ನಟ ದುಲ್ಕರ್ ಸಲ್ಮಾನ್ ʼಖಾಸಗಿ ಅಂಗʼಗಳನ್ನು ಮುಟ್ಟಿದ ಯುವತಿ..! ನಟಿನಾ ಅಥವಾ ಸಾಮಾನ್ಯ ಹುಡುಗಿನಾ..?

Dulkar Salman : ಚಿತ್ರರಂಗದಲ್ಲಿ ನಟಿಯರ ಮೇಲೆ ನಡೆಯುವ ಕಾಸ್ಟಿಂಗ್‌ ಕೌಚ್‌ ಮತ್ತು ಕೆಲವು ಕಿಡಿಗೇಡಿ ಅಭಿಮಾನಿಗಳಿಂದ ಅವರಿಗಾಗುವ ಇರಿಸುಮುರಿಸು ಪ್ರಸಂಗಗಳ ಕುರಿತು ನಾವು ಆಗ್ಗಾಗೆ ಕೇಳಿರುತ್ತೇವೆ. ಅವರು ಸಹ ಈ ಕುರಿತು ಸಂದರ್ಶನದಲ್ಲಿ ಇಲ್ಲವೇ ಸಾಮಾಜಿಕ ಜಾಲತಾಣದ ಮೂಲಕ ಅಸಮಾಧಾನ ಹೊರಹಾಕಿರುತ್ತಾರೆ. ಆದರೆ ಈಗ ನಟ ದುಲ್ಕರ್‌ ಸಲ್ಮಾನ್‌ ಹೇಳಿರುವ ಮಾತು ಕೇಳಿದ್ರೆ, ನಟರೂ ಸಹ ಇಂತಹ ಆರೋಪಗಳಿಂದ ದೂರ ಉಳಿದಿಲ್ಲ ಎನ್ನುವಂತಿದೆ.

Written by - Krishna N K | Last Updated : Aug 21, 2023, 04:22 PM IST
  • ಮಾಲಿವುಡ್‌ ಖ್ಯಾತ ನಟ ದುಲ್ಕರ್ ಸಲ್ಮಾನ್ ಹೇಳಿಕೆ ವೈರಲ್‌.
  • ಮಹಿಳೆಯೊಬ್ಬರು ತಮ್ಮ ಖಾಸಗಿ ಅಂಗವನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾಗಿ ಹೇಳಿಕೆ.
  • ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಯ್ತು ʼಸೀತಾರಾಮ್‌ʼ ನಟನ ಮಾತು.
ನಟ ದುಲ್ಕರ್ ಸಲ್ಮಾನ್ ʼಖಾಸಗಿ ಅಂಗʼಗಳನ್ನು ಮುಟ್ಟಿದ ಯುವತಿ..! ನಟಿನಾ ಅಥವಾ ಸಾಮಾನ್ಯ ಹುಡುಗಿನಾ..? title=

Dulquer salmaan fan : ಖಾಸಗಿ ಅಂಗಗಳನ್ನು ಅಸಭ್ಯವಾಗಿ ಸ್ಪರ್ಶಿಸುವ ಮೂಲಕ ನಟಿಯರ ಮೇಲೆ ಲೈಂಗಿಕ ಕಿರುಕುಳದ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಆದರೆ ಈ ಬಾರಿ ನಾಯಕನಿಗೆ ಅಂತಹದ್ದೇ ಘಟನೆ ನಡೆದಿದೆ. ಆಶ್ಚರ್ಯವೆನಿಸುತ್ತಿದೆಯೇ.. ಹೌದು ಇದು ನಿಜ. ಮಾಲಿವುಡ್‌ ಖ್ಯಾತ ನಟ ದುಲ್ಕರ್ ಸಲ್ಮಾನ್ ಮಹಿಳೆಯೊಬ್ಬರು ತಮ್ಮ ಖಾಸಗಿ ಅಂಗವನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾಗಿ ಹೇಳಿಕೆ ನೀಡಿದ್ದು, ಚರ್ಚೆಯ ವಿಷಯವಾಗಿದೆ.

