ಏಕಾಏಕಿ 'ಬಿಗ್ ಬ್ರದರ್' ಮಹೇಶ್ ಬಾಬು, ರಣವೀರ್ ಸಿಂಗ್ ಟ್ರೆಂಡಿಂಗ್ ನಲ್ಲಿರುವುದೇಕೆ?

ಭಾರತೀಯ ಚಿತ್ರರಂಗದ ಸ್ಟಾರ್ ಗಳಾದ ರಣವೀರ್ ಸಿಂಗ್ ಮತ್ತು ಮಹೇಶ್ ಬಾಬು ಅವರು ಈಗ ಏಕಾಏಕಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ.ಇದಕ್ಕೆ ಮುಖ್ಯವಾಗಿ ಇವರಿಬ್ಬರು ತಂಪು ಪಾನೀಯ ಥಮ್ಸ್ ಅಪ್‌ನ ಬ್ರಾಂಡ್ ಅಂಬಾಸಿಡರ್ ಆಗಿರುವುದೇ ಕಾರಣ ಎನ್ನಲಾಗಿದೆ.ಇವರಿಬ್ಬರು ಶೀಘ್ರದಲ್ಲೇ ಒಟ್ಟಿಗೆ ಬ್ರಾಂಡ್‌ನ ಪ್ರಚಾರ ವೀಡಿಯೊದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Last Updated : Dec 26, 2020, 05:31 PM IST
ಏಕಾಏಕಿ 'ಬಿಗ್ ಬ್ರದರ್' ಮಹೇಶ್ ಬಾಬು, ರಣವೀರ್ ಸಿಂಗ್ ಟ್ರೆಂಡಿಂಗ್ ನಲ್ಲಿರುವುದೇಕೆ? title=
Photo Courtesy: Instagram

ನವದೆಹಲಿ: ಭಾರತೀಯ ಚಿತ್ರರಂಗದ ಸ್ಟಾರ್ ಗಳಾದ ರಣವೀರ್ ಸಿಂಗ್ ಮತ್ತು ಮಹೇಶ್ ಬಾಬು ಅವರು ಈಗ ಏಕಾಏಕಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ.ಇದಕ್ಕೆ ಮುಖ್ಯವಾಗಿ ಇವರಿಬ್ಬರು ತಂಪು ಪಾನೀಯ ಥಮ್ಸ್ ಅಪ್‌ನ ಬ್ರಾಂಡ್ ಅಂಬಾಸಿಡರ್ ಆಗಿರುವುದೇ ಕಾರಣ ಎನ್ನಲಾಗಿದೆ.ಇವರಿಬ್ಬರು ಶೀಘ್ರದಲ್ಲೇ ಒಟ್ಟಿಗೆ ಬ್ರಾಂಡ್‌ನ ಪ್ರಚಾರ ವೀಡಿಯೊದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚಿನ ಜಾಹೀರಾತು ಚಿತ್ರೀಕರಣದ ಸಂದರ್ಭದಲ್ಲಿನ ತಮ್ಮ ಭೇಟಿ ಕುರಿತಾಗಿ ರಣವೀರ್ ಸಿಂಗ್ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಕಪಿಲ್ ದೇವ್ ಜೀವನ ಕುರಿತ '83' ಚಿತ್ರದ ಮೊದಲ ಲುಕ್ ಔಟ್...!

'ನಾನು ಸಹಭಾಗಿತ್ವ ಹೊಂದಿರುವ ಅತ್ಯುತ್ತಮ ಸಂಭಾವಿತ ವ್ಯಕ್ತಿಗಳಲ್ಲಿ ಒಬ್ಬರು.ನಮ್ಮ ಸಂವಹನಗಳು ಯಾವಾಗಲೂ ಸಮೃದ್ಧವಾಗಿವೆ.ದೊಡ್ಡಣ್ಣ ಮಹೇಶ್ ಗಾರು ಅವರಿಗೆ ಪ್ರೀತಿ ಮತ್ತು ಗೌರವಗಳು' ಎಂದು ಬರೆದುಕೊಂಡಿದ್ದಾರೆ.ರಣವೀರ್ ಸಿಂಗ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಮಹೇಶ್ ಬಾಬು 'ಸಹೋದರ ರಣವೀರ್ ಅವರೊಂದಿಗೆ ಕೆಲಸ ಮಾಡುವುದು ತುಂಬಾ ಖುಷಿ ತಂದಿದೆ' ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

Watch: ಪದ್ಮಾವತ್ 'ಖಲಿ ಬಲಿ' ಹಾಡಿಗೆ ಶಿಖರ್ ಧವನ್, ರಣವೀರ್ ಸಿಂಗ್ ಡ್ಯಾನ್ಸ್..!

ರಣವೀರ್ ಸಿಂಗ್ ಮತ್ತು ಮಹೇಶ್ ಬಾಬು ಅವರು ಥಮ್ಸ್ ಅಪ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ, ಆದರೆ ಈ ಜೋಡಿಯು ಬ್ರ್ಯಾಂಡ್ಗಾಗಿ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುವುದು ಇದೇ ಮೊದಲು ಎನ್ನಲಾಗಿದೆ.ರಣವೀರ್ ಸಿಂಗ್ 2010 ರಲ್ಲಿ ಬ್ಯಾಂಡ್ ಬಾಜಾ ಬರಾತ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು ಮತ್ತು ಗೋಲಿಯೋನ್ ಕಿ ರಾಸ್‌ಲೀಲಾ ರಾಮ್-ಲೀಲಾ, ಬಾಜಿರಾವ್ ಮಸ್ತಾನಿ ಮತ್ತು ಗಲ್ಲಿ ಬಾಯ್ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಈಗ ಮುಂಬರುವ '83, ಜಯೇಶ್‌ಭಾಯ್ ಜೋರ್ದಾರ್ ಮತ್ತು ಸರ್ಕಸ್ ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ಇಂದು ಬೆಂಗಳೂರಿನಲ್ಲಿ ದೀಪ್-ವೀರ್ ಆರತಕ್ಷತೆ! ಅದ್ಧೂರಿ ತಯಾರಿ...

ಮಹೇಶ್ ಬಾಬು ಸರಿಲೇರು ನೀಕೆವ್ವರದಲ್ಲಿ ಕಾಣಿಸಿಕೊಂಡಿದ್ದರು.ಶೀಘ್ರದಲ್ಲೇ ಅವರು ಎಸ್.ಎಸ್.ರಾಜಮೌಳಿ ಮತ್ತು ಪರಶುರಾಮ್ ಅವರೊಂದಿಗೆ ಕೈ ಜೋಡಿಸಲಿದ್ದಾರೆ.

Trending News