ವಿಕ್ರಾಂತ್ ರೋಣ : ಸಂಸದರು, ಉನ್ನತ ಅಧಿಕಾರಿಗಳಿಗಾಗಿ ದೆಹಲಿಯಲ್ಲಿ ಪ್ರೀಮಿಯರ್ ಶೋ

Vikrant Rona Premier Show: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಟನೆಯ ಪ್ಯಾನ್ ಇಂಡಿಯಾ ಬಿಗ್‌ ಬಜೆಟ್‌, ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್‌ ರೋಣ ಪ್ರೀಮಿಯರ್‌ ಶೋವನ್ನು ಸಂಸದರಿಗೆ ಹಾಗೂ ಉನ್ನತ ಅಧಿಕಾರಿಗಳಿಗೆ ಆಯೋಜಿಸಲಾಗಿದೆ. 

Written by - Chetana Devarmani | Last Updated : Jul 27, 2022, 05:57 PM IST
  • ಕಿಚ್ಚ ಸುದೀಪ್‌ ನಟನೆಯ ಪ್ಯಾನ್ ಇಂಡಿಯಾ ಬಿಗ್‌ ಬಜೆಟ್‌ ಸಿನಿಮಾ
  • ಕನ್ನಡದ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್‌ ರೋಣ
  • ಸಂಸದರು, ಉನ್ನತ ಅಧಿಕಾರಿಗಳಿಗಾಗಿ ದೆಹಲಿಯಲ್ಲಿ ಪ್ರೀಮಿಯರ್ ಶೋ
ವಿಕ್ರಾಂತ್ ರೋಣ : ಸಂಸದರು, ಉನ್ನತ ಅಧಿಕಾರಿಗಳಿಗಾಗಿ ದೆಹಲಿಯಲ್ಲಿ ಪ್ರೀಮಿಯರ್ ಶೋ title=
ವಿಕ್ರಾಂತ್‌ ರೋಣ 

Vikrant Rona Premier Show : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಟನೆಯ ಪ್ಯಾನ್ ಇಂಡಿಯಾ ಬಿಗ್‌ ಬಜೆಟ್‌, ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್‌ ರೋಣ ಪ್ರೀಮಿಯರ್‌ ಶೋವನ್ನು ಸಂಸದರಿಗೆ ಹಾಗೂ ಉನ್ನತ ಅಧಿಕಾರಿಗಳಿಗೆ ಆಯೋಜಿಸಲಾಗಿದೆ. ನವದೆಹಲಿಯಲ್ಲಿ ಚಾಣಕ್ಯಪುರಿಯ ಪಿವಿಆರ್‌ ಥಿಯೇಟರ್‌ನಲ್ಲಿ ಜು.28 ಗುರುವಾರ ಬೆಳಿಗ್ಗೆ ಪ್ರೀಮಿಯರ್‌ ಶೋವನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ಸಂಸದ ಪ್ರತಾಪ್ ಸಿಂಹ ಅವರಿಗೆ ಆಹ್ವಾನ ನೀಡಿದ್ದು, ಟ್ವಿಟರ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ಚಿತ್ರತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. 

ಇದನ್ನೂ ಓದಿ: Box Office Analysis: ಹೈ ಬಜೆಟ್ ಆಕ್ಷನ್ ಅಡ್ವೆಂಚರ್ ಸಿನಿಮಾ ವಿಕ್ರಾಂತ್ ರೋಣ

ರಾಜ್ಯಸಭಾ ಸದಸ್ಯರು, ಲೋಕಸಭಾ ಸದಸ್ಯರು ಹಾಗೂ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಪ್ರೀಮಿಯರ್‌ ಶೋಗೆ ಆಹ್ವಾನ ನೀಡಲಾಗಿದೆ. ಚಿತ್ರದಲ್ಲಿ ಸುದೀಪ್ ತನಿಖಾ ಪೊಲೀಸ್ ಆಗಿ ಕಾಣಿಸಿಕೊಂಡಿದ್ದು, ಸುದೀಪ್‌ಗೆ ಅನೇಕ ನಟ, ನಟಿಯರು, ತಂತ್ರಜ್ಞರು, ನಿರ್ಮಾಪಕರು ಸೇರಿ ಅಭಿಮಾನಿ ಬಳಗ ಶುಭ ಕೋರಿದ್ದಾರೆ.

 

 

ಟೀಸರ್, ಪೋಸ್ಟರ್‌, ಟ್ರೇಲರ್‌ನಿಂಗ ಸಖತ್‌ ಸದ್ದು ಮಾಡಿರುವ ವಿಕ್ರಾಂತ್‌ ರೋಣ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಸುದೀಪ್‌ ಅವರೇ ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಡಬ್ಬಿಂಗ್‌ ಮಾಡಿರುವು ಈ ಸಿನಿಮಾದ ಮತ್ತೊಂದು ವಿಶೇಷ. ನಿರೂಪ್‌ ಭಂಡಾರಿ ಹಾಗೂ ನೀತಾ ಅಶೋಕ್‌ ಸಹ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಇದನ್ನೂ ಓದಿ: ವಿಕ್ರಾಂತ್ ರೋಣ ಪೈಸಾ ವಸೂಲ್ ಎಂಟರ್ಟೈನರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News