ಯಸ್‌... ‘ಮಹಾನಟಿ’ ಚಿತ್ರದ ಮೂಲಕ ದುಲ್ಕರ್‌ ಸಲ್ಮಾನ್‌ ಸೌತ್‌ ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು. ಅಲ್ಲದೆ, ಸೀತಾರಾಮ್‌ ಮೂಲಕ ನೆಚ್ಚಿನ ನಟರಾಗಿ ಹೊರಹೊಮ್ಮಿದ್ದಾರೆ. ಫ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಕೆಲವೇ ಚಿತ್ರಗಳನ್ನು ಮಾಡಿದರೂ ಸಹ ವಿಶೇಷ ಮನ್ನಣೆ ಗಳಿಸಿದರು. ಸಧ್ಯ ದುಲ್ಕರ್‌ ನಟನೆಯ ಕಿಂಗ್ ಆಫ್ ಕೋಥಾ, ಗನ್ ಮತ್ತು ಗುಲಾಬ್ಸ್ ಚಿತ್ರಗಳು ರಿಲೀಸ್‌ಗೆ ರೆಡಿಯಾಗಿವೆ.

ಇದನ್ನೂ ಓದಿ: ಕಾರ್ಟೂನ್‌ ಫೋಟೋ ಹಂಚಿಕೊಂಡು...ಚಂದ್ರಯಾನ 3 ಬಗ್ಗೆ ಅಪಹಾಸ್ಯ ಮಾಡಿದ ನಟ ಪ್ರಕಾಶ್‌ ರಾಜ್!

ಇನ್ನು ಕಿಂಗ್ ಆಫ್ ಕೋಥಾ ಚಿತ್ರದ ಪ್ರಮೋಷನ್ ಅಂಗವಾಗಿ ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ಸಲ್ಮಾನ್ ದುಲ್ಕರ್ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಮಹಿಳೆಯರ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ಸಲ್ಮಾನ್ ದುಲ್ಕರ್ ಅವರ ಸಿನಿಮಾಗಳನ್ನು ಅನೇಕರು ಇಷ್ಟಪಡುತ್ತಾರೆ ಮತ್ತು ಅನೇಕ ಅಭಿಮಾನಿಗಳು ಅವರನ್ನು ಭೇಟಿಯಾಗುತ್ತಾರೆ. ಅವರು ಸಹ ಎಷ್ಟೇ ಬ್ಯುಸಿ ಇದ್ದರೂ ಸಹ ಫ್ಯಾನ್ಸ್‌ಗಳನ್ನು ಭೇಟಿಮಾಡುತ್ತಾರೆ. 

ಕೆಲವರು ಸೆಲ್ಫಿ ಹೇಳಿ ಹತ್ತಿರ ಬಂದು ಮುತ್ತು ಕೊಡುತ್ತಾರೆ. ಇಂತಹ ಸಂದರ್ಭದಲ್ಲಿ ಮಹಿಳೆಯೊಬ್ಬರು ದುಲ್ಕರ್‌ ಖಾಸಗಿ ಅಂಗವನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅಲ್ಲದೆ, ಈ ಘಟನೆ ತನಗೆ ತುಂಬಾ ಮುಜುಗರ ತಂದಿತ್ತು ಅಂತ ಅಸಮಾಧಾನ ವ್ಯಕ್ತಪಡಿಸಿದ್ದರು. 

ಇದನ್ನೂ ಓದಿ: ಆಗಸ್ಟ್ 23ಕ್ಕೆ ಚಂದ್ರನ ಅಂಗಳಕ್ಕೆ ʼಚಂದ್ರಯಾನ 3ʼ : ಅದೇ ದಿನ ʼರಾನಿʼ ಚಿತ್ರದ ಟೀಸರ್ ರಿಲೀಸ್‌

ಸಧ್ಯ ನಟನ ಈ ಹೇಳಿಕೆಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ದುಲ್ಕರ್ ಅವರ ಖಾಸಗಿ ಅಂಗ ಮುಟ್ಟಿದ ಹುಡುಗಿ ಯಾರು..? ಖಾಸಗಿ ಅಂಗವನ್ನು ಮುಟ್ಟಿದ್ದು, ಸೆಲೆಬ್ರಿಟಿಯೋ ಅಥವಾ ಸಾಮಾನ್ಯ ಹುಡುಗಿಯೋ ಅಂತ ನೆಟ್ಟಿಗರು ಕೇಳುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News