Ravichandran Birthday: 'ರವಿಬೋಪಣ್ಣ' ಸಿನಿಮಾಗೆ ಜನ ಥೀಯೇಟರ್ ಗೆ ಬಂದಿಲ್ಲ ಅನ್ನೋ ನೋವು ರವಿಚಂದ್ರನ್‌ಗೆ ಇನ್ನೂ ಕಾಡ್ತಿದ್ಯಾ?

Ravichandran Birthday: ರವಿಚಂದ್ರನ್ ಬರ್ತ್ ಡೇ ಹಿನ್ನೆಲೆ ಅವರನ್ನು ಭೇಟಿಯಾಗಲು ಕಾಯ್ತಿದ್ದ ಅಭಿಮಾನಿಗಳಿಗಾಗಿ ನಿರಾಸೆಯಾಗಿದೆ. ರವಿಚಂದ್ರನ್‌ ಪುತ್ರ ಅಪ್ಪ ಮನೆಯಲ್ಲಿ ಇಲ್ಲ ಬೇರೆ ದಿನ ಸಿಗ್ತಾರೆ ಎಂದು ಅಭಿಮಾನಿಗಳಿಗೆ ಹೇಳೋ ಮೂಲಕ ಪೋಟೋಗೆ  ಪೋಸ್ ಕೊಟ್ಟು ಆಟೋಗ್ರಾಫ್ ಕೊಟ್ಟು ಕಳುಹಿಸಿಕೊಟ್ಟರು.   

Written by - YASHODHA POOJARI | Edited by - Chetana Devarmani | Last Updated : May 30, 2023, 12:51 PM IST
  • ಇಂದು ರವಿಚಂದ್ರನ್‌ ಜನ್ಮದಿನ
  • ಭೇಟಿಯಾಗಲು ಕಾಯ್ತಿದ್ದ ಅಭಿಮಾನಿಗಳಿಗಾಗಿ ನಿರಾಸೆ
  • ಯಾಕೆ ಅಭಿಮಾನಿಗಳಿಗೆ ಈ ಬಾರಿ ಸಿಕ್ಕಿಲ್ಲ ಗೊತ್ತಾ..?
Ravichandran Birthday: 'ರವಿಬೋಪಣ್ಣ' ಸಿನಿಮಾಗೆ ಜನ ಥೀಯೇಟರ್ ಗೆ ಬಂದಿಲ್ಲ ಅನ್ನೋ ನೋವು ರವಿಚಂದ್ರನ್‌ಗೆ ಇನ್ನೂ ಕಾಡ್ತಿದ್ಯಾ? title=
Ravichandran Birthday

Ravichandran Birthday: ರವಿಚಂದ್ರನ್ ಬರ್ತ್ ಡೇ ಹಿನ್ನೆಲೆಮನೆ ಬಳಿ ಕಾಯ್ತಿದ್ದ ಅಭಿಮಾನಿಗಳಿಗಾಗಿ  ರವಿಚಂದ್ರನ್ ಪುತ್ರ ಮನುರವಿಚಂದ್ರನ್ ಆಗಮಿಸಿ ರವಿಚಂದ್ರನ್ ಹುಟ್ಟು ಹಬ್ಬ ಆಚರಿಸಿ ಕೊಳ್ತಿಲ್ಲ ಇನ್ನೊಮ್ಮೆ ಅಪ್ಪ ನಿಮ್ಮನ್ನ ಭೇಟಿಯಾಗುತ್ತಾರೆ ಅಂತ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು. ಆದರೂ ಅಭಿಮಾನಿಗಳು ಮನೆ ಬಳಿ ರವಿಚಂದ್ರನ್ ಭೇಟಿ ಮಾಡಲು ಪಟ್ಟು ಹಿಡಿದು ಕಾಯ್ತಿದ್ರು. ಈ ಹಿನ್ನೆಲೆ ಹೊಸ ಮನೆಯಲ್ಲಿ ಇದ್ದ ಮನು ರಾಜಾಜಿನಗರ ನಿವಾಸಕ್ಕೆ ಆಗಮಿಸಿದ ಮನೋರಂಜನ್ ರವಿಚಂದ್ರನ್ ಅಪ್ಪ ಮನೆಯಲ್ಲಿ ಇಲ್ಲ ಬೇರೆ ದಿನ ಸಿಗ್ತಾರೆ ಎಂದು ಅಭಿಮಾನಿಗಳಿಗೆ ಹೇಳೋ ಮೂಲಕ  ಪೋಟೋಗೆ  ಪೋಸ್ ಕೊಟ್ಟು ಆಟೋಗ್ರಾಫ್ ಕೊಟ್ಟು ಕಳುಹಿಸಿಕೊಟ್ಟರು.

