಿದಿದೆಯೇ?

ಇದನ್ನೂ ಓದಿ-  ಶುಗರ್ ನಿಯಂತ್ರಿಸಲು ಮೆಂತೆ ಸೊಪ್ಪನ್ನು ಈ ರೀತಿ ಬಳಸಿ ನೋಡಿ

ಬನಾನಾ ಶೇಕ್ ಏಕೆ ಕುಡಿಯಬಾರದು?
ಪ್ರತಿಯೊಂದು ಹಣ್ಣಿನಲ್ಲೂ ಸ್ವಲ್ಪ ಪ್ರಮಾಣದ ಸಿಟ್ರಿಕ್ ಆಮ್ಲ ಅಥವಾ ಅಂತಹ ಆಮ್ಲಗಳಿವೆ, ಇದನ್ನು ಹಾಲಿನೊಂದಿಗೆ ಬೆರೆಸಿದಾಗ, ಹಾಲು ಸಿಡಿಯುತ್ತದೆ. ಬಾಳೆಹಣ್ಣಿನಲ್ಲಿ ಕೆಲವು ನೈಸರ್ಗಿಕ ರಾಸಾಯನಿಕ ಅಂಶಗಳಿವೆ, ಅದು ಹಾಲಿನೊಂದಿಗೆ ಜೀರ್ಣವಾಗುವುದಿಲ್ಲ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು.

ಬಾಳೆಹಣ್ಣಿನ ಶೇಕ್ (Banana Shake) ಸೇವಿಸುವುದರಿಂದ ಹೊಟ್ಟೆಯಲ್ಲಿ ಅಜೀರ್ಣ ಉಂಟಾಗುತ್ತದೆ. ಮಲಬದ್ಧತೆಯ ಸಮಸ್ಯೆಯು ಅನಿಲ ರಚನೆಗೆ ಕಾರಣವಾಗಬಹುದು. ನೀವು ನಿಯಮಿತವಾಗಿ ಬಾಳೆಹಣ್ಣು ಶೇಕ್ ಸೇವಿಸಿದರೆ, ಟ್ರೈಗ್ಲಿಸರೈಡ್ ಅಥವಾ ಕೊಲೆಸ್ಟ್ರಾಲ್ ಹೆಚ್ಚಳಕ್ಕೂ ಇದು ಕಾರಣವಾಗಬಹುದು. ಬಾಳೆಹಣ್ಣು ಮತ್ತು ಹಾಲನ್ನು ಬೆರೆಸಿ ಶೇಕ್ ತಯಾರಿಸಿದಾಗ ಅದು ದೇಹದಲ್ಲಿನ ಗಾಳಿಯನ್ನು ನಿಗ್ರಹಿಸುವ ಕೆಲಸ ಮಾಡುತ್ತದೆ. ಹೊಟ್ಟೆಯಲ್ಲಿರುವ ಅನಿಲ ಅಥವಾ ಗಾಳಿಯು ದೇಹದಿಂದ ಹೊರಬರುವ ಬದಲು ರಕ್ತದ ಜೊತೆಗೆ ದೇಹದಲ್ಲಿ ಹರಿಯಲು ಪ್ರಾರಂಭಿಸುತ್ತದೆ. ಇದು ನೋವಿನ ಸಮಸ್ಯೆಗಳನ್ನು ಉಂಟುಮಾಡಬಹುದು.

ಬಾಳೆಹಣ್ಣು ತಿಂದ ತಕ್ಷಣ ಹಾಲು ಕುಡಿಯಬೇಡಿ:
ಬಾಳೆಹಣ್ಣು ತಿಂದ ತಕ್ಷಣ ಹಾಲು ಕುಡಿಯುವುದು ಕೂಡ ಹಾನಿಕಾರಕ. ವಾಸ್ತವವಾಗಿ, ಪ್ರಕೃತಿಯಲ್ಲಿ, ಪರಸ್ಪರ ವಿಭಿನ್ನ ವಸ್ತುಗಳು ಹೊಟ್ಟೆಯನ್ನು ತಲುಪಿದಾಗ ಜೀರ್ಣಾಂಗ ವ್ಯವಸ್ಥೆಯನ್ನು ತೊಂದರೆಗೊಳಿಸಬಹುದು. ಇದು ಹೊಟ್ಟೆ ನೋವು, ಗ್ಯಾಸ್ ಅಥವಾ ಮಲಬದ್ಧತೆಗೆ ಕಾರಣವಾಗಬಹುದು. 

ಇದನ್ನೂ ಓದಿ- Sensitive Teeth During Pregnancy: ಗರ್ಭಾವಸ್ಥೆಯಲ್ಲಿ ಹಲ್ಲುನೋವನ್ನು ನಿರ್ಲಕ್ಷಿಸಬೇಡಿ

ಹಾಲು - ಹಣ್ಣನ್ನು ಈ ರೀತಿಯಾಗಿ ಸೇವಿಸುವ ಮೂಲಕ ಪ್ರಯೋಜನವನ್ನು ಪಡೆಯಬಹುದು:
ಬಾಳೆಹಣ್ಣು ತಿಂದ 1 ಗಂಟೆಯ ನಂತರ ಹಾಲು ಕುಡಿಯಿರಿ, ಇದು ಪ್ರಯೋಜನಕಾರಿಯಾಗಿದೆ. ಇದು ಜೀರ್ಣಕ್ರಿಯೆಗೆ ಒಳ್ಳೆಯದು. ಇದರೊಂದಿಗೆ ದೇಹದಲ್ಲಿ ಎನರ್ಜಿ ಲೆವೆಲ್ ಕೂಡ ಕಾಪಾಡುತ್ತದೆ. ಇದು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News