VIRAL VIDEO: ಲಂಡನ್ ಬೀದಿಯಲ್ಲಿ ಜಬರ್ದಸ್ತ್ ಸ್ಟೆಪ್ ಹಾಕಿದ ನೋರಾ

ಬಾಲಿವುಡ್ ನಲ್ಲಿ ಬ್ಯಾಲೆ ಕ್ವೀನ್ ಎಂದೇ ಖ್ಯಾತ ನಟಿ ನೋರಾ ಫತೇಹಿ ತಮ್ಮ ಜಬರ್ದಸ್ತ್ ಡಾನ್ಸ್ ಮೂಲಕ ಲಂಡನ್ ಜನರನ್ನು ಬೆರಗುಗೊಳಿಸುತ್ತಿದ್ದಾರೆ.

Last Updated : Jan 30, 2020, 06:20 PM IST
VIRAL VIDEO: ಲಂಡನ್ ಬೀದಿಯಲ್ಲಿ ಜಬರ್ದಸ್ತ್ ಸ್ಟೆಪ್ ಹಾಕಿದ ನೋರಾ title=

ನವದೆಹಲಿ: ಬಾಲಿವುಡ್ ನಲ್ಲಿ ಬ್ಯಾಲೆ ಕ್ವೀನ್ ಎಂದೇ ಖ್ಯಾತ ನಟಿ ನೋರಾ ಫತೇಹಿ ಯಾವಾಗಲೂ ತಮ್ಮ ಜಬರ್ದಸ್ತ್ ಡಾನ್ಸ್ ಹಾಗೂ ಮೋಹಕ ಸೌಂದರ್ಯದ ಮೂಲಕ ಅಭಿಮಾನಿಗಳ ಮನ ಸೆಳೆಯುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಅವರ ಚಿತ್ರ 'ಸ್ಟ್ರೀಟ್ ಡ್ಯಾನ್ಸರ್ 3ಡಿ' ಮೂಲಕ ಭಾರಿ ಸುದ್ದಿಯಲ್ಲಿದ್ದಾರೆ. ಇನ್ನೊಂದೆಡೆ ಇತ್ತ ನೋರಾಳ ಇನ್ನೊಂದು ಜಬರ್ದಸ್ತ್ ಡಾನ್ಸ್ ವಿಡಿಯೋ ಸಾಮಾಜಿಕ ಮಾಧ್ಯಮಗಳ ಮೇಲೆ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಲಂಡನ್ ಬೀದಿಗಿಳಿದಿರುವ ನೋರಾ ತಮ್ಮ ಮೋಹಕ ಡಾನ್ಸ್ ಮೂಲಕ ಅಲ್ಲಿನ ಜನರನ್ನು ಬೆರಗುಗೊಳಿಸಿದ್ದಾರೆ.

 
 
 
 

 
 
 
 
 
 
 
 
 

Trying to match steps with @salmanyusuffkhan while shooting for our SD3 london schedule ! Hes so sweet 🥰 staying happy and unbothered ☺️😎

A post shared by Nora Fatehi (@norafatehi) on

ನೋರಾ ಫತೆಹಿ ಹಂಚಿಕೊಳ್ಳುವ ಹಲವು ವಿಡಿಯೋಗಳು ದಿನನಿತ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಆದರೆ, ಈ ಬಾರಿ ನೋರಾ ಹಂಚಿಕೊಂಡಿರುವ ವಿಡಿಯೋದಲ್ಲಿ ಖ್ಯಾತ ಡ್ಯಾನ್ಸರ್ ಸಲ್ಮಾನ್ ಖಾನ್ ಅವರಿಗೆ ಸಾಥ್ ನೀಡುತ್ತಿರುವುದು ಕಂಡುಬಂದಿದೆ. ಸಲ್ಮಾನ್ ಡಾನ್ಸ್ ಮೂವ್ಸ್ ಗಳೂ ಕೂಡ ನೋರಾ ಡಾನ್ಸ್ ಮೂವ್ ಗಳ ಹಾಗೆ ಜಬರ್ದಸ್ತ್ ಆಗಿವೆ.

ವೈರಲ್ ಆಗಿರುವ ಈ ವಿಡಿಯೋ ಕುರಿತು ಹೇಳುವುದಾದರೆ, ವಿಡಿಯೋದಲ್ಲಿ ನೋರಾ ಫತೇಹಿ ಹಾಗೂ ಸಲ್ಮಾನ್ ಲಂಡನ್ ಬೀದಿಯಲ್ಲಿ ಡಾನ್ಸ್ ಮಾಡುತ್ತಿರುವುದು ಕಂಡು ಬಂದಿದೆ. ಈ ವೇಳೆ ರಸ್ತೆ ಅಕ್ಕಪಕ್ಕದಲ್ಲಿರುವ ಜನರು ಅಲ್ಲಿ ನೆರೆದು ಅತ್ಯಂತ ಸೂಕ್ಸ್ಮವಾಗಿ ಅವರ ಡಾನ್ಸ್ ವೀಕ್ಸಿಸಿದ್ದಾರೆ. ನೋರಾ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ನಿನ್ನೆಯಷ್ಟೇ ನೋರಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಕಳೆದ 24 ಗಂಟೆಗಳಲ್ಲಿ ಈ ವಿಡಿಯೋ 30 ಲಕ್ಷ 26 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಗಾಗಿದೆ. ನೋರಾ ಹಂಚಿಕೊಂಡಿರುವ ಈ ವಿಡಿಯೋಗೆ ಅವರ ಅಭಿಮಾನಿಗಳು ಕೂಡ ಸಕತ್ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಡಾನ್ಸ್ ನಲ್ಲಿ ಈ ಇಬ್ಬರ ಕೆಮಿಸ್ಟ್ರಿಗೂ ಕೂಡ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Trending News