ನ್ಯೂಯಾರ್ಕ್‌ನಲ್ಲಿ ಯುವತಿಯೊಂದಿಗೆ ಸಿಕ್ಕಿ ಬಿದ್ದ ನಟ ವಿಶಾಲ್‌ ವಿಡಿಯೋ ವೈರಲ್!

Vishal Video Viral: ತಮಿಳು ನಟ ವಿಶಾಲ್‌ ನ್ಯೂಯಾರ್ಕ್‌ನಲ್ಲಿ ಮಾಲ್‌ನಿಂದ ಯುವತಿ ಜೊತೆಗೆ ಹೊರ ಬರುತ್ತಿರುವ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ.

Written by - Zee Kannada News Desk | Last Updated : Dec 27, 2023, 09:33 AM IST
  • ಇತ್ತೀಚೆಗೆ ತೆರೆಕಂಡ 'ಮಾರ್ಕ್ ಆಂಟನಿ' ಚಿತ್ರ ಕೂಡ ಸೂಪರ್‌ ಹಿಟ್ ಆಗಿದ್ದು, ಇನ್ನು ವಿಶಾಲ್ ಮದುವೆ ಬಗ್ಗೆ ಪದೇ ಪದೆ ಚರ್ಚೆ ನಡೆಯುತ್ತಲೇ ಇರುತ್ತದೆ.
  • ಇಷ್ಟೇ ಅಲ್ಲದೇ ನಟಿ ಅಭಿನಯ ಜೊತೆ ಮದುವೆ ಆಗುತ್ತಾರೆ ಎನ್ನುವ ವದಂತಿಗಳನ್ನು ಹರಿಬಿಡಲಾಗಿತ್ತು.
  • ವಿಶಾಲ್‌ನ ಈ ವಿಡಿಯೋ ನೋಡದವರಲ್ಲಿ ಮತ್ತೆ ಕೆಲವು ಮಂದಿ ಇದು ಸಿನಿಮಾ ಚಿತ್ರೀಕರಣದ ವಿಡಿಯೋ? ಎಂದು ಅನುಮಾನಿಸುತ್ತಿದ್ದಾರೆ.
ನ್ಯೂಯಾರ್ಕ್‌ನಲ್ಲಿ ಯುವತಿಯೊಂದಿಗೆ ಸಿಕ್ಕಿ ಬಿದ್ದ ನಟ ವಿಶಾಲ್‌ ವಿಡಿಯೋ ವೈರಲ್! title=

Actor Vishal Caught In New York: ಕಾಲಿವುಡ್‌ ಸ್ಟಾರ್‌ ವಿಶಾಲ್ ಕನ್ನಡ ಸಿನಿರಸಿಕರಿಗೂ ಚಿರಪರಿಚಿತರಾಗಿದ್ದು, ಹಲವಾರು ತಮಿಳು ಸಿನಿಮಾಗಳಲ್ಲಿ ಈ ನಟ ಅಭಿನಯಿಸಿ ಗೆದ್ದಿದ್ದಾರೆ. ಇತ್ತೀಚೆಗೆ  ತೆರೆಕಂಡ 'ಮಾರ್ಕ್ ಆಂಟನಿ' ಚಿತ್ರ ಕೂಡ ಸೂಪರ್‌ ಹಿಟ್ ಆಗಿದ್ದು, ಇನ್ನು ವಿಶಾಲ್ ಮದುವೆ ಬಗ್ಗೆ ಪದೇ ಪದೆ ಚರ್ಚೆ ನಡೆಯುತ್ತಲೇ ಇರುತ್ತದೆ. ಈ ಹಿಂದೆ ಕೆಲ ನಟಿಯರ ಜೊತೆಗೂ ವಿಶಾಲ್ ಹೆಸರು ತಳುಕು ಹಾಕಿಕೊಂಡಿದ್ದು, ಅದರಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ಲಕ್ಷ್ಮಿ ಮೆನನ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಗುಲ್ಲಾಗಿತ್ತು. 

