The Vaccine War : ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ತಮ್ಮ ಮುಂದಿನ ಸಿನಿಮಾದ ಹೆಸರು 'ದಿ ವ್ಯಾಕ್ಸಿನ್ ವಾರ್' ಅಂತ ಘೋಷಣೆ ಮಾಡಿದಾಗಿನಿಂದ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಕಾಶ್ಮೀರಿ ಫೈಲ್ ನಂತರ ವಿವೇಕ್ ಅವರ ಸಿನಿಮಾಗಳ ಮೇಲೆ ಭಾರಿ ನಿರೀಕ್ಷೆ ಹುಟ್ಟುಕೊಂಡಿದ್ದು, ಇದೀಗ ದಿ ವಾಕ್ಸಿನ್ ವಾರ್ ಮೂಲಕ ಅಗ್ನಿಹೋತ್ರಿ ಮತ್ತೊಮ್ಮೆ ದಾಖಲೆ ಸೃಷ್ಟಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಈ ಹಿಂದೆ ಕೇವಲ ಸಿನಿಮಾದ ಹೆಸರನ್ನು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಿಳಿಸಿದ್ದರು. ಅಂದಿನಿಂದ ಸಿನಿ ಅಭಿಮಾನಿಗಳು ಮುಂದಿನ ಅಪ್ಡೆಟ್ಸ್ಗಾಕಿ ಬಕ ಪಕ್ಷಿಗಳಂತೆ ಕಾತುರದಿಂದ ಕಾಯುತ್ತಿದ್ದರು. ಇದೀಗ ಚಿತ್ರತಂಡ ಚಿತ್ರದ ಚಿತ್ರೀಕರಣ ಪ್ರಾರಂಭಿಸಲು ಸಿದ್ಧರಾಗಿರುವುದಾಗಿ ಅನೌನ್ಸ್ ಮಾಡಿದ್ದು, ಸಿನಿಮಾ ಅಭಿಮಾನಿಗಳ ಖುಷಿ ಹೆಚ್ಚಳಕ್ಕೆ ಕಾರಣವಾಗಿದೆ. ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ವಿವೇಕ್ ಅವರು ತಮ್ಮ ಮುಂಬರುವ 'ದಿ ವ್ಯಾಕ್ಸಿನ್ ವಾರ್' ಸಿನಿಮಾದ ಚಿತ್ರೀಕರಣ ಪ್ರಾರಂಭಿಸಲು ಸಿದ್ಧರಾಗಿದ್ದು, ತಮ್ಮ ತಂಡದೊಂದಿಗೆ ಇರುವ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, "ಶೂಟ್ ಮಾಡಲು ಸಿದ್ಧವಾಗುತ್ತಿದ್ದೇವೆ. #TheVaccineWar #Research" ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಎಕ್ಸ್ ಬಾಯ್ಫ್ರೆಂಡ್ ಜೊತೆ ಮಾಲ್ಡೀವ್ಸ್ನಲ್ಲಿ ಜಾನ್ವಿ : ಗುಟ್ಟು ರಟ್ಟು ಮಾಡಿದ ಸ್ಟೇಟಸ್..!
ಇದಲ್ಲದೆ, 'ದಿ ವ್ಯಾಕ್ಸಿನ್ ವಾರ್' ಎಂಬುದು ಅಂತ್ಯವಿಲ್ಲದ, ಸಮಯದ ಪರಿವಿಲ್ಲದೆ, ಸತತವಾಗಿ ಶ್ರಮವಹಿಸಿ ಜನರ ಪ್ರಾಣ ಉಳಿಸಿದ ವೈದ್ಯರು, ದಾದಿಯರು ಮತ್ತು ವಿಜ್ಞಾನಿಗಳಿಗೆ ಸಮರ್ಪಣೆ ಗೌರವವನ್ನು ನೀಡುವ ಚಲನಚಿತ್ರವಾಗಿದೆ. ಚಿತ್ರದ ಕಥೆಯನ್ನು 3200 ಪುಟಗಳಲ್ಲಿ ಬರೆಯಲಾಗಿದೆ. 82 ಜನರು ಹಗಲು ರಾತ್ರಿ ಕಥೆಗಾಗಿ ಕೆಲಸ ಮಾಡಿದ್ದಾರೆ. ಸಮರ್ಥ ಸಂಶೋಧನೆ ನಡೆಸಲು, ತಂಡವು ನಿಜವಾದ ವಿಜ್ಞಾನಿ ಮತ್ತು ಲಸಿಕೆ ಅಭಿವೃದ್ಧಿಪಡಿಸಿದ ಜನರನ್ನು ಭೇಟಿಯಾಗಿದೆ.
Getting ready to shoot. #TheVaccineWar #Research pic.twitter.com/xo53Lk00yb
— Vivek Ranjan Agnihotri (@vivekagnihotri) December 10, 2022
'ದಿ ವ್ಯಾಕ್ಸಿನ್ ವಾರ್' 15ನೇ ಆಗಸ್ಟ್ 2023, ಸ್ವಾತಂತ್ರ್ಯ ದಿನದಂದು ಬಿಡುಗಡೆಯಾಗಲಿದೆ ಮತ್ತು ಹಿಂದಿ, ಇಂಗ್ಲಿಷ್, ತೆಲುಗು, ತಮಿಳು, ಮಲಯಾಳಂ, ಕನ್ನಡ, ಭೋಜ್ಪುರಿ, ಪಂಜಾಬಿ, ಗುಜರಾತಿ, ಮರಾಠಿ ಮತ್ತು ಬೆಂಗಾಲಿ ಸೇರಿದಂತೆ 10ಕ್ಕೂ ಹೆಚ್ಚು ಭಾಷೆಗಳಲ್ಲಿ ತೆರೆಗೆ ಬರಲಿದೆ. ಚಿತ್ರವನ್ನು ಪಲ್ಲವಿ ಜೋಶಿ ನಿರ್ಮಿಸಿದ್ದಾರೆ. 'ಐ ಆಮ್ ಬುದ್ಧ ಫೌಂಡೇಶನ್' ನಿಂದ ಬಂದಿದ್ದಾರೆ. ಇದು ಸಂಪೂರ್ಣವಾಗಿ ಸ್ವತಂತ್ರ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿದೆ. ಬಾಲಿವುಡ್ ಲಾಬಿ ಎಂದು ಕರೆಯಲ್ಪಡುವ ಯಾವುದೇ ಸಂಬಂಧವಿಲ್ಲ ಎಂದು ನಿರ್ದೇಶಕರು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.