Yash: ರಾಕಿಂಗ್‌ ಸ್ಟಾರ್ ನ್ಯೂ ಸಿನಿಮಾ.. ʼಟಾಕ್ಸಿಕ್‌ʼ ಟೈಟಲ್‌ ವಿಡಿಯೋದಲ್ಲಿ ಇವುಗಳನ್ನು ಗಮನಿಸಿದ್ದೀರಾ?

Toxic Title Video: ರಾಕಿಂಗ್‌ ಸ್ಟಾರ್ ಯಶ್ ಅವರ ಹೊಸ ಸಿನಿಮಾ ಅನೌನ್ಸ್ ಆಗಿದ್ದು.. ನಿನ್ನೆ ಚಿತ್ರದ ಟೈಟಲ್‌ ಹಾಗೂ ಗ್ಲಿಂಪ್ಸ್‌ಗಳನ್ನು ರಿಲೀಸ್‌ ಮಾಡಲಾಗಿದೆ.. ಆದರೆ ಅದರಲ್ಲಿ ಕೆಲವು ಆಸಕ್ತಿದಾಯಕ ಸಂಗತಿಗಳಿವೆ ಎಂಬುದನ್ನು ನೀವು ಗಮನಿಸಿದ್ದೀರಾ?   

Written by - Savita M B | Last Updated : Dec 9, 2023, 10:45 AM IST
  • ಯಶ್ ಅಭಿನಯದ `ಕೆಜಿಎಫ್' ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ ಕಳೆದದೆ..
  • ಹೊಸ ಸಿನಿಮಾ ಅಪ್‌ಡೇಟ್‌ ಆಗದೇ ಇರುವುದರಿಂದ ಅಭಿಮಾನಿಗಳೆಲ್ಲ ನಿರಾಸೆಗೊಂಡಿದ್ದರು
  • ಈ ಹಿನ್ನೆಲೆಯಲ್ಲಿ ಯಶ್ ಲೇಟ್‌ ಆಗಿ ಲೇಟೆಸ್ಟ್ ಎಂಟ್ರಿ ಕೊಟ್ಟಿದ್ದಾರೆ..
Yash: ರಾಕಿಂಗ್‌ ಸ್ಟಾರ್ ನ್ಯೂ ಸಿನಿಮಾ.. ʼಟಾಕ್ಸಿಕ್‌ʼ ಟೈಟಲ್‌ ವಿಡಿಯೋದಲ್ಲಿ ಇವುಗಳನ್ನು ಗಮನಿಸಿದ್ದೀರಾ? title=

Toxic: ಯಶ್ ಅಭಿನಯದ `ಕೆಜಿಎಫ್' ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ ಕಳೆದರೂ ಹೊಸ ಸಿನಿಮಾ ಅಪ್‌ಡೇಟ್‌ ಆಗದೇ ಇರುವುದರಿಂದ ಅಭಿಮಾನಿಗಳೆಲ್ಲ ನಿರಾಸೆಗೊಂಡಿದ್ದರು.. ಈ ಹಿನ್ನೆಲೆಯಲ್ಲಿ ಯಶ್ ಲೇಟ್‌ ಆಗಿ ಲೇಟೆಸ್ಟ್ ಎಂಟ್ರಿ ಕೊಟ್ಟಿದ್ದಾರೆ.. 

ಇತ್ತೀಚೆಗಷ್ಟೇ ಯಶ್‌ ತಮ್ಮ ಹೊಸ ಸಿನಿಮಾವನ್ನು ಅನೌನ್ಸ್‌ ಮಾಡಿದ್ದು ಗೊತ್ತೇ ಇದೆ. ಸದ್ಯ ಟೈಟಲ್‌ ಜೊತೆಗೆ ಸಣ್ಣ ಗ್ಲಿಂಪ್ಸ್‌ಗಳನ್ನು ರಿಲೀಸ್‌ ಮಾಡಿದ್ದಾರೆ... ಇದರ ಟ್ಯಾಗ್ ಲೈನ್ ``ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್''... 

