ಬೆಂಗಳೂರು: ಆಶಿಕಾ ಚಂದ್ರಪ್ಪ...ʻಜೊತೆಜೊತೆಯಲಿʼ ಧಾರಾವಾಹಿಯಲ್ಲಿ ಟೀಚರ್ ರೋಲ್‌ಗೆ ಬಣ್ಣ ಹಚ್ಚಿ ತದನಂತರ ಬಿಗ್‌ಬಾಸ್ ಸೀಸನ್ 5ರಲ್ಲಿ ಕಂಟೆಸ್ಟೆಂಟ್ ಆಗಿ ಪ್ರೇಕ್ಷಕರ ಮನಗೆದ್ದ ನಟಿ..ಆಶಿಕಾ ಕಳೆದ ವರ್ಷ ಮಾರ್ಚ್ 31ರಂದು ಉದ್ಯಮಿ ರೋಹನ್ ರಾಘವೇಂದ್ರ ಜೊತೆ ಬೆಂಗಳೂರಿನ (Bengaluru) ಅಂಗನಾ ಕೋರ್ಟ್‌ಯಾರ್ಡ್‌ನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ರು.ಆಶಿಕಾ ಹಾಗೂ ರೋಹನ್ ಮದುವೆಗೆ ಕುಟುಂಬಸ್ಥರು ಸ್ನೇಹಿತರು ಹಾಗೂ ಒಂದಿಷ್ಟು ಚಿತ್ರರಂಗದ ಕಲಾವಿದರು ಕೂಡಾ ಸಾಕ್ಷಿಯಾಗಿದ್ದರು.
ಆಶಿಕಾ ಹಾಗೂ ರೋಹನ್ ಮದುವೆಯಾಗಿ ಇಂದಿಗೆ ಬರೋಬ್ಬರಿ ಒಂದು ವರ್ಷ ಕಳೆದಿದ್ದು ಮೊದಲ ವೆಡ್ಡಿಂಗ್ ಆನಿವರ್ಸರಿ ಸಂಭ್ರಮದಲ್ಲಿದ್ದಾರೆ..ವಿಶೇಷ ಅಂದ್ರೆ ಗೋವಾದಲ್ಲಿ ಆನಿವರ್ಸರಿ ಸೆಲೆಬ್ರೇಟ್ ಮಾಡ್ತಾಯಿದ್ದು, ಸದ್ಯ ಆ ಫೋಟೊಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ..ಆ ಫೋಟೋಗಳು ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ಶುಭ ಹಾರೈಕೆಯ ಮಹಾಪೂರವೇ ಹರಿದು ಬಂದಿದೆ.
ಇದನ್ನೂ ಓದಿ: Ab de Villiers : ವಿರಾಟ್ ಕೊಹ್ಲಿ ಬಗ್ಗೆ ಭವಿಷ್ಯ ನುಡಿದ ಎಬಿ ಡಿವಿಲಿಯರ್ಸ್!
ಮದುವೆಯದ ಬಳಿಕ ಲೈಫ್‌ನ ಸಖತ್ ಎಂಜಾಯ್ ಮಾಡ್ತಾಯಿರೋ ಆಶಿಕಾ, ಚಿಕ್ಕಮಗಳೂರಿನ ತನ್ನ ಅತ್ತೆಯ ಮನೆಯಲ್ಲಿ ಹೆಚ್ಚಾಗಿ ಇರ್ತಾರಂತೆ.ಅದರಲ್ಲೂ ತಿಂಗಳಲ್ಲಿ 15 ದಿವಸ ಬೆಂಗಳೂರಿನಲ್ಲಿದ್ರೆ ಇನ್ನು ಉಳಿದ 15ದಿನಗಳು ಚಿಕ್ಕಮಗಳೂರಿನಲ್ಲಿ ಕಳೆಯುತ್ತಾರಂತೆ.. ಸದ್ಯ ಚಿತ್ರರಂಗದಿಂದ ದೂರ ಉಳಿದಿರುವ ಆಶಿಕಾ ಯಾವಾಗ ಮತ್ತೆ ಬರ್ತಾರೆ ಎಂಬ ಪ್ರಶ್ನೆಯನ್ನು ಅವ್ರ ಫ್ಯಾನ್ಸ್ ಕೇಳ್ತಿದ್ದಾರೆ. ಆದ್ರೆ ಈ ಪ್ರಶ್ನೆಗೆ ಆಶಿಕಾ ಕಡೆಯಿಂದ ಯಾವ ಉತ್ತರವೂ ಸಿಕ್ಕಿಲ್ಲ.
ಇದನ್ನೂ ಓದಿ: ‘ಜನರು ತಿರಸ್ಕರಿಸುವ ಭಯವನ್ನು ಮತಯಂತ್ರದ ಮೇಲೆ ಹಾಕುವುದೇಕೆ?’
ಇನ್ನೂ ಅಭಿನಯ ಹೊರತು ಪಡಿಸಿ, ಆಶಿತಾ ಬ್ಯುಸಿನೆಸ್ ವುಮೆನ್ ಸಹ ಹೌದು. ತಮ್ಮದೇ ಬಟ್ಟೆ ಬ್ರ್ಯಾಂಡ್‌ವೊಂದರ ಒಡತಿ.ಇನ್‌ಸ್ಟಾಗ್ರಾಂನಲ್ಲಿ ಈ ಬಟ್ಟೆಗಳ ಪೇಜ್ ಕೂಡ ತುಂಬಾನೇ ಫೇಮಸ್. ಒಟ್ಟಿನಲ್ಲಿ ಮೊದಲ ವರ್ಷದ ಮದುವೆ ಸಂಭ್ರಮದಲ್ಲಿರುವ ಆಶಿಕಾ ಹಾಗೂ ರೋಹನ್ ಯಾವಾಗ್ಲೂ ಹೀಗೇ ಖುಷಿ ಖುಷಿಯಾಗಿರಲಿ ಎಂಬುವುದು ನಮ್ಮ ಆಶಯ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.