Yash: ಸೋಷಿಯಲ್‌ ಮೀಡಿಯಾದಲ್ಲಿ #Yash19 ಟ್ರೆಂಡಿಂಗ್‌.! ಏನಿದು?

#Yash19: ಕೆಜಿಎಫ್‌ ಚಾಪ್ಟರ್‌ 2 ಬಳಿಕ ಯಶ್‌ ಮುಂದ್ಯಾವ ಸಿನಿಮಾ ಮಾಡ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ #Yash19 ಎಂಬ ಹ್ಯಾಶ್‌ ಟ್ಯಾಗ್‌ ಸಖತ್ ಟ್ರೆಂಡ್‌ ಆಗುತ್ತಿದೆ. 

Written by - Chetana Devarmani | Last Updated : Jul 10, 2022, 06:02 PM IST
  • ಸೋಷಿಯಲ್‌ ಮೀಡಿಯಾದಲ್ಲಿ #Yash19 ಟ್ರೆಂಡಿಂಗ್‌.!
  • ರಾಕಿಂಗ್‌ ಸ್ಟಾರ್‌ ಯಶ್‌ ಮುಂದಿನ ಸಿನಿಮಾ ಬಗ್ಗೆ ಇಂಟರೆಸ್ಟಿಂಗ್‌ ಮಾಹಿತಿ
  • ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಜೊತೆ ಯಶ್ ಸಿನಿಮಾ?
Yash: ಸೋಷಿಯಲ್‌ ಮೀಡಿಯಾದಲ್ಲಿ #Yash19 ಟ್ರೆಂಡಿಂಗ್‌.! ಏನಿದು? title=
ಯಶ್

#Yash19: ಜಗತ್ತಿನಾಂದ್ಯಂತ ಕೆಜಿಎಫ್‌ ಚಾಪ್ಟರ್‌ 2 ಯಶಸ್ಸಿನ ಬಳಿಕ ರಾಕಿಂಗ್‌ ಸ್ಟಾರ್‌ ಯಶ್‌ ಮುಂದಿನ ಸಿನಿಮಾ ಬಗ್ಗೆ ಇಂಟರೆಸ್ಟಿಂಗ್‌ ಮಾಹಿತಿ ಹರಿದಾಡುತ್ತಿದೆ. ಯಶ್‌ ಮುಂದಿನ ಸಿನಿಮಾ ಯಾವುದೆಂದು ಕಾತುರರಾಗಿದ್ದ ಫ್ಯಾನ್ಸ್‌ಗೆ ಈ ಹ್ಯಾಶ್‌ ಟ್ಯಾಗ್‌ ತಲೆಗೆ ಹುಳ ಬಿಟ್ಟಿದೆ. ಈ ಗಾಗಲೇ 18 ಚಿತ್ರಗಳಲ್ಲಿ ಅಭಿನಯಿಸಿರುವ ಯಶ್‌ ಅವರ 19 ನೇ ಸಿನಿಮಾ ಯಾವುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. 

ಇದನ್ನೂ ಓದಿ: 777 charlie Deleted Scene: ಚಾರ್ಲಿ ಸಿನಿಮಾದಲ್ಲಿ ಡಿಲೀಟ್‌ ಮಾಡಿದ ಸೀನ್‌ ಇದೇ ನೋಡಿ!!

ಯಶ್ ಹೊಸ ಸಿನಿಮಾದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಯಶ್ ಮುಂದಿನ ಸಿನಿಮಾ ತೆಲುಗು ಸ್ಟಾರ್ ನಿರ್ದೇಶಕರ ಜೊತೆ ಮಾಡುತ್ತಿದ್ದಾರೆ, ಯಶ್ ಸಿನಿಮಾಗೆ ಪರಭಾಷೆಯ ಖ್ಯಾತ ನಿರ್ಮಾಪಕರು ಬಂಡವಾಳ ಹೂಡುತ್ತಿದ್ದಾರೆ, ಬಾಲಿವುಡ್, ಕಾಲಿವುಡ್ ನಿರ್ದೇಶಕರ ಜೊತೆ ಸಿನಿಮಾ ಮಾಡುತ್ತಾರೆ ಹೀಗೆ ಅಂತೆ ಕಂತೆಗಳ ಕಥೆ ಎಲ್ಲೆ ಹರಿದಾಡುತ್ತಿವೆ. ಆದರೆ ಯಶ್ ಮಾತ್ರ ಈ ಬಗ್ಗೆ ಯಾವುದೇ  ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. 

ಇದೀಗ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. #Yash19 ಎಂದು ಬರೆದು ಹ್ಯಾಟ್ ಹಾಕಿ ವೈರಲ್ ಮಾಡುತ್ತಿದ್ದಾರೆ. ಆದರೆ ಎಷ್ಟೇ ವೈರಲ್‌ ಆದರೂ ಯಶ್‌ ಮಾತ್ರ ಈ ಬಗ್ಗೆ ಮೌನ ಮುರಿದಿಲ್ಲ. 

ಸದ್ಯ ಎಲ್ಲೆಡೆ ಹರಿದಾಡುತ್ತಿರುವ ಮಾಹಿತಿ ಪ್ರಕಾರ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಜೊತೆ ಯಶ್ ಸಿನಿಮಾ ಮಾಡಲಿದ್ದಾರಂತೆ. ಈ ಸಿನಿಮಾಗೆ ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಬಂಡವಾಳ ಹಾಕಲಿದ್ದಾರಂತೆ. ಆದರೆ ಇದ್ಯಾವುದರ ಬಗ್ಗೆಯೂ ಯಶ್ ಸ್ಪಷ್ಟನೆ ಮಾತ್ರ ನೀಡಿಲ್ಲ. 

ಇದನ್ನೂ ಓದಿ: Vikrant Rona: ಆಪರೇಷನ್‌ ಥಿಯೇಟರ್‌ನಲ್ಲೂ ರಕ್ಕಮ್ಮನದ್ದೇ ಹವಾ!

ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ #Yash19 ಟ್ರೆಂಡಿಂಗ್‌ನಲ್ಲಿದೆ. ಯಶ್‌ ಮುಂದಿನ ಸಿನಿಮಾ ಇನ್ನೇನು ಘೋಷಣೆ ಆಗಲಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಗಾಸಿಪ್‌ಗಳು ಹುಟ್ಟಿಕೊಳ್ಳುತ್ತಿವೆ. ಯಶ್‌ ಮುಂದಿನ ಸಿನಿಮಾ ಯಾವುದು ಎಂದು ಕಾದು ನೋಡಬೇಕಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News