Bad Urine Smell: ಮೂತ್ರ ವಿಸರ್ಜನೆ ವೇಳೆ ಬರುವ ಕೆಟ್ಟ ವಾಸನೆ ಈ ಗಂಭೀರ ಕಾಯಿಲೆಗಳ ಮುನ್ಸೂಚನೆ!

Bad Urine Smell: ಮೂತ್ರದಲ್ಲಿ ಹೆಚ್ಚಿನ ಪ್ರಮಾಣ ನೀರಿನದ್ದಾಗಿದ್ದರೆ, ಇನ್ನೂ ಕೆಲವು ಭಾಗ ಸೋಡಿಯಂ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಅಮೋನಿಯಾ, ಕ್ಲೋರೈಡ್ ನಿಂದ ತುಂಬಿರುತ್ತದೆ. ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಮೂತ್ರದ ಬಣ್ಣವು ನೀರಿನಂತೆ ಇರುತ್ತದೆ.

Written by - Bhavishya Shetty | Last Updated : Dec 12, 2022, 09:05 AM IST
    • ಮೂತ್ರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಕೆಟ್ಟ ವಾಸನೆ ಸಮಸ್ಯೆ
    • ಇವುಗಳ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ
    • ಇವುಗಳು ಗಂಭೀರ ಕಾಯಿಲೆಗಳ ಮುನ್ಸೂಚನೆ ಆಗಿರುತ್ತದೆ
Bad Urine Smell: ಮೂತ್ರ ವಿಸರ್ಜನೆ ವೇಳೆ ಬರುವ ಕೆಟ್ಟ ವಾಸನೆ ಈ ಗಂಭೀರ ಕಾಯಿಲೆಗಳ ಮುನ್ಸೂಚನೆ!  title=
Urine Bad smell

Bad Urine Smell: ಆರೋಗ್ಯವನ್ನು ದೇಹದಿಂದ ಹೊರಬರುವ ದ್ರವ್ಯದ ವಾಸನೆ, ಬಣ್ಣದ ಮೂಲಕ ತಿಳಿಯಬಹುದು ಎಂಬುದು ನಿಮಗೆ ಗೊತ್ತಾ? ಕೆಲವೊಂದು ಬಾರಿ ಮೂತ್ರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಕೆಟ್ಟ ವಾಸನೆ ಸಮಸ್ಯೆ ಅಥವಾ ನೋವು, ಬಣ್ಣ ಬದಲಾವಣೆ ಆಗಿರುವುದು ಹೀಗೆ ಕೆಲ ವಿಚಾರಗಳು ನಿಮ್ಮ ಗಮನಕ್ಕೆ ಬಂದಿರಬಹುದು. ಆದರೆ ಇವುಗಳ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ಏಕೆಂದರೆ ಇವುಗಳು ಗಂಭೀರ ಕಾಯಿಲೆಗಳ ಮುನ್ಸೂಚನೆ ಆಗಿರುತ್ತದೆ.

ಮೂತ್ರದಲ್ಲಿ ಹೆಚ್ಚಿನ ಪ್ರಮಾಣ ನೀರಿನದ್ದಾಗಿದ್ದರೆ, ಇನ್ನೂ ಕೆಲವು ಭಾಗ ಸೋಡಿಯಂ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಅಮೋನಿಯಾ, ಕ್ಲೋರೈಡ್ ನಿಂದ ತುಂಬಿರುತ್ತದೆ. ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಮೂತ್ರದ ಬಣ್ಣವು ನೀರಿನಂತೆ ಇರುತ್ತದೆ.

ಇದನ್ನೂ ಓದಿ: Body Detox Tips: ರಕ್ತವನ್ನು ಶುಚಿಗೊಳಿಸುವುದರ ಜೊತೆಗೆ ಹಲವು ಕಾಯಿಲೆಗಳನ್ನು ನಿಮ್ಮಿಂದ ದೂರವಿರಿಸುತ್ತವೆ ಈ ಸಂಗತಿಗಳು

ಒಂದು ವೇಳೆ ದೇಹವು ನಿರ್ಜಲೀಕರಣಗೊಂಡಾಗ ಮೂತ್ರದ ಬಣ್ಣ ಮತ್ತು ವಾಸನೆ ಬದಲಾಗುತ್ತದೆ. ಅಷ್ಟೇ ಅಲ್ಲದೆ, ಇವು ಕೆಲವು ಆರೋಗ್ಯ ಸಮಸ್ಯೆಗಳ ಮುನ್ಸೂಚನೆಯನ್ನೂ ನೀಡುತ್ತದೆ.  

