ಕಿಚ್ಚನ ವಿಕ್ರಾಂತ್ ರೋಣದ ಬಗ್ಗೆ ರಾಜಮೌಳಿ ಹೇಳಿದ್ದೇನು ..!

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ಕುರಿತಾಗಿ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆಗಲೇ ದುಬೈನಿಂದ ಈ ಚಿತ್ರದ ಕುರಿತಾದ ಸೆನ್ಸಾರ್ ರಿವಿವ್ ಬಂದಿರುವ ಹಿನ್ನೆಲೆಯಲ್ಲಿ ಮತ್ತೊಂದು ಕನ್ನಡ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಹವಾ ಮಾಡಲಿದೆ.

Written by - Zee Kannada News Desk | Last Updated : Jul 27, 2022, 06:32 PM IST
  • ಜಾಕ್ ಮಂಜುನಾಥ್ ಅವರ ನಿರ್ಮಾಣದ ಶಾಲಿನಿ ಆರ್ಟ್ಸ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರವನ್ನು ಇನ್ವೆನಿಯೊ ಒರಿಜಿನ್ಸ್‌ನ ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಣ ಮಾಡಿದ್ದಾರೆ.
  • ಇದನ್ನು ಉತ್ತರ ಭಾರತಾದ್ಯಂತ ಪಿವಿಆರ್ ಪಿಕ್ಚರ್ಸ್ ವಿತರಿಸಲಿದೆ.
 ಕಿಚ್ಚನ ವಿಕ್ರಾಂತ್ ರೋಣದ ಬಗ್ಗೆ ರಾಜಮೌಳಿ ಹೇಳಿದ್ದೇನು ..! title=

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ಕುರಿತಾಗಿ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆಗಲೇ ದುಬೈನಿಂದ ಈ ಚಿತ್ರದ ಕುರಿತಾದ ಸೆನ್ಸಾರ್ ರಿವಿವ್ ಬಂದಿರುವ ಹಿನ್ನೆಲೆಯಲ್ಲಿ ಮತ್ತೊಂದು ಕನ್ನಡ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಹವಾ ಮಾಡುವುದು ಪಕ್ಕಾ ಆಗಿದೆ.

ಇದನ್ನೂ ಓದಿ: ಸಮಂತಾ - ನಾಗ ಚೈತನ್ಯ ವಿಚ್ಛೇದನಕ್ಕೆ ಅಮೀರ್ ಖಾನ್ ಕಾರಣವೇ!?

 ಇದೇ ವೇಳೆ ನಾಳೆ ಅಧಿಕೃತವಾಗಿ ಜಗತ್ತಿನಾಧ್ಯಂತ ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ಶುಭಕೋರಿ ಭಾರತದ ಹೆಸರಾಂತ ಚಿತ್ರ ನಿರ್ದೇಶಕ ರಾಜಮೌಳಿ ಟ್ವೀಟ್ ಮಾಡಿದ್ದಾರೆ."ಪ್ರಯೋಗ ಮತ್ತು ಸವಾಲುಗಳನ್ನು ಎದುರಿಸುವಲ್ಲಿ ಸುದೀಪ್ ಯಾವಾಗಲೂ ಮೊದಲಿಗರು, ವಿಕ್ರಾಂತ್ ರೋಣದಲ್ಲಿನ ಚಮತ್ಕಾರಕ್ಕೆ ನೋಡಲು ಉತ್ಸುಕನಾಗಿದ್ದೇನೆ,ದೃಶ್ಯಗಳು ಭವ್ಯವಾಗಿ ಕಾಣುತ್ತಿವೆ, ಚಿತ್ರಕ್ಕೆ ನನ್ನ ಶುಭಾಶಯಗಳು" ಎಂದು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: 'Vikrant Rona' ಬಿಡುಗಡೆಗೆ ವಿಶ್ವಾದ್ಯಂತ ಕೌಂಟ್ ಡೌನ್ ಶುರು..!

ನಾಳೆ ಬಿಡುಗಡೆಯಾಗುತ್ತಿರುವ ಈ ಚಿತ್ರವನ್ನು ಉತ್ತರ ಭಾರತದಲ್ಲಿ ಸಲ್ಮಾನ್ ಖಾನ್ ಫಿಲ್ಮ್ಸ್, ಜೀ ಸ್ಟುಡಿಯೋಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಪ್ರಸ್ತುತಪಡಿಸುತ್ತವೆ. ಜಾಕ್ ಮಂಜುನಾಥ್ ಅವರ ನಿರ್ಮಾಣದ ಶಾಲಿನಿ ಆರ್ಟ್ಸ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರವನ್ನು ಇನ್ವೆನಿಯೊ ಒರಿಜಿನ್ಸ್‌ನ ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಣ ಮಾಡಿದ್ದಾರೆ.ಇದನ್ನು ಉತ್ತರ ಭಾರತಾದ್ಯಂತ ಪಿವಿಆರ್ ಪಿಕ್ಚರ್ಸ್ ವಿತರಿಸಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News