ವೈರಲ್ ಸಿಂಗರ್ ರಾನು ಮೊಂಡಲ್ ಗಾಯನದ ಬಗ್ಗೆ ಲತಾ ಮಂಗೇಶ್ಕರ್ ಹೇಳಿದ್ದೇನು?

ರಣಘಾಟ್ ರೈಲ್ವೆ ನಿಲ್ದಾಣದಲ್ಲಿ ಲತಾ ಮಂಗೇಶ್ಕರ್ ಅವರ "ಏಕ್ ಪ್ಯಾರ್ ಕಾ ನಾಗಮ ಹೈ" ಹಾಡಿನ ವಿಡಿಯೋ ವೈರಲ್ ಆದ ನಂತರ ರಾನು ಮೊಂಡಲ್ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದಾರೆ. 

Last Updated : Sep 3, 2019, 05:27 PM IST
 ವೈರಲ್ ಸಿಂಗರ್ ರಾನು ಮೊಂಡಲ್ ಗಾಯನದ ಬಗ್ಗೆ ಲತಾ ಮಂಗೇಶ್ಕರ್ ಹೇಳಿದ್ದೇನು? title=

ನವದೆಹಲಿ: ರಣಘಾಟ್ ರೈಲ್ವೆ ನಿಲ್ದಾಣದಲ್ಲಿ ಲತಾ ಮಂಗೇಶ್ಕರ್ ಅವರ "ಏಕ್ ಪ್ಯಾರ್ ಕಾ ನಾಗಮ ಹೈ" ಹಾಡಿನ ವಿಡಿಯೋ ವೈರಲ್ ಆದ ನಂತರ ರಾನು ಮೊಂಡಲ್ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದಾರೆ.

ಸಂಗೀತ ಸಂಯೋಜಕ ಹಿಮೇಶ್ ರೇಶಮ್ಮಿಯಾ ಅವರ ಪ್ರತಿಭೆಯನ್ನು ಗಮನಿಸಿ ಅವರ ಮುಂಬರುವ ಚಿತ್ರ ಹ್ಯಾಪಿ ಹಾರ್ಡಿ ಮತ್ತು ಹೀರ್ ನಲ್ಲಿ ಹಾಡುವ ಅವಕಾಶವನ್ನು ನೀಡಿದ್ದಾರೆ.ಜನರು ಕೂಡ ಮೊಂಡಲ್ ಅವರ ಗಾಯನ ಶೈಲಿಗೆ ಮಾರುಹೋಗಿದ್ದಾರೆ. ಆದರೆ ಈಗ ರಾನು ಮೊಂಡಲ್ ಗಾಯನದ ಬಗ್ಗೆ ಮಾತನಾಡಿರುವ ಲತಾ ಮಂಗೇಶ್ಕರ್ 'ಯಾರಾದರೂ ನನ್ನ ಹೆಸರು ಮತ್ತು ಕೆಲಸದಿಂದ ಲಾಭ ಪಡೆದರೆ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.

ಇನ್ನು ಮುಂದುವರೆದು ಅನುಕರಣಾ ಶೈಲಿಯ ಗಾಯನ ಮಾದರಿ ದೀರ್ಘಾವಧಿಗೆ ಸಹಾಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.ಇದರಿಂದಾಗಿ ಅವರು ಅಲ್ಪಾವಧಿಯವರೆಗೆ ಮಾತ್ರ ಮೆಚ್ಚುಗೆ ಗಳಿಸಬಹುದು ಎಂದು ಲತಾ ಮಂಗೇಶ್ಕರ್ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಅಥವಾ ಇತರ ಯಾವುದೇ ಗಾಯನಗಳನ್ನು ಹಾಡಿ ನಂತರ ಸ್ವಂತಿಕೆ ಉಳಿಸಿಕೊಳ್ಳಬೇಕೆಂದು ಅವರು ನೂತನ ಗಾಯಕ ಗಾಯಕಿಯರಿಗೆ ಸಲಹೆ ನೀಡಿದ್ದಾರೆ.

50 ರ ಹರೆಯದ ರಾನು ಮಂಡೋಲ್ ತಮ್ಮ ವೀಡಿಯೋ ವೈರಲ್ ಆದ ನಂತರ ಇತ್ತೀಚೆಗೆ ರಿಯಾಲಿಟಿ ಟಿವಿ ಶೋ ಸೂಪರ್‌ಸ್ಟಾರ್ ಸಿಂಗರ್‌ನಲ್ಲಿ ಕಾಣಿಸಿಕೊಂಡು, ಅಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾದರು. ಇಲ್ಲಿಯವರೆಗೆ, ಅವರು ಹಿಮೇಶ್ ರೇಶಮ್ಮಿಯಾ ಅವರೊಂದಿಗೆ "ತೇರಿ ಮೇರಿ ಕಹಾನಿ", "ಆದತ್" ಮತ್ತು "ಆಶಿಕ್ವಿ ಮೇ ತೇರಿ" ಎಂಬ ಮೂರು ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ.

Trending News