ಬಿಗ್ ಬಾಸ್ ಕನ್ನಡ 10 ಎಲ್ಲಿ? ಎಂದಿನಿಂದ? ಯಾವ ಸಮಯಕ್ಕೆ ಪ್ರಸಾರ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್!

Bigg Boss Kannada Season 10:  ಬಹುಭಾಷೆಯಲ್ಲಿ ಪ್ರಸಾರವಾಗಿ ಅತೀ ಹೆಚ್ಚು ಜನಪ್ರಿಯತೆ ಪಡೆದುಕೊಂಡು ಯಶಸ್ಸು ಗಳಿಸಿರುವ ಜನಪ್ರಿಯ ರಿಯಾಲಿಟಿ ಶೋ ಸದ್ಯ ಕನ್ನಡದಲ್ಲಿ  9 ಸೀಸನ್‌ ಪೂರ್ತಿಗೊಳಿಸಿ 10ನೇ ಸೀಸನ್‌ಗೆ ಕಾಲಿಡುತ್ತಿದೆ. 

Written by - Savita M B | Last Updated : Sep 23, 2023, 09:55 AM IST
  • ಭಾರತದಲ್ಲಿ ಅತೀ ದೊಡ್ಡ ಯಶಸ್ಸನ್ನು ಸಾಧಿಸಿದ ಬಿಗ್ ಬಾಸ್ ರಿಯಾಲಿಟಿ ಶೋ
  • ಬಹುಬಾಷೆಯಲ್ಲಿಯೂ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು
  • ಇದೇ ಭರವಸೆಯೊಂದಿಗೆ ಮತ್ತೊಂದು ಸೀಸನ್‌ ಪ್ರಾರಂಭವಾಗುತ್ತಿದೆ
ಬಿಗ್ ಬಾಸ್ ಕನ್ನಡ 10 ಎಲ್ಲಿ? ಎಂದಿನಿಂದ? ಯಾವ ಸಮಯಕ್ಕೆ ಪ್ರಸಾರ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್! title=

Kannada Bigg Boss Updates: ಭಾರತದಲ್ಲಿ ಅತೀ ದೊಡ್ಡ ಯಶಸ್ಸನ್ನು ಸಾಧಿಸಿದ ಬಿಗ್ ಬಾಸ್ ರಿಯಾಲಿಟಿ ಶೋ ಬಹುಬಾಷೆಯಲ್ಲಿಯೂ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಕನ್ನಡದ ಕಿರುತೆರೆ ಪ್ರೇಕ್ಷಕರು ಕಳೆದ 9 ಸೀಸನ್‌ಗಳಿಗೂ ಉತ್ತಮ ಪ್ರತಿಕ್ರಿಯೆ ನೀಡಿದ್ದರು. ಇದೇ ಭರವಸೆಯೊಂದಿಗೆ ಮತ್ತೊಂದು ಸೀಸನ್‌ ಪ್ರಾರಂಭವಾಗುತ್ತಿದ್ದು, ಅದೇ "ಬಿಗ್ ಬಾಸ್ ಕನ್ನಡ 10". 

ಇನ್ನು ಅಕ್ಟೋಬರ್ 8 ರಿಂದ ಭರ್ಜರಿಯಾಗಿ "ಬಿಗ್ ಬಾಸ್ ಕನ್ನಡ 10" ಆಂಭವಾಗಲಿದೆ ಎಂದು ವರದಿ ಮಾಡಲಾಗಿತ್ತು. ಹಾಗೆಯೇ ಸದ್ಯ ಸೀಸನ್ 10 ಪ್ರೋಮೊ ಪ್ರಸಾರ ಆಗುತ್ತಿದ್ದು, ರಿಯಾಲಿಟಿ ಶೋ ಆರಂಭವಾಗುವ ದಿನವನ್ನು ರಿವೀಲ್‌ ಮಾಡಲಾಗಿದೆ. 

