Yash Toxic Movie : ಯಶ್‌ 19 ಟೈಟಲ್‌ ರಿವೀಲ್..!‌ ರಾಕಿ ಭಾಯ್‌ ಫ್ಯಾನ್ಸ್‌ ಫುಲ್‌ ಖುಷ್!

Yash 19: ರಾಕಿಂಗ್‌ ಸ್ಟಾರ್‌ ಯಶ್ ʻಯಶ್‌ 19ʼ ಚಿತ್ರದ ಟೈಟಲ್‌ ರೀವಿಲ್‌ ಆಗಿದೆ. ಹಾಗಾದ್ರೆ ಯಶ್‌ 19ನೇ ಚಿತ್ರದ ಟೈಟಲ್‌ ಏನು? ಯಾರು ಆಕ್ಷನ್‌ ಕಟ್‌ ಹೇಳ್ತಾಯಿದ್ದಾರೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್.‌

Written by - Zee Kannada News Desk | Last Updated : Dec 8, 2023, 12:05 PM IST
  • ಯಶ್ ‘ಕೆಜಿಎಫ್ 2’ ಸಿನಿಮಾ 2022ರ ಏಪ್ರಿಲ್‌ನಲ್ಲಿ ರಿಲೀಸ್ ಆದ ಮೇಲೆ, ಬಳಿಕ ಯಶ್ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ವದಂತಿಗಳು ಹುಟ್ಟಿಕೊಂಡವು.
  • ನಟ ಯಶ್‌ನ 19ನೇ ಚಿತ್ರಗಾಗಿ ಫ್ಯಾನ್ಸ್ ಕಾಯುತ್ತಲೇ ಇದ್ದು, ಕೊನೆಗೂ ಈ ವಿಚಾರ ರಿವೀಲ್ ಆಗಿದೆ.
  • ಈ ಸಿನಿಮಾ ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಅದಕ್ಕೆ ಸೂಕ್ತ ಆಗುವಂಥ ಟೈಟಲ್‌ನ್ನ ಫೈನಲ್ ಮಾಡಲಾಗಿದೆ.
Yash Toxic Movie : ಯಶ್‌ 19 ಟೈಟಲ್‌ ರಿವೀಲ್..!‌ ರಾಕಿ ಭಾಯ್‌ ಫ್ಯಾನ್ಸ್‌ ಫುಲ್‌ ಖುಷ್! title=

Yash 19 Title Revealed: ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್‌ ಯಶ್‌ ಸಿನಿಮಾದ ಅಪ್ಡೇಟ್ಸ್‌ಗಾಗಿ  ಕಾಯುತ್ತಿದ್ದು, ಈ ನಟನ ಹೊಸ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸದ್ಯ ಫ್ಯಾನ್ಸ್‌ಗೆ ಸೂಪರ್ ಆಗಿರುವ ಟೀಸರ್ ಸಿಕ್ಕಿದ್ದಯ, ಇದರಲ್ಲಿ ಸಿನಿಮಾ ನಿರ್ದೇಶಕರು, ನಿರ್ಮಾಪಕರು, ನಟ ಯಶ್ ಝಲಕ್ ಕೂಡಾ ರಿವೀಲ್ ಆಗಿದ್ದು, ಯಶ್ ಅವರ  ಸ್ವರೂಪವನ್ನು ಈ ಟೀಸರ್​ನಲ್ಲಿ ತೋರಿಸಿದ್ದಾರೆ.

ಯಶ್ ‘ಕೆಜಿಎಫ್ 2’ ಸಿನಿಮಾ 2022ರ ಏಪ್ರಿಲ್‌ನಲ್ಲಿ ರಿಲೀಸ್ ಆದ ಮೇಲೆ, ಬಳಿಕ ಯಶ್ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ವದಂತಿಗಳು ಹುಟ್ಟಿಕೊಂಡವು. ಡೈರೆಕ್ಟರ್‌ ನರ್ತನ್ ‘ಯಶ್ 19’ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದ್ದು, ಆದರೆ ಅದು ನಡೆಯಲಿಲ್ಲ. ಈಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ‘ಕೆಜಿಎಫ್ 2’ ರಿಲೀಸ್ ಆಗಿ ಒಂದೂವರೆ ವರ್ಷದ ಬಳಿಕ ಯಶ್ ಹೊಸ ಚಿತ್ರದ ಟೈಟಲ್ ಘೋಷಣೆ ಆಗಿದೆ.

ಇದ್ನನೂ ಓದಿ: ಸಿಕ್ಕೇಬಿಡ್ತು ಯಶ್‌ 19 ಅಪ್‌ಡೇಟ್‌: ತೂಫಾನ್ ಹುಟ್ಟುಹಬ್ಬಕ್ಕೆ ಸಿಗಲಿದೆ ಫ್ಯಾನ್ಸ್‌ಗೆ ಸಿಹಿಸುದ್ದಿ!

ಹೌದು.. ನಟ ಯಶ್‌ನ 19ನೇ ಚಿತ್ರಗಾಗಿ ಫ್ಯಾನ್ಸ್ ಕಾಯುತ್ತಲೇ ಇದ್ದು, ಕೊನೆಗೂ ಈ ವಿಚಾರ ರಿವೀಲ್ ಆಗಿದೆ. ‘Yash 19’ ಚಿತ್ರಕ್ಕೆ ‘ಟಾಕ್ಸಿಕ್’ ಎಂದು ಟೈಟಲ್ ಇಡಲಾಗಿದ್ದು, ಈ ಟೈಟಲ್ ನೊಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರೋ ಕಾರಣಕ್ಕೆ ಈ ಚಿತ್ರಕ್ಕೆ ಟೈಟಲ್ ಸೂಕ್ತ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಚಿತ್ರಕ್ಕೆ ಗೀತು ಮೋಹನ್​ದಾಸ್  ನಿರ್ದೇಶನ ಮಾಡುತ್ತಿದ್ದು, ಈ  ಟೈಟಲ್ ನೋಡಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.

 

 
 
 
 

 
 
 
 
 
 
 
 
 
 
 

A post shared by Yash (@thenameisyash)

‘ಟಾಕ್ಸಿಕ್’ ಸಿನಿಮಾದ ಹಿನ್ನೆಲೆ ಸಂಗೀತ ಕೂಡ ಗಮನ ಸೆಳೆದಿದ್ದು, ಈ ಚಿತ್ರದ ರಿಲೀಸ್ ದಿನಾಂಕವನ್ನೂ ರಿವೀಲ್ ಮಾಡಲಾಗಿದೆ. ‘ಟಾಕ್ಸಿಕ್’ ಸಿನಿಮಾ 10-4-2025ರಂದು ಸಿನಿಮಾ ಥಿಯೇಟರ್​ನಲ್ಲಿ ರಿಲೀಸ್ ಆಗಲಿದ್ದು, ಸದ್ಯ ಟ್ವಿಟರ್​ನಲ್ಲಿ  #Toxic ಹ್ಯಾಶ್​ಟ್ಯಾಗ್ ಟ್ರೆಂಡ್ ಆಗುತ್ತಿದೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಅದಕ್ಕೆ ಸೂಕ್ತ ಆಗುವಂಥ ಟೈಟಲ್‌ನ್ನ ಫೈನಲ್ ಮಾಡಲಾಗಿದೆ.  ಈ ಚಿತ್ರದ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ರಿವೀಲ್ ಆಗಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News