ಅನಿರುದ್ಧ್ ರವಿಚಂದರ್ ಜೊತೆಗಿನ ವದಂತಿಯ ಬಗ್ಗೆ ಮೌನ ಮುರಿದ ಕೀರ್ತಿ ಸುರೇಶ್ ಏನು ಹೇಳಿದ್ರು?

Keerthy Suresh: ಬಹಳ ದಿನಗಳಿಂದ ಹರಿದಾಡುತ್ತಿದ್ದ ಅನಿರುದ್ಧ ರವಿಚಂದರ್ ಜೊತೆಗಿನ ಮದುವೆ ವದಂತಿಗೆ ಸದ್ಯ ನಟಿ ಕೀರ್ತಿ ಸುರೇಶ್ ಪ್ರತಿಕ್ರಿಯಿಸಿದ್ದಾರೆ.   

Written by - Savita M B | Last Updated : Sep 19, 2023, 10:16 AM IST
  • ಮಲಯಾಳಿಯರು ಬಾಲ್ಯದಿಂದಲೂ ನೋಡುತ್ತಿರುವ ನಟಿ ಕೀರ್ತಿ ಸುರೇಶ್.
  • ಮಲಯಾಳಂ ಸಿನಿಮಾ ಮೂಲಕ ಬಾಲನಟಿಯಾಗಿ ನಟಿಸಲು ಆರಂಭಿಸಿದ ಕೀರ್ತಿ
  • ಕೀರ್ತಿ ಸುರೇಶ್ ಕೂಡ ಗಾಸಿಪ್ ಗಳಿಂದ ನಿರಂತರವಾಗಿ ಸುದ್ದಿಯಲ್ಲಿರುವ ನಾಯಕಿ
ಅನಿರುದ್ಧ್ ರವಿಚಂದರ್ ಜೊತೆಗಿನ ವದಂತಿಯ ಬಗ್ಗೆ ಮೌನ ಮುರಿದ ಕೀರ್ತಿ ಸುರೇಶ್ ಏನು ಹೇಳಿದ್ರು? title=

South Actress: ಮಲಯಾಳಿಯರು ಬಾಲ್ಯದಿಂದಲೂ ನೋಡುತ್ತಿರುವ ನಟಿ ಕೀರ್ತಿ ಸುರೇಶ್. ಮಲಯಾಳಂ ಸಿನಿಮಾ ಮೂಲಕ ಬಾಲನಟಿಯಾಗಿ ನಟಿಸಲು ಆರಂಭಿಸಿದ ಕೀರ್ತಿ ಇಂದು ದಕ್ಷಿಣ ಭಾರತದ ಪ್ರಮುಖ ನಾಯಕಿಯರಲ್ಲಿ ಒಬ್ಬರಾಗಿದ್ದಾರೆ. ನಿರ್ಮಾಪಕ ಜಿ ಸುರೇಶ್ ಕುಮಾರ್ ಹಾಗೂ ನಟಿ ಮೇನಕಾ ಅವರ ಪುತ್ರಿ ಕೀರ್ತಿ ಸ್ಟಾರ್ ಡಮ್ ವಿಷಯದಲ್ಲಿ ತುಂಬಾ ಮುಂದಿದ್ದಾರೆ.

ಇನ್ನು ಕೀರ್ತಿ ಸುರೇಶ್ ಕೂಡ ಗಾಸಿಪ್ ಗಳಿಂದ ನಿರಂತರವಾಗಿ ಸುದ್ದಿಯಲ್ಲಿರುವ ನಾಯಕಿ. ಕಳೆದ ಕೆಲವು ದಿನಗಳಿಂದ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೀರ್ತಿ ಮದುವೆ ಬಗ್ಗೆ ಚರ್ಚೆಯಾಗುತ್ತಿದೆ. ಅನಿರುದ್ಧ್ ಮತ್ತು ಕೀರ್ತಿ ಸುರೇಶ್ ಮದುವೆಯಾಗಲಿದ್ದಾರೆ ಅನ್ನೋದು ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿರುವ ದೊಡ್ಡ ಗಾಸಿಪ್‌. 