ಕಳೆದ ಸೀಸನ್‌ಗಿಂತ ಈ ಸೀಸನ್‌ ಹೆಚ್ಚು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈಗಾಗಲೇ ಶೋಗೆ ಉಪಯುಕ್ತ ಕೆಲಸಗಳೆಲ್ಲ ನೆರವೇರಿವೆ ಎನ್ನಲಾಗಿದೆ. ಇನ್ನು ಈ ಜನಪ್ರಿಯ ರಿಯಾಲಿಟಿ ಶೋ ಪ್ರತಿಬಾರೀಯಂತೆ ಈ ಬಾರಿಯೂ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದ್ದು, ಪ್ರಸಾರದ ದಿನವನ್ನು ಪ್ರೋಮೊದಲ್ಲಿ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ-ಶೀಘ್ರದಲ್ಲೇ ರಕ್ಷಿತ್‌ ಶೆಟ್ಟಿ ಮದುವೆ ಆಗಲಿದ್ದಾರಂತೆ.. ಯಾರು ಗೊತ್ತಾ ಆ ಲಕ್ಕಿ ಗರ್ಲ್?

ಕೆಲವು ದಿನಗಳ ಹಿಂದೆ ಕಲರ್ಸ್ ಕನ್ನಡ 'ಬಿಗ್ ಬಾಸ್ ಕನ್ನಡ ಸೀಸನ್ 10'ನ ಎರಡು ಪ್ರೇಮೋಗಳನ್ನು ಬಿಡುಗಡೆಮಾಡಿ ಸಣ್ಣ ಝಲಕ್ ಕೊಟ್ಟಿದ್ದರು. ತದನಂತರ ಸೆಪ್ಟೆಂಬರ್ 14ರಂದು ಕಿಚ್ಚ ಸುದೀಪ್ ಪ್ರೋಮೊ ರಿವೀಲ್‌ ಮಾಡಿತ್ತು ಆದರೆ ಎಂದಿನಿಂದ ಪ್ರಸಾರವಾಗಲಿದೆ ಎನ್ನುವುದನ್ನು ಮಾತ್ರ ತಿಳಿಸಿರಲಿಲ್ಲ.

ಇದೀಗ ಈ ಜನಪ್ರಿಯ ರಿಯಾಲಿಟಿ ಶೋ ಅಧಿಕೃತವಾಗಿ ಅಕ್ಟೋಬರ್ 8ರಂದು 'ಬಿಗ್ ಬಾಸ್ ಕನ್ನಡ ಸೀಸನ್ 10' ಪ್ರಸಾರವಾಲಿದೆ ಎಂದು ಘೋಷಿಸಲಾಗಿದೆ. ಹಾಗಾದರೆ ಈ ಬಹುನಿರೀಕ್ಷಿತ ಬಿಗ್‌ ಬಾಸ್‌ ಆಟ ಯಾವಾಗ ಶುರು ಆಗೋದು ಅಂತೀರಾ ಮುಂದೆ ಓದಿ..

ಅಕ್ಟೋಬರ್ 8ರಂದು ಬಿಗ್ ಬಾಸ್ ಸೀಸನ್ 10 ಅದ್ಧೂರಿ ಚಾಲನೆ ಸಿಗಲಿದ್ದು, ಎರಡು ದಿನಗಳ ಕಾಲ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳನ್ನು ಕಳುಹಿಸಿ ಕೊಡಲಾಗುವುದು. ಸುಮಾರು 17 ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಬಿಗ್‌ ಬಾಸ್‌ ಮೆನಯಲ್ಲಿ ಅಸಲಿ ಆಟ ಶುರುವಾಗೋದು ಅಕ್ಟೋಬರ್ 10ರಿಂದ ಎಂದು ವರದಿ ಮಾಡಲಾಗಿದೆ. 

ಇದನ್ನೂ ಓದಿ-ಮದುವೆ ಸುದ್ದಿ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿ ಪಲ್ಲವಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

 

Trending News