Ajwain Water: ಹೆರಿಗೆಯ ನಂತರ ಮಹಿಳೆಯರಿಗೆ ಬಹಳ ಪ್ರಯೋಜನಕಾರಿ ಅಜ್ವೈನ್ ವಾಟರ್

Ajwain Water: ಇದು ಮಹಿಳೆಯರಿಗೆ ವಿಶೇಷ ಮೂಲಿಕೆಯಂತೆ ಕಾರ್ಯನಿರ್ವಹಿಸುತ್ತದೆ.

Written by - Yashaswini V | Last Updated : Jul 19, 2021, 02:42 PM IST
  • ಗರ್ಭಾವಸ್ಥೆಯಲ್ಲಿ, ಮಹಿಳೆಯರ ದೇಹದಲ್ಲಿ ಹಾರ್ಮೋನುಗಳು ಮತ್ತು ಚಿತ್ತಸ್ಥಿತಿಯ ಬದಲಾವಣೆಗಳು ಕಂಡುಬರುತ್ತವೆ
  • ಇದರೊಂದಿಗೆ ಹೆರಿಗೆಯ ನಂತರವೂ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ
  • ಈ ಸಂದರ್ಭದಲ್ಲಿ ಮಹಿಳೆಯರ ದೇಹವು ತುಂಬಾ ಸೂಕ್ಷ್ಮವಾಗಿರುತ್ತದೆ
Ajwain Water: ಹೆರಿಗೆಯ ನಂತರ ಮಹಿಳೆಯರಿಗೆ ಬಹಳ ಪ್ರಯೋಜನಕಾರಿ ಅಜ್ವೈನ್ ವಾಟರ್ title=
Ajwain Water Benefits

ಬೆಂಗಳೂರು: ಗರ್ಭಾವಸ್ಥೆಯಲ್ಲಿ ಮಹಿಳೆಯರ ದೇಹದಲ್ಲಿ ಅನೇಕ ರೀತಿಯ ಬದಲಾವಣೆ ಆಗುತ್ತವೆ.  ಗರ್ಭಾವಸ್ಥೆಯಲ್ಲಿ, ಮಹಿಳೆಯರ ದೇಹದಲ್ಲಿ ಹಾರ್ಮೋನುಗಳು ಮತ್ತು ಚಿತ್ತಸ್ಥಿತಿಯ ಬದಲಾವಣೆಗಳು ಕಂಡುಬರುತ್ತವೆ. ಇದರೊಂದಿಗೆ ಹೆರಿಗೆಯ ನಂತರವೂ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೆರಿಗೆಯ ನಂತರವೂ ಮಹಿಳೆಯರ ದೇಹದಲ್ಲಿ ಕೆಲವು ಬದಲಾವಣೆಗಳನ್ನು ಕಾಣಬಹುದು. ಜೊತೆಗೆ ಈ ಸಂದರ್ಭದಲ್ಲಿ  ಮಹಿಳೆಯರ ದೇಹವು ತುಂಬಾ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಹೆರಿಗೆಯ ನಂತರ ಮಹಿಳೆಯರು ಕೆಲವು ಮನೆಮದ್ದುಗಳನ್ನು ಅನುಸರಿಸಿದರೆ, ಅವರು ದೇಹವನ್ನು ಸದೃಢವಾಗಿರಿಸಿಕೊಳ್ಳಬಹುದು ಮತ್ತು ತೂಕವನ್ನು ಸಹ ಕಡಿಮೆ ಮಾಡಬಹುದು. ಅಂತಹ ಮನೆಮದ್ದುಗಳಲ್ಲಿ ಅಜ್ವೈನ್ ವಾಟರ್ ಕೂಡ ಒಂದು. ಹೆರಿಗೆಯ ಬಳಿಕ ಅಜ್ವೈನ್ ವಾಟರ್ (Ajwain Water) ಮಹಿಳೆಯರಿಗೆ ವಿಶೇಷ ಮೂಲಿಕೆಯಂತೆ ಕಾರ್ಯನಿರ್ವಹಿಸುತ್ತದೆ. 

ಅಜ್ವೈನ್ ನೀರಿನ ಪ್ರಯೋಜನಗಳ ಬಗ್ಗೆ ತಿಳಿಯೋಣ:-
ರಕ್ತವನ್ನು ಹೆಚ್ಚಿಸಿ-
ಮಹಿಳೆಯರ ದೇಹದಲ್ಲಿನ ರಕ್ತದ ಕೊರತೆಯನ್ನು ಪೂರೈಸಲು ಅಜ್ವೈನ್ ನೀರು (Ajwain Water) ತುಂಬಾ ಪ್ರಯೋಜನಕಾರಿ. ಇದನ್ನು ಸೇವಿಸುವುದರಿಂದ ರಕ್ತ ಪರಿಚಲನೆಗೆ ಒಳ್ಳೆಯದು. 

ಇದನ್ನೂ ಓದಿ - Mint Tea Health Tips: ಪ್ರತಿದಿನ ಮಲಗುವ ಮೊದಲು ಒಂದು ಕಪ್ ಪುದೀನ ಚಹಾ ಸೇವಿಸಿ ಈ ಪ್ರಯೋಜನ ಪಡೆಯಿರಿ

ಅನಿಲ- ಹೆರಿಗೆಯ ನಂತರ ಮಹಿಳೆಯರಿಗೆ ಅನಿಲ ಸಮಸ್ಯೆ ಉಂಟಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅಜ್ವೈನ್ ನೀರು ತುಂಬಾ ಪ್ರಯೋಜನಕಾರಿ (Ajwain Water Benefits) ಎಂದು ಸಾಬೀತುಪಡಿಸುತ್ತದೆ. 

ಎದೆಹಾಲನ್ನು ಹೆಚ್ಚಿಸಲು- ಡೆಲಿವರಿ ಬಳಿಕ ಮಹಿಳೆಯರು ಅಜ್ವೈನ್ ನೀರನ್ನು ಕುಡಿಯುವುದರಿಂದ ತಾಯಿಯ ಎದೆ ಹಾಲು ಹೆಚ್ಚಾಗುತ್ತದೆ. ಇದು ಹಾಲಿನ ಗುಣಮಟ್ಟವನ್ನೂ ಸುಧಾರಿಸುತ್ತದೆ.

ಇದನ್ನೂ ಓದಿ - Fruits astrology: ನಿಮ್ಮ ನೆಚ್ಚಿನ ಹಣ್ಣಿನಿಂದ ನಿಮ್ಮ ಸ್ವಭಾವವನ್ನು ತಿಳಿಯಬಹುದು

ತೂಕ ನಷ್ಟದಲ್ಲಿ ಪರಿಣಾಮಕಾರಿ- ಹೆರಿಗೆಯ ನಂತರ ಮಹಿಳೆಯರು ಹೆಚ್ಚಾಗಿ ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ತೂಕ ನಷ್ಟಕ್ಕೆ ಅಜ್ವೈನ್ ನೀರು ತುಂಬಾ ಪ್ರಯೋಜನಕಾರಿ. 

ಚಯಾಪಚಯವನ್ನು ಹೆಚ್ಚಿಸಲು- ಇದು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಕಾರ್ಬ್ ಮತ್ತು ಕೊಬ್ಬನ್ನು ಕರಗಿಸಲು ಸಹಾಯಕವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News