Prabhas: ಲಂಡನ್‌ನಲ್ಲಿ ಐಷಾರಾಮಿ ಮನೆ ಖರೀದಿಸಿದ ಟಾಲಿವುಡ್‌ ಯಂಗ್‌ ರೆಬಲ್‌ ಸ್ಟಾರ್!

Prabhas Luxury House: ತೆಲುಗು ಚಿತ್ರರಂಗದ ನಟ ಡಾರ್ಲಿಂಗ್‌ ಪ್ರಭಾಸ್‌ ತಾವು ಚಿತ್ರೀಕರಣಕ್ಕಾಗಿ ಲಂಡನ್‌ಗೆ ತೆರಳಿದಾಗ, ತಾವು ಅಲ್ಲಿ ಉಳಿದುಕೊಳ್ಳುತ್ತಿದ್ದ ಐಷಾರಾಮಿ ಮನೆಯನ್ನು ಕೋಟಿ ಕೋಟಿ ಹಣ ಹೂಡಿ ಖರೀಸಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Mar 28, 2024, 10:31 AM IST
  • ಪ್ರಭಾಸ್‌ ‘ಕಲ್ಕಿ 2898 AD’ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ವೇಳೆಯೇ ಲಂಡನ್‌ನಲ್ಲಿ ಐಷಾರಾಮಿ ಮನೆಯೊಂದನ್ನು ಖರೀದಿ ಮಾಡಿದ್ದಾರೆ.
  • ವಿದೇಶದಲ್ಲಿ ಪ್ರಾಪರ್ಟಿ ಖರೀದಿಸುವುದಕ್ಕೂ ಮುನ್ನ ಭಾರತದಲ್ಲಿ ಆಸ್ತಿಯನ್ನು ಪ್ರಭಾಸ್‌ ಮಾಡಿದ್ದಾರೆ.
  • ಪ್ರಭಾಸ್‌ ಹೈದರಾಬಾದ್‌ನ ನಗರದ ಹೊರಗೆ ಕೂಲ್ ಆಗಿ ಇರಲು 2 ಎಕರೆ ಜಾಗವನ್ನು ಖರೀದಿಸಿದ್ದರು.
Prabhas: ಲಂಡನ್‌ನಲ್ಲಿ ಐಷಾರಾಮಿ ಮನೆ ಖರೀದಿಸಿದ ಟಾಲಿವುಡ್‌ ಯಂಗ್‌ ರೆಬಲ್‌ ಸ್ಟಾರ್! title=

Prabhas Purchased Luxury House In London: ಟಾಲಿವುಡ್‌ ಯಂಗ್‌ ರೆಬಲ್‌ ಸ್ಟಾರ್‌ ಪ್ರಭಾಸ್‌ ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕೆಂಗಟ್ಟ ನಟ, ಕಳೆದ ವರ್ಷ ತೆರೆಕಂಡ ಸಲಾರ್‌ ಸಿನಿಮಾ ಮೂಲಕ ಮತ್ತೆ  ಗೆಲುವನ್ನು ಕಂಡಿದ್ದಾರೆ. ಇದೀಗ ಈ ನಟ ‘ಕಲ್ಕಿ 2898 AD’ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ವೇಳೆಯೇ ಲಂಡನ್‌ನಲ್ಲಿ ಐಷಾರಾಮಿ ಮನೆಯೊಂದನ್ನು ಖರೀದಿ ಮಾಡಿದ್ದಾರೆ. 

