ರಾಜ್ಯೋತ್ಸವಕ್ಕೆ ರಾಕಿಬಾಯ್ ರೀಎಂಟ್ರಿ ಫಿಕ್ಸ್‌..! ಆದರೆ ನಿಮ್ಮ ನಿರೀಕ್ಷೆಯಂತಲ್ಲ...

Yash Re-Entry on Rajyotsava: ರಾಕಿಬಾಯ್ ಅಭಿಮಾನಿಗಳು ಸದ್ಯ ಯಶ್19‌ ಚಿತ್ರದ ಅಪ್‌ಡೇಟ್‌ಗಾಗಿ ಬಕಪಕ್ಷಯಂತೆ ಕಾದು ಕುಳಿತಿದ್ದಾರೆ. ಆದರೆ ಯಶ್‌ ಮುಂದಿನ ಚಿತ್ರ ಘೋಷಣೆಯಾಗುತ್ತೋ ಇಲ್ಲವೋ ಆದರೆ ಇದೀಗ ಅಭಿಮಾನಿಗಳಿಗಂತೂ ಭರ್ಜರಿ ಗಿಫ್ಟ್ ಸಿಕ್ತಿದೆ. 

Written by - Savita M B | Last Updated : Oct 31, 2023, 12:38 PM IST
  • ಕಳೆದ ವರ್ಷ ಏಪ್ರಿಲ್ 14ಕ್ಕೆ 'KGF- 2' ಬಿಡುಗಡೆಯಾಗಿ ಭರ್ಜರಿ ಗೆಲುವು ಸಾಧಿಸಿತ್ತು
  • ಅಲ್ಲಿಂದ ಇಲ್ಲಿಯವರೆಗೂ ಯಶ ಯಾವುದೇ ಸಿನಿಮಾಗೆ ಗ್ರೀನ್‌ ಸಿಗ್ನಲ್‌ ನೀಡಿರಲಿಲ್ಲ
  • ಆದರೆ ರಾಜ್ಯೋತ್ಸವಕ್ಕೆ ರಾಕಿಬಾಯ್ ರೀಎಂಟ್ರಿ ಕನ್ಫರ್ಮ್‌ ಎಂದು ಹೇಳಲಾಗುತ್ತಿದೆ.
ರಾಜ್ಯೋತ್ಸವಕ್ಕೆ ರಾಕಿಬಾಯ್ ರೀಎಂಟ್ರಿ ಫಿಕ್ಸ್‌..! ಆದರೆ ನಿಮ್ಮ ನಿರೀಕ್ಷೆಯಂತಲ್ಲ... title=

Rocking Star Yash: ಕಳೆದ ವರ್ಷ ಏಪ್ರಿಲ್ 14ಕ್ಕೆ 'KGF- 2' ಬಿಡುಗಡೆಯಾಗಿ ಭರ್ಜರಿ ಗೆಲುವು ಸಾಧಿಸಿತ್ತು. ಅಲ್ಲಿಂದ ಇಲ್ಲಿಯವರೆಗೂ ಯಶ ಯಾವುದೇ ಸಿನಿಮಾಗೆ ಗ್ರೀನ್‌ ಸಿಗ್ನಲ್‌ ನೀಡಿರಲಿಲ್ಲ. ಆದರೆ ರಾಕಿಬಾಯ್‌ ಮುಂದಿನ ಸಿನಿಮಾ ಇದೇ.. ಅವರ ಮುಂದಿನ ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಆಕ್ಷನ್ ಕಟ್ ಹೇಳಲಿದ್ದಾರೆ.. ಯಶ್‌ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಾರೆ.. ಹೀಗೆ ಸಾಕಷ್ಟು ಸುದ್ದಿಗಳು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದ್ದವು. 

