Viral Video: 'ನಾನೂ ಒಂದು ಕಾಲದಲ್ಲಿ ಡ್ರಗ್ ಅಡಿಕ್ಟ್ ಆಗಿದ್ದೆ' ಎಂದ Kangana Ranaut

ಪ್ರಸ್ತುತ ಸಮಾಜಿಕ ಮಾಧಯ್ಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ವೋದರಲ್ಲಿ ಕಂಗನಾ ರಣಾವತ್, 'ಮನೆಯಿಂದ ಓಡಿಹೋದ ಒಂದೆರಡು ವರ್ಷಗಳಲ್ಲಿ ನಾನು ಓರ್ವ ಸ್ಟಾರ್ ಆಗಿದ್ದೆ, ಜೊತೆಗೆ ಓರ್ವ ಡ್ರಗ್ ಅಡಿಕ್ಟ್ ಆಗಿದ್ದೆ ಎಂದಿದ್ದಾರೆ.

Last Updated : Sep 13, 2020, 04:50 PM IST
  • ಮನೆಯಿಂದ ಓಡಿಹೋದ ಒಂದೆರಡು ವರ್ಷಗಳಲ್ಲಿ ನಾನೋರ್ವ ಫಿಲ್ಮ್ ಸ್ಟಾರ್ ಆಗಿದ್ದೆ.
  • ಡ್ರಗ್ ಬಳಕೆದಾರರ ಮಧ್ಯೆ ಸಿಲುಕಿಕೊಂಡಿದ್ದೆ.
  • ರಿಯಾ ಚಕ್ರವರ್ತಿಯನ್ನು ಅಲ್ಪಾವಧಿಯ ಡ್ರಗ್ ಅಡಿಕ್ಟ್ ಎಂದ ಕಂಗನಾ.
Viral Video: 'ನಾನೂ ಒಂದು ಕಾಲದಲ್ಲಿ ಡ್ರಗ್ ಅಡಿಕ್ಟ್ ಆಗಿದ್ದೆ' ಎಂದ Kangana Ranaut title=

ನವದೆಹಲಿ: ಖ್ಯಾತ ಬಾಲಿವುಡ್ ನಟಿ ಕಂಗನಾ ರನೌತ್ (Kangana Ranaut) ಅವರ ವಿಡಿಯೋವೊಂದು  ಟ್ವಿಟ್ಟರ್ ನಲ್ಲಿ ಭಾರಿ ವೈರಲ್ ಆಗಿದ್ದು, ಅದರಲ್ಲಿ ಅವರು ಒಮ್ಮೆ ಮಾದಕ ವ್ಯಸನಕ್ಕೆ ಒಳಗಾಗಿದ್ದರು ಎಂದು ಹೇಳಿದ್ದಾರೆ. ಮಾರ್ಚ್ನಲ್ಲಿ ಕಂಗನಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ವೀಡಿಯೊದಲ್ಲಿ, ಕಂಗನಾ ಹೇಳುತ್ತಾರೆ, 'ನಾನು ಮನೆಯಿಂದ ಓಡಿಹೋದ ತಕ್ಷಣ, ನಾನು ಒಂದೆರಡು ವರ್ಷಗಳಲ್ಲಿ ಓರ್ವ ಸ್ಟಾರ್ ಆಗಿದ್ದೆ,, ಮಾದಕ ವ್ಯಸನಿಯಾಗಿದ್ದೆ. ನನ್ನ ಜೀವನದಲ್ಲಿ ಹಲವಾರು ಘಟನೆಗಳು ನಡೆಯುತ್ತಿದ್ದವು, ನಾನು ಅಂತಹ ಜನರ ಕೈಗೆ ಸಿಲುಕಿದ್ದೆ, ನನ್ನ ಜೀವನದಲ್ಲಿ ತುಂಬಾ ಅಪಾಯಕಾರಿ ಘಟನೆಗಳು ಸಂಭವಿಸಿದ್ದವು" ಎಂದಿದ್ದಾಳೆ.

