ನಟಿ ಸಮಂತಾ- ನಾಗಜೈತನ್ಯ ಡಿವೋರ್ಸ್‌ಗೆ ಅಲ್ಲು ಅರ್ಜುನ್‌ ಈ ಸಿನಿಮಾ ಕಾರಣ.! ಏಕೆ ಗೊತ್ತಾ..?

Samantha divorce reason : ಸಮಂತಾ ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ಸ್ಟಾರ್‌ ನಟಿಯರಲ್ಲಿ ಒಬ್ಬರು. ಸ್ಯಾಮ್‌ ತೆಲುಗು ನಟ ನಾಗ ಚೈತನ್ಯ ಅವರನ್ನು 2017 ರಲ್ಲಿ ವಿವಾಹವಾಗಿದ್ದು ಎಲ್ಲರಿಗೂ ಗೊತ್ತಿದೆ. ಸಧ್ಯ ಸಮಂತಾ ಮತ್ತು ಚೈ ವಿಚ್ಛೇದನಕ್ಕೆ ಕಾರಣ ಏನು ಎನ್ನುವುದು ಬಹಿರಂಗವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ. 

Written by - Krishna N K | Last Updated : Jan 20, 2024, 11:56 AM IST
  • ಸಮಂತಾ ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ಸ್ಟಾರ್‌ ನಟಿಯರಲ್ಲಿ ಒಬ್ಬರು.
  • ಸಮಂತಾ -ನಾಗ ಚೈತನ್ಯ ಫ್ಯಾನ್ಸ್‌ ತೆರೆಯ ಮೇಲೆ ಮತ್ತು ಹೊರಗೆ ಹೆಚ್ಚು ಇಷ್ಟಪಡುವ ಜೋಡಿ.
  • ಕಾರಣಾಂತರದಿಂದ 2021ರಲ್ಲಿ, ಸಮಂತಾ ಮತ್ತು ನಾಗ ಚೈತನ್ಯ ಪರಸ್ಪರ ವಿಚ್ಛೇದನ ಪಡೆದರು.
ನಟಿ ಸಮಂತಾ- ನಾಗಜೈತನ್ಯ ಡಿವೋರ್ಸ್‌ಗೆ ಅಲ್ಲು ಅರ್ಜುನ್‌ ಈ ಸಿನಿಮಾ ಕಾರಣ.! ಏಕೆ ಗೊತ್ತಾ..? title=

Samantha Naga chaitanya : ಸಮಂತಾ -ನಾಗ ಚೈತನ್ಯ ಅಭಿಮಾನಿಗಳು ತೆರೆಯ ಮೇಲೆ ಮತ್ತು ಹೊರಗೆ ಹೆಚ್ಚು ಇಷ್ಟಪಡುವ ಜೋಡಿಗಳಲ್ಲಿ ಒಂದು. ʼಎಮ್‌ ಮಾಯಾ ಚೈಸಾವೆʼ ಸಿನಿಮಾ ಇಬ್ಬರು ನಟಿಸಿದ ಮೊದಲ ಚಿತ್ರ. ಅಲ್ಲದೆ, ಮಜಿಲಿ, ಮನಂ, ಆಟೋ ನಗರ ಸೂರ್ಯ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಜೊತೆಗೂಡಿ ಸಿನಿಮಾ ಮಾಡುತ್ತಲೇ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಲವ್‌, ಡೇಟಿಂಗ್ ಆರಂಭಿಸಿದ ಜೋಡಿ, ಅಕ್ಟೋಬರ್ 6, 2017 ರಂದು ಗೋವಾದಲ್ಲಿ ಸಪ್ತಪದಿ ತುಳಿದರು.

ನಂತರ ಸಮಂತಾ ತೆಲುಗಿನ ಸ್ಟಾರ್ ಕುಟುಂಬವಾದ ಅಕ್ಕಿನೇನಿ ಕುಟುಂಬದ ಪ್ರಮುಖ ಸದಸ್ಯರಾದರು. ಮೊದಲಿಗೆ ಅವರ ದಾಂಪತ್ಯ ಜೀವನ ಚೆನ್ನಾಗಿ ಸಾಗುತ್ತಿತ್ತು. ಒಟ್ಟಿಗೆ ನಟಿಸಿದ ಮೂರು ಚಿತ್ರಗಳು ಸಹ ಬಿಡುಗಡೆಯಾದವು. ಆದ್ರೆ ಕಾರಣಾಂತರದಿಂದ 2021ರಲ್ಲಿ, ಸಮಂತಾ ಮತ್ತು ನಾಗ ಚೈತನ್ಯ ಪರಸ್ಪರ ವಿಚ್ಛೇದನ ಪಡೆದರು. ಈ ಸುದ್ದಿ ಇಬ್ಬರ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನುಂಟು ಮಾಡಿತ್ತು. 

ಇದನ್ನೂ ಓದಿ:ಪುಷ್ಪಾ 2 ಚಿತ್ರಕ್ಕೆ ಗುಡ್ ಬೈ ಹೇಳಿದ ರಶ್ಮಿಕಾ.. ಕಾರಣ?