ಮೂತ್ರನಾಳ ಸೋಂಕು:

ಮೂತ್ರನಾಳದಲ್ಲಿ ಸಮಸ್ಯೆಯಿದ್ದರೆ, ಮೂತ್ರದಲ್ಲಿ ಅಮೋನಿಯಾ ವಾಸನೆ ಕಂಡುಬರುತ್ತದೆ. ಇದರ ಜೊತೆಗೆ ಮೂತ್ರ ಮಾಡುವ ಸಂದರ್ಭದಲ್ಲಿ ಉರಿಯುವುದು, ರಕ್ತ ವಿಸರ್ಜನೆ ಆಗುವುದು ಎಲ್ಲಾ ಮೂತ್ರನಾಳದ ಸಮಸ್ಯೆಯ ಲಕ್ಷಣಗಳು. ಹೀಗಿರುವಾಗ ವೈದ್ಯರನ್ನು ತಕ್ಷಣ ಸಂಪರ್ಕಿಸುವುದು ಸೂಕ್ತ.

ಮಧುಮೇಹ ಸಮಸ್ಯೆ:

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಉಳ್ಳವರ ಮೂತ್ರದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾಗಿರುತ್ತದೆ. ಜೊತೆಗೆ ಮಧುಮೇಹಿಗಳ ಮೂತ್ರವು ತುಂಬಾ ಕೆಟ್ಟ ವಾಸನೆಯಿದ್ದು, ಕೊಳೆತ ಹಣ್ಣಿನ ವಾಸನೆ ಬರುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿಟ್ಟರೆ ಈ ಸಮಸ್ಯೆಯನ್ನು ಗುಣಪಡಿಸಲು ಸಾಧ್ಯ.

ಯಕೃತ್ತಿನ ರೋಗವಿದ್ದರೂ ಸಮಸ್ಯೆ:

ಅಮೋನಿಯ ಅಥವಾ ಮಸ್ಟಿನೆಸ್ನ ವಾಸನೆ ಬಂದರೆ ಅದು ಯಕೃತ್ತಿನ ರೋಗದ ಸಂಕೇತ. ಯಕೃತ್ತು ಸರಿಯಾಗಿ ಕೆಲಸ ಮಾಡದಿದ್ದರೆ ಮೂತ್ರ ಮತ್ತು ರಕ್ತದಲ್ಲಿ ಅಮೋನಿಯಾ ಸಂಗ್ರಹ ಆಗುತ್ತದೆ. ಆಗ ಕೆಟ್ಟ ವಾಸನೆ ಬರಲು ಪ್ರಾರಂಭವಾಗುತ್ತದೆ.

ಪಿತ್ತಜನಕಾಂಗದಲ್ಲಿ ಅಡಚಣೆ ಇದ್ದ ಸಂದರ್ಭದಲ್ಲೂ ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಿಬ್ಬೊಟ್ಟೆಯಲ್ಲಿ ನೋವು, ವಾಂತಿ, ಊತ ಮತ್ತು ರಕ್ತಸ್ರಾವದಂತಹ ಕೆಲ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಗಾಳಿಗುಳ್ಳೆಯ ಸೋಂಕುಗಳು ಮೂತ್ರ ಕೆಟ್ಟ ವಾಸನೆ ಬರಲು ಪ್ರಮುಖ ಕಾರಣ. ಅಷ್ಟೇ ಅಲ್ಲದೆ, ಈ ಸಮಸ್ಯೆ ಇದ್ದವರು, ಪದೇ ಪದೇ ಮೂತ್ರ ವಿಸರ್ಜನೆ ಮಾಡಲು ಹೋಗುತ್ತಾರೆ.

ಜಠರ ಕರುಳಿನ ಗಾಳಿಗುಳ್ಳೆಯ ಫಿಸ್ಟುಲಾ ಸಮಸ್ಯೆಯು ಮೂತ್ರದಲ್ಲಿ ಮಲ ವಾಸನೆ ಬರಲು ಕಾರಣವಾಗುತ್ತದೆ. ಕೆಲವೊಮ್ಮೆ ಈ ಸಮಸ್ಯೆಯ ಪರಿಹಾರಕ್ಕೆಂದು ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗುತ್ತದೆ.

ಮೇಪಲ್ ಸಿರಪ್ ಮೂತ್ರದ ಕಾಯಿಲೆಯು ಅನುವಂಶೀಯವಾಗಿದ್ದು, ಇದರ ಸ್ಥಿತಿಯನ್ನು ಬಾಲ್ಯದಲ್ಲಿಯೇ ತಿಳಿದುಕೊಳ್ಳಬಹುದು. ಈ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಮೂತ್ರವು ತೀವ್ರ ಕೆಟ್ಟ ವಾಸನೆ ಬರುತ್ತದೆ.

ಇದನ್ನೂ ಓದಿ: Diabetes Control: ಈ ತರಕಾರಿಗಳು ಮಧುಮೇಹದ ಶತ್ರುಗಳಂತೆ, ನಿತ್ಯ ಆಹಾರದಲ್ಲಿ ತಪ್ಪದೇ ಸೇವಿಸಿ

(ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News