ಇದನ್ನೂ ಓದಿ-ಪರಿಶುದ್ಧ ಮನೋರಂಜನೆಯ ರಸದೌತಣ ಬಡಿಸಲು ಬರುತ್ತಿದ್ದಾರೆ "ಬ್ಯಾಕ್ ಬೆಂಚರ್ಸ್" 

ಈ ಚಿತ್ರ ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ... ಭಾರೀ ಬಜೆಟ್‌ನಲ್ಲಿ ತಯಾರಾಗಲಿದ್ದು.. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ಯಶ್‌ ಸಿನಿಮಾ ನಿರ್ಮಾಣವಾಗುತ್ತಿದೆ.. 

ಇತ್ತೀಚೆಗಷ್ಟೇ ಈ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದ್ದು.. ಏಪ್ರಿಲ್ 10, 2025 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.. ಆದರೆ, ಇದರಲ್ಲಿ ಹಲವು ಕುತೂಹಲಕಾರಿ ಸಂಗತಿಗಳು ಬಹಿರಂಗವಾಗಿವೆ. 

ಇದನ್ನೂ ಓದಿ-ಈ ಕ್ರಿಕೆಟಿಗನ ಪ್ರೀತಿ ನಂಬಿ 30ನೇ ವಯಸ್ಸಿಗೆ ಮದುವೆಯಾಗದೆ ಗರ್ಭಿಣಿಯಾದ ನಟಿ..!

ರಿಲೀಸ್‌ ಮಾಡಲಾದ ಟೈಟಲ್‌ ವಿಡಿಯೋದಲ್ಲಿ ಜೋಕರ್ ಚಿಹ್ನೆ ಕಾಣಿಸಿಕೊಂಡಿದೆ.. ಹೀಗಾಗಿ ಫ್ಯಾನ್ಸ್‌ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿಕೊಂಡಿದ್ದಾರೆ.. ಇದಲ್ಲದೆ, ಯಶ್ ಪಾತ್ರದ ಗೆಟಪ್ ಸಹ ರಿವೀಲ್‌ ಆಗಿದ್ದು.. ಕೆಜಿಎಫ್‌ ಚಿತ್ರದಲ್ಲಿರುವಂತೆ ರಾಕಿಬಾಯ್‌ ಮಾಸ್‌ ಹಾಗೂ ಕ್ಲಾಸ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.. 

ಈ ಚಿತ್ರದ ಬಗ್ಗೆ ನಿರ್ದೇಶಕಿ ಗೀತು ಮೋಹನ್ ದಾಸ್ ಮಾತನಾಡಿ, "ನಾನು ಯಾವಾಗಲೂ ಹೊಸ ರೀತಿಯಲ್ಲಿ ಕಥೆ ಪ್ರಯೋಗ ಮಾಡುತ್ತೇನೆ. ನನ್ನ ನಿರ್ದೇಶನದಲ್ಲಿ ಮೂಡಿಬಂದ `ಲೈಯರ್ಸ್' ಮತ್ತು `ಮೂತನ್' ಚಿತ್ರಗಳು ಅಂತರಾಷ್ಟ್ರೀಯ ಖ್ಯಾತಿ ಗಳಿಸಿದವು. ನಮ್ಮ ದೇಶದ ಪ್ರೇಕ್ಷಕರು ಇಂತಹ ವಿಭಿನ್ನ ನಿರೂಪಣೆಯನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ತಿಳಿಯಲು ನನಗೆ ಯಾವಾಗಲೂ ಕುತೂಹಲವಿದೆ. ಅಂತಹ ಆಲೋಚನೆಗಳಿಂದ ಈ ಸಿನಿಮಾ ಹುಟ್ಟಿದೆ. ಕಥೆಯು ಎರಡು ವಿಭಿನ್ನ ಪ್ರಪಂಚಗಳ ಸಂಯೋಜನೆಯಾಗಿದ್ದು.. ಈ ಕಥೆಗೆ ಯಶ್ ಸೂಕ್ತ.. ಅವರೊಬ್ಬ ಅದ್ಭುತ ವ್ಯಕ್ತಿ.. ಇಲ್ಲಿಯವರೆಗೆ ಅಂತಹ ವ್ಯಕ್ತಿಯನ್ನು ನಾನು ನೋಡಿಲ್ಲ.. ಅವನೊಂದಿಗೆ ಈ ಸಿನಿಮಾ ಮಾಡಲು ನಾನು ಬಾರೀ ಉತ್ಸುಕಳಾಗಿದ್ದೇನೆ" ಎಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News