ನಟಿ ಸಮಂತಾ 2021 ರ 'ಪುಷ್ಪ: ದಿ ರೈಸ್' ಚಿತ್ರದಲ್ಲಿ ಒಂದೇ ಒಂದು ಹಾಡಿಗೆ ನೃತ್ಯ ಮಾಡಿದ್ದರು. ಸಮಂತಾ-ನಾಗಚೈತನ್ಯ ವಿಚ್ಛೇದನಕ್ಕೆ ಆಕೆಯ ಮಾದಕ ನೃತ್ಯವೇ ಕಾರಣ ಎಂದು ವ್ಯಾಪಕವಾಗಿ ವರದಿಯಾಗಿತ್ತು. ಆದರೆ ಈ ಬಗ್ಗೆ ಅವರಿಬ್ಬರೂ ಕ್ಯಾಮೆರಾ ಮುಂದೆ ಎಲ್ಲಿಯೂ ಮಾತನಾಡಿಲ್ಲ. ಹಲವಾರು ದಿನಗಳ ನಂತರ, ಸಮಂತಾ ತಮ್ಮ ವಿಚ್ಛೇದನದ ಕಾರಣದ ಬಗ್ಗೆ ಸುಳಿವು ನೀಡಿದ್ದಾರೆ, ಅಷ್ಟಕ್ಕೂ ಸ್ಯಾಮ್‌ ಹೇಳಿದ್ದೇನು ಗೊತ್ತಾ? 

ಸಮಂತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಆಗಾಗ ತಮ್ಮ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಅಭಿಮಾನಿಯೊಬ್ಬರು ʼನೀವು ನಿಮ್ಮ ಜೀವನವನ್ನು ರೀಲ್‌ನಲ್ಲಿ ತೆಗೆದುಕೊಂಡರೆ, ನೀವು ಯಾವ ಬ್ಲೂಪರ್‌ಗಳನ್ನು ನೋಡಿ ನಗುತ್ತೀರಿ? ಅದರಿಂದ ನೀನು ಕಲಿತ ಪಾಠವೇನು? ಎಂಬ ಪ್ರಶ್ನೆಯನ್ನು ಕೇಳಿದ್ದರು, ಅದಕ್ಕೆ ಸಮಂತಾ, ಇಷ್ಟ-ಅನಿಷ್ಟಗಳನ್ನು ಅರ್ಥಮಾಡಿಕೊಳ್ಳದಿರುವುದು ತನ್ನ ಜೀವನದ ದೊಡ್ಡ ತಪ್ಪು ಎಂದು ಪರಿಗಣಿಸುವುದಾಗಿ ಹೇಳಿದ್ದಾರೆ. ಅದರಲ್ಲಿ ತನ್ನ ಸಂಗಾತಿಯ ಪ್ರಭಾವವೇ ಹೆಚ್ಚು ಎಂದು ಸಮಂತಾ ತಿಳಿಸಿದ್ದಾರೆ. 

ಇದನ್ನೂ ಓದಿ:ಸೋನು ಸೂದ್ ಡೀಪ್ ಫೇಕ್ ವಿಡಿಯೋ ವೈರಲ್‌..! ಫ್ಯಾನ್ಸ್‌ಗೆ ಎಚ್ಚರಿಕೆ ನೀಡಿದ ನಟ

ಸಧ್ಯ ಸಮಂತಾ ಅವರ ಈ ಉತ್ತರ ಅವರ ಅಭಿಮಾನಿಗಳನ್ನು ಯೋಚಿಸುವಂತೆ ಮಾಡಿದೆ. ತೆಲುಗು ಚಿತ್ರರಂಗದ ಅಕ್ಕಿನೇನಿ ಕುಟುಂಬಕ್ಕೆ ಸೇರಿದ ಸಮಂತಾ ʼಪುಷ್ಪʼ ಸಿನಿಮಾದಲ್ಲಿ ಐಟಂ ಸಾಂಗ್‌ನಲ್ಲಿ ಕುಣಿದು ಕುಪ್ಪಳಿಸಿದ್ದು ಹಲವರ ಟೀಕೆಗೆ ಗುರಿಯಾಗಿತ್ತು. ಅಂತೆಯೇ ಇದಕ್ಕೆ ಆಕೆಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದು, ಸಮಂತಾ ಅಕ್ಕಿಕೇನಿ ಕುಟುಂಬ ನಿಯಮ ಉಲ್ಲಂಘನೆಯೇ ವಿಚ್ಛೇದನಕ್ಕೆ ಕಾರಣ ಎನ್ನಲಾಗಿದೆ. ಆದರೆ ಇದು ಅಧಿಕೃತವಲ್ಲ.

ಏಕೆಂದರೆ ವಿಚ್ಛೇದನದ ನಂತರವೂ ಇಬ್ಬರು ಪರಸ್ಪರ ಗೌರವಿಸುತ್ತಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಅವರು ಸಹ ಸ್ಯಾಮ್‌ ಕಂಡರೆ ಪ್ರೀತಿಯಿಂದ ಮಾತನಾಡಿಸುತ್ತಾರೆ. ಡಿವೋರ್ಸ್‌ಗೆ ಬೇರೆ ಕಾರಣವಿರಬಹುದು ಆದರೆ, ಪುಷ್ಪಾ ಸಿನಿಮಾವಂತೂ ಕಾರಣವಲ್ಲ ಎಂದು ಅಕ್ಕಿನೇನಿ ಮತ್ತು ಸಮಂತಾ ಡೈ ಹಾರ್ಡ್‌ ಅಭಿಮಾನಿಗಳ ಮಾತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News