Anemia Symptoms: ಈ ರೋಗಲಕ್ಷಣಗಳು ನಿಮ್ಮ ದೇಹದಲ್ಲಿ ರಕ್ತದ ಕೊರತೆಯ ಸಂಕೇತವಾಗಿರಬಹುದು!

ಪುರುಷರಿಗಿಂತ ಮಹಿಳೆಯರಲ್ಲಿ ರಕ್ತಹೀನತೆ (Anemia) ಸಮಸ್ಯೆ ಕಂಡು ಬರುತ್ತದೆ. ಗರ್ಭಾವಸ್ಥೆಯಲ್ಲಿ ರಕ್ತಹೀನತೆ ಕಂಡುಬಂದರೆ, ಹೆರಿಗೆಯ ಸಮಯದಲ್ಲಿ ಸಾವಿನ ಅಪಾಯವು ಅನೇಕ ಪಟ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.   

Written by - Yashaswini V | Last Updated : Jun 30, 2021, 02:57 PM IST
  • ಪುರುಷರಿಗಿಂತ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಕಂಡು ಬರುತ್ತದೆ.
  • ರಕ್ತಹೀನತೆಯ ಲಕ್ಷಣಗಳು ಯಾವುವು?
  • ನಿಮಗೆ ರಕ್ತಹೀನತೆ ಸಮಸ್ಯೆ ಇದ್ದರೆ ಏನು ತಿನ್ನಬೇಕು?
Anemia Symptoms: ಈ ರೋಗಲಕ್ಷಣಗಳು ನಿಮ್ಮ ದೇಹದಲ್ಲಿ ರಕ್ತದ ಕೊರತೆಯ ಸಂಕೇತವಾಗಿರಬಹುದು! title=
ಇವು ರಕ್ತಹೀನತೆಯ ಲಕ್ಷಣಗಳಾಗಿರಬಹುದು

Anemia Symptoms: ದೇಹದಲ್ಲಿ ರಕ್ತದ ಕೊರತೆಯಿದ್ದರೆ, ಅನೇಕ ರೋಗ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಈ ಲಕ್ಷಣಗಳು ಮುಂದೊಂದು ದಿನ ಭಾರೀ ಸಮಸ್ಯೆಯಾಗಿ ಕಾಡಬಹುದು. ಈ ರೋಗಲಕ್ಷಣಗಳನ್ನು ಸರಿಯಾದ ಸಮಯದಲ್ಲಿ ಗುರುತಿಸಿದರೆ, ನಂತರ ಸಮಸ್ಯೆ ಗಂಭೀರವಾಗುವುದನ್ನು ತಪ್ಪಿಸಬಹುದು.

ತಜ್ಞರ ಪ್ರಕಾರ, ದೇಹದ ರಕ್ತದಲ್ಲಿನ ಕೆಂಪು ರಕ್ತ ಕಣಗಳು ಅಥವಾ ಕೋಶಗಳ ನಾಶದ ಪ್ರಮಾಣವು ಅವುಗಳ ರಚನೆಯ ಪ್ರಮಾಣವನ್ನು ಮೀರಿದಾಗ ರಕ್ತಹೀನತೆ ಸಮಸ್ಯೆ ಉಂಟಾಗುತ್ತದೆ. 

ಪುರುಷರಿಗಿಂತ ಮಹಿಳೆಯರಲ್ಲಿ ರಕ್ತಹೀನತೆ (Anemia) ಸಮಸ್ಯೆ ಕಂಡು ಬರುತ್ತದೆ. ಗರ್ಭಾವಸ್ಥೆಯಲ್ಲಿ ರಕ್ತಹೀನತೆ ಕಂಡುಬಂದರೆ, ಹೆರಿಗೆಯ ಸಮಯದಲ್ಲಿ ಸಾವಿನ ಅಪಾಯವು ಅನೇಕ ಪಟ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- Cracked Heels Care: ಬಿರುಕು ಬಿಟ್ಟ ಹಿಮ್ಮಡಿಯನ್ನು ಸರಿಪಡಿಸಲು ಸುಲಭ ಮನೆ ಮದ್ದು