ಈ ಹಿಂದೆ ಕೀರ್ತಿ ಮತ್ತು ಅನಿರುದ್ಧ್ ಪ್ರೀತಿಸುತ್ತಿದ್ದಾರೆ ಮತ್ತು ಮದುವೆಯಾಗಲು ಯೋಜಿಸುತ್ತಿದ್ದಾರೆ ಎಂದು ಕೆಲವು ವರದಿಗಳು ಬಂದಿದ್ದವು. ಇದೀಗ ಈ ಗಾಸಿಪ್ ಮತ್ತೆ ಮರುಕಳಿಸುತ್ತಿದೆ. ಜವಾನ್ ಚಿತ್ರದ ಮೂಲಕ ಅನಿರುದ್ಧ್ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಹೊತ್ತಿನಲ್ಲಿ ಇವರಿಬ್ಬರ ಮದುವೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ಬಗ್ಗೆ ಅನಿರುದ್ಧ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. 

ಇದನ್ನೂ ಓದಿ-ಅತಿಲೋಕ ಸುಂದರಿಯ ಅಚ್ಚು..! ಮೋಡಿ ಮಾಡುತ್ತಿವೆ ಜಾನ್ವಿ ಫೋಟೋಸ್‌

ಆದರೆ ಇದೀಗ ಈ ವಿಚಾರವಾಗಿ ಕೀರ್ತಿ ಸುರೇಶ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ತಾನು ಮತ್ತು ಅನಿರುದ್ಧ ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳು ನಿಜವಲ್ಲ ಎಂದು ನಟಿ ಸ್ಪಷ್ಟಪಡಿಸಿದ್ದಾರೆ. ಅನಿರುದ್ಧ್ ತಮ್ಮ ಉತ್ತಮ ಸ್ನೇಹಿತ ಮಾತ್ರ ಎಂದು ಕೀರ್ತಿ ಸುರೇಶ್ ಹೇಳಿದ್ದಾರೆ. 

ಮಾದ್ಯಮದವರು ಕೀರ್ತಿ ಅವರಿಗೆ ಮದುವೆ ಯಾವಾಗ ಎಂದು ಕೇಳಿದಾಗ, "ಯಾವಾಗ ಆಗಬೇಕೋ ಆವಾಗ ಆಗುತ್ತೆ" ಎಂದು ನಟಿ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ಕೀರ್ತಿ ಅವರ ತಂದೆ ಸುರೇಶ್ ಕುಮಾರ್ ಕೂಡ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಕೀರ್ತಿ ಮತ್ತು ಅನಿರುದ್ಧ್ ಬಗ್ಗೆ ಬಂದಿರುವ ವರದಿಗಳು ಸಂಪೂರ್ಣ ನಿರಾಧಾರ ಎಂದು ಪ್ರತಿಕ್ರಿಯಿಸಿದ್ದರು.

ಕೀರ್ತಿ ಅವರ ಮದುವೆಗೆ ಸಂಬಂಧಿಸಿದಂತೆ ಈ ಹಿಂದೆಯೂ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದವು. ನಟಿ ದುಬೈನಲ್ಲಿ ಉದ್ಯಮಿ ಫರ್ಹಾನ್ ಬಿನ್ ಲಿಖಾಯತ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಮದುವೆ ನಡೆಯಲಿದೆ ಎಂದು ಗಾಸಿಪ್‌ಗಳು ಇದ್ದವು. ಆದರೆ ಇಂತಹ ಸುದ್ದಿಗಳನ್ನು ನಂಬಬೇಡಿ ಎಂದು ಕೀರ್ತಿ ಅವರ ತಂದೆ ಸುರೇಶ್ ಕುಮಾರ್ ಕೂಡ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ-SIIMA 2023 ದಲ್ಲೂ ʼಕಾಂತಾರʼ ಅಬ್ಬರ..! ದಿ ಡಿವೈನ್‌ ಚಿತ್ರಕ್ಕೆ ಸಾಲು ಸಾಲು ಅವಾರ್ಡ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News