Top 25 Global Instagram Influencer ಪಟ್ಟಿ ಸೇರಿದ ವಿರಾಟ್ - ಅನುಷ್ಕಾ

Top 25 Global Instagram Influencer: ಈ ಪಟ್ಟಿಯನ್ನು ತಯಾರಿಸಲು 1000 ಸೇಲಿಬ್ರಿಟಿಗಳ ಇನ್ಸ್ಟಾಗ್ರಾಮ್ ಖಾತೆಗಳನ್ನು ಅವುಗಳ ಆಡಿಯನ್ಸ್ ಗುಣಮಟ್ಟ ಹಾಗೂ ಆಥೆಂಟಿಕ್ ಎಂಗೇಜ್ಮೆಂಟ್ ಆಧಾರದ ಮೇಲೆ ಶ್ರೇಯಾಂಕ ಮಾಡಲಾಗಿತ್ತು. ಸಾಮಾಜಿಕ ಮಾಧ್ಯಮದ ಮೂಲಕ ಈ ಸೆಲಿಬ್ರಿಟಿಗಳು ಜಾಗರೂಕತೆ ಪಸರಿಸಲು, ತಮ್ಮ ಮಾತಿನಿಂದ ಎಷ್ಟು ಪ್ರಭಾವ ಬೀರುತ್ತಾರೆ ಇತ್ಯಾದಿಗಳನ್ನು ಗಮನಿಸಲಾಗಿದೆ.

Last Updated : Dec 18, 2020, 02:19 PM IST
Top 25 Global Instagram Influencer ಪಟ್ಟಿ ಸೇರಿದ ವಿರಾಟ್ - ಅನುಷ್ಕಾ title=
Top 25 Global Instagram Influencers

ನವದೆಹಲಿ: Top 25 Global Instagram Influencer- ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಸಾಧನೆಯನ್ನು ಮಾಡಿದ್ದಾರೆ. ಮೊದಲನೆಯದಾಗಿ ತಮ್ಮ ಮನೆಗೆ ಆಗಮಿಸಲಿರುವ ಹೊಸ ಸದಸ್ಯನ ಸ್ವಾಗತಕ್ಕೆ ಕಾತರರಾಗಿರುವ ಈ ದಂಪತಿ ಜೋಡಿ ಇದೀಗ Top Global Instagram Influencer ಪಟ್ಟಿಯಲ್ಲಿ ತಮ್ಮ ಹೆಸರನ್ನು ಬರೆದಿದೆ.

11 ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ
ಜಾಗತಿಕ ದತ್ತಾಂಶ ಶೇಖರಣೆ ಹಾಗೂ ಅವುಗಳ ವಿಶ್ಲೇಷಣೆ ಮಾಡುವ ಹೈಪ್ ಆಡಿಟರ್ ಈ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ವಿಶ್ವಾದ್ಯಂತ ಇರುವ ಜನರಿಗೆ ಇಂಪ್ರೆಸ್ ಮಾಡುವವರ ಹೆಸರನ್ನು ಒಳಗೊಂಡಿರುವ ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (Virat Kohli) 11ನೇ ಸ್ಥಾನದಲ್ಲಿದ್ದಾರೆ. ಅಷ್ಟೇ ಅಲ್ಲ ಈ ಪಟ್ಟಿಯಲ್ಲಿ ಅತ್ಯಂತ ಉನ್ನತ ಶ್ರೇಯಾಂಕ ಪಡೆದ ಭಾರತೀಯ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಇನ್ನೊಂದೆಡೆ ಅನುಷ್ಕಾ ಕೂಡ ಈ ಪಟ್ಟಿಯಲ್ಲಿ 24ನೇ ಸ್ಥಾನವನ್ನು ಭದ್ರಪಡಿಸಿದ್ದಾರೆ.

ಇದನ್ನು ಓದಿ- Pregnant ಪತ್ನಿ Anushka Sharmaಳಿಂದ ಶಿರ್ಷಾಸನ ಮಾಡಿಸಿದ ಪತಿ Virat Kohli, PIC ವಿಕ್ಷೀಸಿ

ಯಾವ ಆಧಾರದ ಮೇಲೆ ಈ ಪಟ್ಟಿ ತಯಾರಿಸಲಾಗಿದೆ
ಈ ಪಟ್ಟಿಯನ್ನು ತಯಾರಿಸಲು 1000 ಸೇಲಿಬ್ರಿಟಿಗಳ ಇನ್ಸ್ಟಾಗ್ರಾಮ್ ಖಾತೆಗಳನ್ನು ಅವುಗಳ ಆಡಿಯನ್ಸ್ ಗುಣಮಟ್ಟ ಹಾಗೂ ಆಥೆಂಟಿಕ್ ಎಂಗೇಜ್ಮೆಂಟ್ ಆಧಾರದ ಮೇಲೆ ಶ್ರೇಯಾಂಕ ಮಾಡಲಾಗಿತ್ತು. ಸಾಮಾಜಿಕ ಮಾಧ್ಯಮದ ಮೂಲಕ ಈ ಸೆಲಿಬ್ರಿಟಿಗಳು ಜಾಗರೂಕತೆ ಪಸರಿಸಲು, ತಮ್ಮ ಮಾತಿನಿಂದ ಎಷ್ಟು ಪ್ರಭಾವ ಬೀರುತ್ತಾರೆ ಇತ್ಯಾದಿಗಳನ್ನು ಗಮನಿಸಲಾಗಿದೆ. ಸಾಮಾಜಿಕ ಮಾಧ್ಯಮದ ಮೇಲೆ ಈ ಸೆಲಿಬ್ರಿಟಿಗಳ ಅಸ್ತಿತ್ವ ಹಾಗೂ ಸಾಮರ್ಥ್ಯವನ್ನು ಕೂಡ ಇದರಲ್ಲಿ ಪರಿಗಣಿಸಲಾಗಿದೆ.

ಇದನ್ನು ಓದಿ- IPL 2020: ವಿರಾಟ್ ಕೊಹ್ಲಿಗೆ Flying Kiss ಕೊಟ್ಟ ಅನುಷ್ಕಾ ಶರ್ಮಾ, ಫೋಟೋಸ್ ವೈರಲ್

 
 
 
 

 
 
 
 
 
 
 
 
 
 
 

A post shared by Virat Kohli (@virat.kohli)

ಕತ್ರೀನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ ಕೂಡ ಈ ಪಟ್ಟಿಯಲ್ಲಿ ಶಾಮೀಲಾಗಿದ್ದಾರೆ
ಪೋರ್ಚುಗೀಸ್ ನ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ ಈ ಪಟ್ಟಿಯಲ್ಲಿ ಆಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 11 ನೆ ಸ್ಥಾನದಲ್ಲಿದ್ದರೆ, ಪ್ರಧಾನಿ ನರೇಂದ್ರ ಮೋದಿ 17ನೆ ಸ್ಥಾನದಲ್ಲಿದ್ದಾರೆ. ಅನುಷ್ಕಾ ಶರ್ಮಾ 24ನೇ ಸ್ಥಾನದಲ್ಲಿದ್ದರೆ, ಕತ್ರೀನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ ಕೂಡ ಕ್ರಮೇಣ 43 ಮತ್ತು 47ನೆ ಸ್ಥಾನ ಅಲಂಕರಿಸಿದ್ದಾರೆ. 

Trending News