 
 
 
 

 
 
 
 
 
 
 
 
 

#KanganaRanaut talks about the time when she couldn’t close her eyes because tears won’t stop. 🙏🙏

A post shared by Kangana Ranaut (@kanganaranaut) on

ಡ್ರಗ್ಸ್ ವ್ಯಸನಿಗಳ ಮಧ್ಯ ಸಿಲುಕಿಕೊಂಡಿದ್ದೆ
ಮನಾಲಿಯಲ್ಲಿ ರಜಾದಿನಗಳನ್ನು ಕಳೆಯುತ್ತಿರುವಾಗ ಕಂಗನಾ ಈ ವಿಡಿಯೋ ಅನ್ನು ಪೋಸ್ಟ್ ಮಾಡಿದ್ದರು. ಇದಕ್ಕೂ ಮೊದಲು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಂಗನಾ ರಣಾವತ್ ತಾವು ಹೇಗೆ ಮಾದಕ ವ್ಯಸನಿಗಳ ಮಧ್ಯೆ ಸಿಲುಕಿಕೊಂಡಿರುವುದಾಗಿ ಹೇಳಿದ್ದಳು. ಇದಲ್ಲದೆ ಚಲನ ಚಿತ್ರ ರಂಗದ ಶೇ.99 ರಷ್ಟು ಜನರು ಡ್ರಗ್ಸ್ ಹಾಗೂ ಕೋಕೈನ್ ಗೆ ಅಡಿಕ್ಟ್ ಆಗಿದ್ದಾರೆ. ಅಷ್ಟೇ ಅಲ್ಲ ಚಿತ್ರ ನಟರಾಗಿರುವ ರಣವೀರ್ ಸಿಂಗ್, ರಣಬೀರ್ ಕಪೂರ್ ಹಾಗೂ ವಿಕ್ಕಿ ಕೌಶಲ್ ಹಾಗೂ ಚಿತ್ರ ನಿರ್ಮಾಪಕ ಅಯಾನ್ ಮುಖರ್ಜೀ ಕೂಡ ತಮ್ಮ ರಕ್ತದ ಸ್ಯಾಂಪಲ್ ನೀಡಿ, ತಮ್ಮ ಪರಿಶುದ್ಧತೆಯನ್ನು ಸಾಬೀತುಪಡಿಸಬೇಕು ಎಂದು ಕಂಗನಾ ಹೇಳಿದ್ದರು.

ಸುಶಾಂತ್ ಸಿಂಗ್ ರಾಜ್ಪುತ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರಿಯಾ ಚಕ್ರವರ್ತಿಯನ್ನು ಸಾಮಾಜಿಕ ಮಾಧ್ಯಮಗಳ ಮೇಲೆ ಕಂಗನಾ ಓರ್ವ ಅಲ್ಪಾವಧಿಯ ಡ್ರಗ್ ಅಡಿಕ್ಟ್ ಎಂದು ಹೇಳಿದ್ದಳು. ಇತ್ತೀಚೆಗಷ್ಟೇ ಟ್ವೀಟ್ ಮಾಡಿದ್ದ ಕಂಗನಾ ರಣಾವತ್, 'ದಯವಿಟ್ಟು ನನ್ನ ರಕ್ತದ ಸ್ಯಾಂಪಲ್ ತೆಗೆದುಕೊಂಡು, ನನ್ನ ಕಾಲ್ ರಿಕಾರ್ಡ್ಗಳ ಪರಿಶೀಲನೆ ನಡೆಸಿ, ಒಂದು ವೇಳೆ ಡ್ರಗ್ ಪೆಡ್ಲರ್ ಗಳ ಜೊತೆಗೆ ಯಾವುದೇ ಲಿಂಕ್ ಕಂಡು ಬಂದರೆ, ನಾನು ನನ್ನ ತಪ್ಪನ್ನು ಒಪ್ಪಿಕೊಳ್ಳುವೆ ಹಾಗೂ ಶಾಶ್ವತವಾಗಿ ಮುಂಬೈ ತೊರೆಯುವೆ. ನಿಮ್ಮ ಭೇಟಿಯ ಅಭಿಲಾಷಿ.." ಎಂದು ಬರೆದುಕೊಂಡಿದ್ದಳು.

Trending News