ಇದನ್ನೂ ಓದಿ: ನನ್ನ ಜೀವನದಲ್ಲಿ ನಾನು ಇರೋವರೆಗೂ ಮಾಸದ ಗಾಯ ಕೊಟ್ಟಿದ್ದು ಜೊತೆಜೊತೆಯಲಿ ಸೀರಿಯಲ್ ತಂಡ ..!

ಹಾಗಾದ್ರೆ ಕ್ರೇಜಿ ಸ್ಟಾರ್ ರವಿಚಂದ್ರನ್ ಯಾಕೆ ಅಭಿಮಾನಿಗಳಿಗೆ ಈ ಬಾರಿ ಸಿಕ್ಕಿಲ್ಲ ಗೊತ್ತಾ..? ರವಿ ಬೋಪಣ್ಣ ಸಿನಿಮಾನ ಕಳೆದ ವರ್ಷ ಫ್ಯಾನ್ಸ್ ಗಾಗಿ ಸಾಕಷ್ಟು ಕನಸು ಇಟ್ಕೊಂಡು ಉಡುಗೊರೆಯಾಗಿ ಕೊಟ್ರು. ಆದ್ರೆ ಥೀಯೇಟರ್ ಗೆ ಜನ ಬರದೇ ಇದ್ದ ನೋವು ಕನಸುಗಾರನಿಗೆ ಸದಾ ಕಾಡುತ್ತಲೇ ಇದೆ ಅಂತ ಹೇಳಲಾಗುತ್ತಿದೆ. ನನ್ನ ಮೇಲೆ ಜನ ಇಟ್ಟ ಪ್ರೀತಿಗೆ ಉಸಿರು ಇರೋವರೆಗೂ ಸಿನಿಮಾ ಮಾಡಬೇಕು. ಮನರಂಜನೆ ಕೊಡ್ಬೇಕು ಅನ್ನೋ ಆಸೆ ಇದ್ದ ರವಿಚಂದ್ರನ್ ಗೆ ಜನ ಕೈ ಹಿಡಿಯಲಿಲ್ಲ ಅನ್ನೋ ಕೊರಗು ಖಂಡಿತ ಇದೆ.

ಇನ್ನಾದ್ರೂ ಜನ ಕನಸುಗಾರನ ಕನಸನ್ನ ಈಡೇರಿಸಲಿ. ಯಾಕಂದ್ರೆ ಸಿನಿಮಾಗಾಗಿ,ಅಭಿಮಾನಕ್ಕಾಗಿ,ಚಪ್ಪಾಳೆಗಾಗಿ ಕಾಯೋ ಆ ಹೃದಯಕ್ಕೆ ಜನ ಇನ್ನಾದ್ರೂ ಹರ್ಟ್ ಮಾಡೋದು ಬೇಡ ಅನ್ನೋದು ನಮ್ಮ ಕಳಕಳಿ. ಹುಟ್ಟುಹಬ್ಬ ಅಂತ ಮನೆಮುಂದೆ ಬರೋ ಜನ ಥೀಯೇಟರ್ ಗೆ ಬಂದು ಸಿನಿಮಾ ನೋಡಿದ್ರೆ ಸಾಕು ಅನ್ನೋದು ರವಿಚಂದ್ರನ್ ಅಭಿಮತ. ಸೋ ದಯವಿಟ್ಟು ಥೀಯೇಟರ್ ಗಳಿಗೆ ಹೋಗಿ ಸಿನಿಮಾ ನೋಡಿ ಅನ್ನೋದೇ ನಮ್ಮ ಆಶಯ.

ಇದನ್ನೂ ಓದಿ: ದಿ ಕೇರಳ ಸ್ಟೋರಿ ಪ್ರದರ್ಶಿಸಿದರೆ ಥಿಯೇಟರ್‌ ಸ್ಫೋಟಿಸುವುದಾಗಿ ISIS ಬೆದರಿಕೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News