Virushka : ವೈರಲ್ ಆಯ್ತಾ ವಿರಾಟ್ ಅನುಷ್ಕಾ ಪುತ್ರಿಯ ಫೋಟೋ...?

ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯ ತೋಳಿನಲ್ಲಿರುವ ನವಜಾತ ಶಿಶುವಿನ ಪೋಟೋ ಎಲ್ಲೆಡೆ ಹರಿದಾಡುತ್ತಿದೆ. ಇದು ಅನುಷ್ಕಾ ವಿರಾಟ್ ಪುತ್ರಿ ಎಂದು ಹೇಳಲಾಗುತ್ತಿದೆ.

Written by - Ranjitha R K | Last Updated : Jan 12, 2021, 06:17 PM IST
  • ವಿರಾಟ್ ಕೊಹ್ಲಿ, ಅನುಷ್ಕಾಗೆ ಹರಿದು ಬರುತ್ತಿದೆ ಅಭಿನಂದನೆ
  • ವೈರಲ್ ಆಯ್ತು ನವಜಾತ ಶಿಶುವೊಂದರ ಫೋಟೋ
  • ವಿರುಷ್ಕಾ ಪುತ್ರಿಯ ಫೋಟೋ ಎಂದೇ ವೈರಲ್
Virushka : ವೈರಲ್ ಆಯ್ತಾ ವಿರಾಟ್ ಅನುಷ್ಕಾ ಪುತ್ರಿಯ ಫೋಟೋ...?  title=
ವಿರುಷ್ಕಾ ಪುತ್ರಿಯ ಫೋಟೋ ಎಂದೇ ವೈರಲ್ ಆಗುತ್ತಿರುವ ಫೋಟೋ (photo twitter)

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ  ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಪುತ್ರಿಯ ಜನನದ ಸುದ್ದಿ ಹೊರ ಬೀಳುತ್ತಿದ್ದಂತೆ ಇವರಿಬ್ಬರ ಅಭಿಮಾನಿಗಳು  ಸಂತೋಷದಿಂದ ಕುಣಿದಾಡುತ್ತಿದ್ದಾರೆ. ನಿನ್ನೆಯಿಂದ ಸೋಶಿಯಲ್ ಮೀಡಿಯಾ ತುಂಬಾ  ವಿರುಷ್ಕಾ(Virushka) ಫೋಟೋಗಳದ್ದೇ ಕಾರುಬಾರು.. ಇಬ್ಬರಿಗೂ ಎಲ್ಲೆಡೆಯಿಂದ  ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. 

ವೈರಲ್ ಆಯ್ತಾ ವಿರುಷ್ಕಾ  ಪುತ್ರಿಯ ಪೋಟೋ : 
ನಿನ್ನೆ ಮಧ್ಯಾಹ್ನ  ಮುಂಬಯಿಯ ಖಾಸಗಿ ಆಸ್ಪತ್ರೆಯಲ್ಲಿ ಅನುಷ್ಕಾ (Anushka Sharma) ಹೆಣ್ಣು ಮಗುವಿಗೆ ಜನ್ಮ  ನೀಡಿದ್ದಾರೆ. ತಾಯಿ  ಮಗು  ಇಬ್ಬರೂ ಆರೋಗ್ಯವಾಗಿದ್ದು, ಈ ವಿಚಾರವನ್ನು ವಿರಾಟ್ ಕೊಹ್ಲಿ (Virat Kohli) ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇದಾದ ನಂತರ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರ ಪುತ್ರಿಯ ಫೋಟೋ ನೋಡಲು ಕಾತುರರಾಗಿದ್ದಾರೆ. ಹೀಗಿರುವಾಗ  ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯ ತೋಳಿನಲ್ಲಿರುವ ನವಜಾತ ಶಿಶುವಿನ ಪೋಟೋ ಎಲ್ಲೆಡೆ ಹರಿದಾಡುತ್ತಿದೆ. ಇದು ಅನುಷ್ಕಾ ವಿರಾಟ್ ಪುತ್ರಿ (Anushka Virat Baby) ಎಂದು ಹೇಳಲಾಗುತ್ತಿದೆ.

 

ಇದನ್ನೂ ಓದಿ : ವಿರುಷ್ಕಾ ದಂಪತಿ ಪುತ್ರಿ 'AnVi' ನಿವಾಸ ಹೇಗಿದೆ ಗೊತ್ತಾ?

ಅಭಿಮಾನಿಗಳೂ ಶೇರ್ ಮಾಡುತ್ತಿದ್ದಾರೆ  ಈ ಫೋಟೋ :
ಈ ಚಿತ್ರದಲ್ಲಿರುವ  ಮಹಿಳೆ ಅನುಷ್ಕಾ ಶರ್ಮಾ ಮತ್ತು ನವಜಾತ ಶಿಶು ಅನುಷ್ಕಾ ಶರ್ಮಾ ಅವರದ್ದು ಎಂದು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ. ಇವರಿಬ್ಬರ ಅಭಿಮಾನಿಗಳು  ಕೂಡಾ ಈ ಫೋಟೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಫೋಟೋ ಹಿಂದಿನ ಸತ್ಯ ಏನು ? :
ಆದರೆ ಸತ್ಯ ಬೇರೆಯೇ ಇದೆ. ಈ ಫೋಟೋ ಅನುಷ್ಕಾ ಮತ್ತು ವಿರಾಟ್ ಪುತ್ರಿಯದ್ದಲ್ಲ.  ಇದು ಏಜನ್ಸಿಯೊಂದರ ಫೋಟೋ. ಈ ಏಜೆನ್ಸಿ  ಮೀಡಿಯಾ ಹೌಸ್ ಗಳಿಗೆ ಲೈಫ್  ಸ್ಟೈಲ್ ಮತ್ತು ನವಜಾತ ಶಿಶುಗಳಿಗೆ ಸಂಬಂಧಿಸಿದ ಸುದ್ದಿಗಳಿಗೆ ಬೇಕಾಗುವ ಫೋಟೋಗಳನ್ನು ಒದಗಿಸುತ್ತದೆ. ಮೂಲಗಳ ಪ್ರಕಾರ ಈ ಫೋಟೋ  2009ರಿಂದಲೇ ಇಂಟರ್ ನೆಟ್ ಗಳಲ್ಲಿ (Internet) ಲಭ್ಯವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News