Video: ಯಶ್, ರಾಧಿಕಾ ಮುದ್ದು ಮಗಳ ನಾಮಕರಣ: ಹೆಸರು ಏನು ಗೊತ್ತೇ?

ಭಾನುವಾರ(ಜೂನ್ 23) ಯಶ್ ಪುತ್ರಿಗೆ ನಾಮಕರಣ ಮಾಡಲಾಯಿತು.

Last Updated : Jun 24, 2019, 09:04 AM IST
Video: ಯಶ್, ರಾಧಿಕಾ ಮುದ್ದು ಮಗಳ ನಾಮಕರಣ: ಹೆಸರು ಏನು ಗೊತ್ತೇ? title=
Pic Courtesy: Facebook@TheOfficialYash

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ತಮ್ಮ ಪುತ್ರಿಗೆ ಯಾವ ಹೆಸರಿಡಬಹುದು ಎಂಬ ಕುತೂಹಲಕ್ಕೆ ಸದ್ಯ ತೆರೆಬಿದ್ದಿದ್ದು, ಮುದ್ದು ಮಗಳಿಗೆ ವಿಭಿನ್ನ ಹೆಸರಿಟ್ಟು ಯಶ್-ರಾಧಿಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಭಾನುವಾರ(ಜೂನ್ 23) ಮುದ್ದಿನ ಮಗಳಿಗೆ ನಾಮಕರಣ ಮಾಡಿದ ಯಶ್-ರಾಧಿಕಾ ದಂಪತಿ ಪುತ್ರಿಗೆ 'ಐರಾ ಯಶ್'  (AYRA) ಎಂದು ಹೆಸರಿಟ್ಟಿದ್ದಾರೆ. ಐರಾ ಎಂದರೆ ಗೌರವಾನ್ವಿತ ಎಂದು ಅರ್ಥವಿದೆ. 

ಭಾನುವಾರ ತಾಜ್‌ ವೆಸ್ಟೆಂಡ್‌ನ‌ಲ್ಲಿ ನಡೆದ ನಾಮಕರಣ ಸಮಾರಂಭದಲ್ಲಿ ಯಶ್‌, ರಾಧಿಕಾ ದಂಪತಿ ಪೋಷಕರು, ಕುಟುಂಬದವರು ಮತ್ತು ಚಿತ್ರರಂಗದ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು.

ನಮ್ಮದೇ ಉಸಿರಿನ ಮಗಳೆಂಬ ಕನಸಿಗೆ ಇಂದು ಹೆಸರಿಟ್ಟ ಸಂಭ್ರಮ ಹರಸಿ ಹಾರೈಸಿ ಎಂದು ರಾಕಿ  ಭಾಯ್ ಮಗಳ ನಾಮಕರಣದ ವಿಡಿಯೋ ಹಂಚಿಕೊಂಡಿದ್ದಾರೆ.

Trending News