Urfi Javed: ಮತ್ತೆ ಹೊಸ ಅವತಾರದಲ್ಲಿ ಪಡ್ಡೆಹುಡುಗರ ನಿದ್ದೆಗೆಡಿಸಿದ ಉರ್ಫಿ ಜಾವೇದ್!

ಉರ್ಫಿ ಜಾವೇದ್ ಮತ್ತೊಂದು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಇದನ್ನು ನೋಡಿದ ಅಭಿಮಾನಿಗಳು ಹೌಹಾರಿ ಹೋಗಿದ್ದಾರೆ.

Written by - Zee Kannada News Desk | Last Updated : Aug 26, 2022, 01:28 PM IST
  • ಮತ್ತೆ ಹೊಸ ಅವತಾರದಲ್ಲಿ ಬಂದ ಬಾಲಿವುಡ್ ನಟಿ ಉರ್ಫಿ ಜಾವೇದ್
  • ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ ನಟಿ
  • ಉರ್ಫಿ ಜಾವೇದ್ ಹೊಸ ಅವತಾರ ಕಂಡು ಹೌಹಾರಿದ ಅಭಿಮಾನಿಗಳು
Urfi Javed: ಮತ್ತೆ ಹೊಸ ಅವತಾರದಲ್ಲಿ ಪಡ್ಡೆಹುಡುಗರ ನಿದ್ದೆಗೆಡಿಸಿದ ಉರ್ಫಿ ಜಾವೇದ್! title=
ಹೊಸ ಅವತಾರದಲ್ಲಿ ಬಾಲಿವುಡ್ ನಟಿ ಉರ್ಫಿ ಜಾವೇದ್!

ನವದೆಹಲಿ: ಬಾಲಿವುಡ್ ನಟಿ ಉರ್ಫಿ ಜಾವೇದ್ ಮತ್ತೊಮ್ಮೆ ಹೊಸ ಅವತಾರದಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ಕಣ್ಣು ಕುಕ್ಕುವ ಉಡುಪಿನಲ್ಲಿ ಕಾಣಿಸಿಕೊಂಡಿರುವ ಈ ನಟಿಯ ಬೋಲ್ಡ್ ಅವತಾರ ಕಂಡು ಅಭಿಮಾನಿಗಳೇ ಶಾಕ್ ಆಗಿದ್ದಾರೆ.

‘ಬಿಗ್ ಬಾಸ್’ ಒಟಿಟಿಯಲ್ಲಿ ಕಾಣಿಸಿಕೊಂಡ ಬಳಿಕ ಉರ್ಫಿ ಜಾವೇದ್‍ಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಯಿತು. ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಉರ್ಫಿ ವಿಭಿನ್ನ ಹಾಗೂ ಸಖತ್ ಹಾಟ್ ಬಟ್ಟೆಗಳನ್ನು ಧರಿಸುವ ಮೂಲಕ ಪ್ರಸಿದ್ಧಿಯಾಗಿದ್ದಾರೆ.

ಇದನ್ನೂ ಓದಿ: Dolly Dhananjay : ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ ಡಾಲಿ ನಿರ್ಧಾರ!

ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಆಗಾಗ ಹಾಟ್ ಹಾಟ್ ಬಟ್ಟೆ ಧರಿಸಿರುವ ಫೋಟೋಗಳನ್ನು ಉರ್ಫಿ ಅಪ್ಲೋಡ್ ಮಾಡುತ್ತಿರುತ್ತಾರೆ. ಹೀಗಾಗಿ ಈ ನಟಿಗೆ ದೊಡ್ಡ ಅಭಿಮಾನಿ ಬಳಗವಿದೆ. ಚಿತ್ರ-ವಿಚಿತ್ರ ಬಟ್ಟೆಗಳಿಂದಲೇ ಈ ನಟಿ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೊಂದು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಇದನ್ನು ನೋಡಿದ ಅಭಿಮಾನಿಗಳು ಹೌಹಾರಿ ಹೋಗಿದ್ದಾರೆ.

 
 
 
 

 
 
 
 
 
 
 
 
 
 
 

A post shared by Uorfi (@urf7i)

ಉರ್ಫಿ ಜಾವೇದ್ ತಮ್ಮ Instagram ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕಣ್ಣು ಕುಕ್ಕುವ ವಿಚಿತ್ರ ಬಟ್ಟೆ ಧರಿಸುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ ಈ ನಟಿ. ‘ನೃತ್ಯತಾರೆಗಳ ಹೊಳಪು, ಮಿನುಗು ಮತ್ತು ನಕ್ಷತ್ರಪುಂಜದ ಸೌಂದರ್ಯವು ನನ್ನ ವಿಶಿಷ್ಟವಾದ ಉಡುಪಿಗೆ ಸ್ಫೂರ್ತಿಯಾಗಿದೆ. ನಾನು ನಕ್ಷತ್ರಗಳನ್ನು ತಲುಪುತ್ತೇನೆ ಮತ್ತು ಯಾವಾಗಲೂ ಬೆಳಗಲು ಆಶಿಸುತ್ತೇನೆ! ನನ್ನ ಉಡುಗೆಯೂ ಅದನ್ನೇ ಮಾಡುತ್ತದೆ!’ ಎಂದು ನಟಿ ಕ್ಯಾಪ್ಶನ್ ಬರೆದಿದ್ದಾರೆ.

ಇದನ್ನೂ ಓದಿ: ಕಿಚ್ಚನ ಬರ್ತ್ ಡೇಗೆ ಸುದೀಪಿಯನ್ಸ್ ಗೆ ಸ್ಪೆಷಲ್ ಗಿಫ್ಟ್.. Zee5 ಒಟಿಟಿಗೆ ಲಗ್ಗೆ ಇಡ್ತಿದ್ದಾನೆ ವಿಕ್ರಾಂತ್ ರೋಣ

ನಟಿಯ ಹೊಸ ಅವತಾರ ಮತ್ತು ಬಟ್ಟೆ ಕಂಡು ಅನೇಕರು ಬೆಚ್ಚಿಬಿದ್ದಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಇದ್ಯಾವ ಡ್ರೆಸ್..? ಇದೆಲ್ಲಾ ನಟಿಗೆ ಬೇಕಿತ್ತಾ ಅಂತಾ ಅನೇಕರು ಪ್ರಶ್ನಿಸಿದ್ದಾರೆ. ಅನೇಕರು ಹೃದಯದ ಇಮೋಜಿ ಕಳಿಸಿ ಖುಷಿಪಟ್ಟಿದ್ದಾರೆ. ನಟಿಯ ಧೈರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News