ಇಷ್ಟೇ ಅಲ್ಲದೇ  ನಟಿ ಅಭಿನಯ ಜೊತೆ ಮದುವೆ ಆಗುತ್ತಾರೆ ಎನ್ನುವ ವದಂತಿಗಳನ್ನು ಹರಿಬಿಡಲಾಗಿತ್ತು. ಇದಕ್ಕೂ ಮುಂಚೆ ಅನಿಶಾ ಎಂಬಾಕೆಯ ಜೊತೆ ನಟ ವಿಶಾಲ್ ಎಂಗೇಜ್‌ಮೆಂಟ್ ಕೂಡ ನಡೆದಿದ್ದು, ಆದರೆ ಕಾರಣಾಂತರಗಳಿಂದ ಅದು ಮುರಿದುಬಿದ್ದಿತ್ತು. ಸದ್ಯ ವಿಶಾಲ್ ನ್ಯೂಯಾರ್ಕ್‌ನಲ್ಲಿದ್ದು, ಈತ  ಮಾಲ್‌ವೊಂದರ ಒಳಗಿಂದ ಹುಡುಗಿಯ ಜೊತೆ ಹೊರಗೆ ಬರುವುದು. ನೀವು ವಿಶಾಲ್ ಅಲ್ವಾ? ಎನ್ನುತ್ತಿದ್ದಂತೆ ಮುಖ ಮುಚ್ಚಿಕೊಂಡು ಓಡಿ ಹೋಗುವಂತಹ ವಿಡಿಯೋ ವೈರಲ್ ಆಗುತ್ತಿದೆ. 

ಇದನ್ನೂ ಓದಿ: ನಿರೂಪ್ ಭಂಡಾರಿಗೆ ಜೋಡಿಯಾದರು ಬೃಂದಾ ಆಚಾರ್ಯ

ಹೌದು.. ನಟ ವಿಶಾಲ್‌ ಮಾಲ್‌ ಒಳಗಿಂದ ಹುಡುಗಿಯ ಜೊತೆ ಹೊರಗೆ ಬರುವ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದ್ದಂತೆ, ವಿಶಾಲ್ ಜೊತೆ ಕಾಣಿಸಿಕೊಂಡ ಆ ಯುವತಿ ಯಾರು? ಏನ್ ಕಥೆ? ಎಂದು ಕೆಲವರು ಕೇಳುತ್ತಿದ್ದಾರೆ. ಹಾಗೇ ವಿಡಿಯೋದಲ್ಲಿರೋದು ವಿಶಾಲ್ ಹೌದೋ ಅಲ್ವೋ ಎಂದು ಚರ್ಚಿಸುವವರು ಇದ್ದು, ಮತ್ತೆ ಕೆಲವರು ಇದು ಫೇಕ್ ವಿಡಿಯೋ ಎನ್ನುತ್ತಿದ್ದಾರೆ. ಇನ್ನೂ ಹಲವರು ಸಿನಿಮಾ ಪಬ್ಲಿಸಿಟಿಗಾಗಿ ಈ ರೀತಿಯ ವಿಡಿಯೋ ವೈರಲ್ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. 

ವಿಶಾಲ್‌ನ ಈ ವಿಡಿಯೋ ನೋಡದವರಲ್ಲಿ ಮತ್ತೆ ಕೆಲವು ಮಂದಿ ಇದು ಸಿನಿಮಾ ಚಿತ್ರೀಕರಣದ ವಿಡಿಯೋ? ಎಂದು ಅನುಮಾನಿಸುತ್ತಿದ್ದಾರೆ. ಹಾಗೆ ಇಆ ವಿಡಯೋವನ್ನು ಸರಿಯಾಗಿ ಗಮನಿಸಿದರೆ ಇದು ಫೇಕ್, ಪಬ್ಲಿಸಿಟಿ ಗಿಮಿಕ್ ಎನ್ನುವುದು ಅರ್ಥವಾಗುತ್ತದೆ ಎಂದು ಕೆಲವರು ವಾದಿಸುತ್ತಿದ್ದಾರೆ. ಆದರೆ ಈ ಬಗ್ಗೆ ಸ್ವತಃ ವಿಶಾಲ್ ಮಾತನಾಡಬೇಕಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News