ನಟ ಪ್ರಭಾಸ್‌ ಈ ಹಿಂದೆ ಲಂಡನ್‌ಗೆ ಚಿತ್ರಗಳ ಶೂಟಿಂಗ್‌ಗೆ, ವಿಹಾರಕ್ಕೆ ಹೋದಾಗಲೆಲ್ಲಾ ತಾವು ಇದೀಗ ತೆಗೆದುಕೊಂಡು ಅದೇ ಮನೆಯಲ್ಲಿ ಇರುತ್ತಿದ್ದರು. ಅಷ್ಟೇ ಅಲ್ಲದೇ ಮುಂಚೆ ಆ ಮನೆಗೆ ಕೋಟಿಗಳವರೆಗೆ  ಬಾಡಿಗೆಯನ್ನು ಕೂಡ ಕಟ್ಟಿದ್ದಾರೆ. ಸದ್ಯ ಈ ನಟ ಕೋಟಿ ಕೋಟಿ ಹಣ ಕೊಟ್ಟು ಆ ಐಷಾರಾಮಿ ಮನೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿದೇಶದಲ್ಲಿ ಪ್ರಾಪರ್ಟಿ ಖರೀದಿಸುವುದಕ್ಕೂ ಮುನ್ನ ಭಾರತದಲ್ಲಿ ಆಸ್ತಿಯನ್ನು ಪ್ರಭಾಸ್‌ ಮಾಡಿದ್ದಾರೆ.

ಇದನ್ನೂ ಓದಿ: Siddharth-Aditi Rao: ಸದ್ದಿಲ್ಲದೆ ಎರಡನೇ ಮದುವೆಯಾದ ನಟ ಸಿದ್ಧಾರ್ಥ್‌ ಮೊದಲ ಪತ್ನಿ ಇವರೇ..! ಯಾವ ಹಿರೋಯಿನ್‌ಗೂ ಕಡಿಮೆಯಿಲ್ಲ ಈ ಚೆಲುವೆ!!

ಹೌದು.. ಹೈದರಾಬಾದ್‌ನಲ್ಲಿ ಐಷಾರಾಮಿ ಮನೆ ಇರುವ ಪ್ರಭಾಸ್‌ , ಭೂಮಿಯ ಮೇಲೆಯೂ ತಮ್ಮ ಹಣವನ್ನು ಹೂಡಿದ್ದಾರೆ. ಹೈದರಾಬಾದ್‌ನ ನಗರದ ಹೊರಗೆ ಕೂಲ್ ಆಗಿ ಇರಲು 2 ಎಕರೆ ಜಾಗವನ್ನು ಖರೀದಿಸಿದ್ದರು. ಇದೀಗ ಈ ಜಾಗದ ಮೌಲ್ಯ ಸುಮಾರು 120 ಕೋಟಿ ಆಗಿದೆ. 20 ಕೋಟಿ ಕೊಟ್ಟು ಖರೀದಿಸಿದ ಈ ಭೂಮಿಯಲ್ಲಿ ಪ್ರಭಾಸ್‌ 200 ಕೋಟಿ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಲು ತಯಾರಾಗಿದ್ದಾರೆ ಎನ್ನಲಾಗ್ತಿದೆ.

ಪ್ರಭಾಸ್‌ ತೆಲಾಂಗಣದಲ್ಲಿ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿಯೂ ಮನೆಯನ್ನು ಪರ್ಚೇಸ್‌ ಮಾಡಿದ್ದಾರೆ. ಚೆನ್ನೈ, ಬೆಂಗಳೂರಿನಂತಹ ನಗರಗಳಲ್ಲಿ ಮನೆಗಳನ್ನು ಖರೀದಿಸಿದಲ್ಲದೇ,  ಪ್ರಭಾಸ್‌ ಗ್ರಾನೈಟ್ ಫ್ಯಾಕ್ಟರಿಯನ್ನು ಕೂಡ ಹೊಂದಿದ್ದಾರೆ ಎನ್ನಲಾಗ್ತಿದೆ. ಈ ನಟ ವಿವಿಧ ಜಮೀನಿನಲ್ಲಿ ಕೃಷಿ  ಫಾರ್ಮ್‌, ತೆಂಗಿನ ತೋಟಗಳು, ತೋಟದ ಮನೆಗಳು ಮತ್ತು ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳೂ ಸಹ ಇವರ ಹೆಸರಲ್ಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News