ಸದ್ಯ ಮುಂಬರುವ ರಾಜ್ಯೋತ್ಸವಕ್ಕಾದರೂ ಯಶ್‌ ಮುಂದಿನ ಸಿನಿಮಾ ಅನೌನ್ಸ್‌ ಆಗುತ್ತೆ ಅನ್ನೋ ಖುಷಿಯಲ್ಲಿದ್ದ ಫ್ಯಾನ್ಸ್‌ಗೆ ಅವರ ಆಸೆಯಂತೂ ಈಡೇರಲಿಲ್ಲ ಆದರೆ ರಾಜ್ಯೋತ್ಸವಕ್ಕೆ ರಾಕಿಬಾಯ್ ರೀಎಂಟ್ರಿ ಕನ್ಫರ್ಮ್‌ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ-ನಟಿ ಅಮಲಾ ಪೌಲ್ ಎರಡನೇ ಮದುವೆ ಆಗ್ತಿರೋ ಈ ವ್ಯಕ್ತಿ ಯಾರು ಗೊತ್ತಾ?

ಹೌದು ನವೆಂಬರ್ 1ರಂದು ರಾಜ್ಯೋತ್ಸವ ಸಂಭ್ರಮದಲ್ಲಿ 'KGF-2' ಸಿನಿಮಾ ಪ್ರದರ್ಶನ ಕಾಣಲಿದ್ದು, ಕೆಲವು ಆಯ್ದ ಥಿಯೇಟರ್‌ಗಳಲ್ಲಿ ಮತ್ತೊಮ್ಮೆ ರಾಕಿ ಬಾಯ್‌ ಘರ್ಜಿಸಲಿದ್ದಾರೆ. ಈಗಾಗಲೇ ಫ್ರೀ ಬುಕ್ಕಿಂಗ್‌ ಸಹ ಆರಂಭವಾಗಿದೆ. ಜೆಸಿ ರಸ್ತೆಯ ಸ್ವಾಗತ್ ಪೂರ್ಣಿಮಾ, ವಿವೇಕ್ ನಗರದ ಶ್ರೀ ಬಾಲಾಜಿ ಸೇರಿದಂತೆ ನಗರದ ಕೆಲ ಚಿತ್ರಮಂದಿರಗಳಲ್ಲಿ ಕನ್ನಡದ ಕೆಜಿಎಫ್‌ ಸಿನಿಮಾ ರಿ ರಿಲೀಸ್‌ ಆಗಲಿದೆ. 

ಸಂಚಲನ ಸೃಷ್ಟಿಸಿದ ಎರಡು ಸರಣಿ ಸಿನಿಮಾಗಳು ಇದೀಗ ಮತ್ತೆ ರಿಲೀಸ್‌ ಆಗುತ್ತಿರುವುದು ಅಭಿಮಾನಿಗಳಿಗೆ ಹಬ್ಬದೂಟ ಹಾಕಿದಂತಾಗಿದೆ. ಯಶ್19‌ ಅಪ್ ಡೇಟ್‌ಗಾಗಿ ಹಂಬಲಿಸುತ್ತಿದ್ದ ಫ್ಯಾನ್ಸ್‌ ನಿರಾಸೆ ಆಗಿಲ್ಲ. ರಾಜ್ಯೋತ್ಸವಕ್ಕೆ ಯಾವ ಸ್ಟಾರ್‌ ಹಿರೋ ಚಿತ್ರಗಳು ರಿಲೀಸ್‌ ಆಗಿರದೇ ಇರುವ ಕಾರಣಕ್ಕೆ ಈ ಚಿತ್ರವನ್ನು ಮರುಬಿಡುಗಡೆ ಮಾಡಲಾಗುತ್ತಿದೆ. 

ಇದನ್ನೂ ಓದಿ-ಮೇಜರ್ ಸರ್ಜರಿ ಮುಗಿಸಿರುವ ಪ್ರಭಾಸ್ ಯೂರೋಪ್ ನಿಂದ ಬರೋದು ಯಾವಾಗ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News