ರಕ್ತಹೀನತೆಯ ಲಕ್ಷಣಗಳು (Anemia Symptoms):-
>> ದೌರ್ಬಲ್ಯ, ದಣಿದ ಭಾವನೆ
>> ಅಸಹಜ ಹೃದಯ ಬಡಿತ
>> ಉಸಿರಾಟದ ತೊಂದರೆ
>> ತಲೆನೋವು ಮತ್ತು ಈ ಸಮಸ್ಯೆಯ ಉಲ್ಬಣ
>> ತೀವ್ರ ತಲೆತಿರುಗುವಿಕೆ
>> ಚರ್ಮ ಕಳೆಗುಂದುವುದು
>> ನಾಲಿಗೆ, ಉಗುರುಗಳ ಒಳಗೆ ಬಿಳಿಯಾಗಿರುತ್ತದೆ
>> ಮುಖ ಅಥವಾ ಕಾಲುಗಳ ಊತ

ಇದನ್ನೂ ಓದಿ- ದೇಹದಲ್ಲಿ ಹಿಮೋಗ್ಲೊಬಿನ್ ಕಾಪಾಡುವುದು ಹೇಗೆ..?

ನಿಮಗೆ ರಕ್ತಹೀನತೆ ಸಮಸ್ಯೆ ಇದ್ದರೆ ಏನು ತಿನ್ನಬೇಕು?
* ಒಣದ್ರಾಕ್ಷಿ ತಿನ್ನಿರಿ. ಅವುಗಳನ್ನು ಹಾಲಿನಲ್ಲಿ ಕುದಿಸಿ ಮತ್ತು ಈ ಹಾಲನ್ನು (Milk) ಕುಡಿಯಿರಿ.
* ಪಾಲಕದಲ್ಲಿ ಕಬ್ಬಿಣದ ಅಂಶವಿದೆ. ಇದರ ಸೇವನೆಯು ದೇಹದಲ್ಲಿನ ರಕ್ತದ ಕೊರತೆಯನ್ನು ನಿವಾರಿಸುತ್ತದೆ.
* ಬಾಳೆಹಣ್ಣು ತಿನ್ನಿರಿ. ಇದರಲ್ಲಿ ಪೊಟ್ಯಾಸಿಯಮ್ ಇರುತ್ತದೆ. ಇದನ್ನು ಹಾಲಿನೊಂದಿಗೂ ತಿನ್ನಬಹುದು.
* ಆಪಲ್ ಬಳಕೆ ತುಂಬಾ ಪ್ರಯೋಜನಕಾರಿ.
* ಹಸಿರು ಸೊಪ್ಪು ತರಕಾರಿಗಳು, ಸಿಹಿ ಆಲೂಗಡ್ಡೆ ತಿನ್ನಿರಿ.
* ಮೊಟ್ಟೆ, ಹಾಲು, ಚೀಸ್, ಮಾಂಸ, ಮೀನು, ಸೋಯಾಬೀನ್ ಕೂಡ ರಕ್ತಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ.
* ಮಸೂರ, ಬಟಾಣಿ, ಬೀಜಗಳನ್ನು ಸೇವಿಸಿ.
* ಕಾಫಿ ಮತ್ತು ಚಹಾವನ್ನು ಸೇವಿಸಬೇಡಿ.
(ಹಕ್ಕುತ್ಯಾಗ: ಲೇಖನದಲ್ಲಿ ನೀಡಿರುವ ಸಲಹೆಯು ಸಾಮಾನ್ಯ ಮಾಹಿತಿ ಮಾತ್ರ. ಇದು ತಜ್ಞರ ಅಭಿಪ್ರಾಯವಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News