Vikrant Rona Movie Review : ವಿಕ್ರಾಂತ್ ರೋಣ ಪೈಸಾ ವಸೂಲ್ ಎಂಟರ್ಟೈನರ್ ಸಿನಿಮಾ!

ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಸಿನಿಮಾ ನಾಳೆ ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ.

Written by - Channabasava A Kashinakunti | Last Updated : Jul 27, 2022, 05:39 PM IST
  • ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ
  • ವಿಕ್ರಾಂತ್ ರೋಣ ನಾಳೆ ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ
  • ಉಮೈರ್ ಸಂದು ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಮೊದಲ ರಿವೀವ್
Vikrant Rona Movie Review : ವಿಕ್ರಾಂತ್ ರೋಣ ಪೈಸಾ ವಸೂಲ್ ಎಂಟರ್ಟೈನರ್ ಸಿನಿಮಾ! title=

ಬೆಂಗಳೂರು : ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ನಾಳೆ ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ. ನಿನ್ನೆ ದುಬೈ ನಲ್ಲಿ ಪ್ರಿ ರಿಲೀಸ್ ನಡೆದಿದ್ದು. ಈ ಬಗ್ಗೆ ಸಾಗರೋತ್ತರ ಸೆನ್ಸಾರ್ ಬೋರ್ಡ್ ಸದಸ್ಯ ಉಮೈರ್ ಸಂದು ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಮೊದಲ ರಿವೀವ್ ನೀಡಿದ್ದಾರೆ. 

ಈ ಬಗ್ಗೆ ಉಮೈರ್ ಸಂದು ತಮ್ಮ ಟ್ವಿಟ್ಟರ್ ನಲ್ಲಿ, ವಿಕ್ರಾಂತ್ ರೋಣ ಎಂಗೇಜಿಂಗ್ ಆಕ್ಷನ್ ಅಡ್ವೆಂಚರ್ ಫ್ಯಾಂಟಸಿ ಸಾಗಾ! 3D ಯಲ್ಲಿ, ಈ ಸಿನಿಮಾದ ಅನುಭವವು ಭರ್ಜರಿಯಾಗಿದೆ. 
 ಕಿಚ್ಚ ಸುದೀಪ್ ಹಿಂದೆಂದೂ ಕಾಣದ ಸ್ಟೈಲ್, ಲುಕ್, ಫೈಟ್ ಅಡ್ವೆಂಚರ್ ಲುಕ್ ನಲ್ಲಿ ಮಿಂಚಿದ್ದಾರೆ! ಹಾಗೆ ಜಾಕ್ವೆಲಿನ್ ಫರ್ನಾಂಡಿಸ್ ರಾರಾರಕ್ಕಮ್ಮ ಹಾಡಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ! ಒಟ್ಟಾರೆ ಪೈಸಾ ವಸೂಲ್ ಎಂಟರ್ಟೈನರ್ ಸಿನಿಮಾ ಎಂದು ಬರೆದುಕೊಂಡಿದ್ದಾರೆ. 

ಸೆನ್ಸಾರ್ ಮಂಡಳಿಯಿಂದ ಮೊದಲ ವಿಮರ್ಶೆ ವಿಕ್ರಾಂತ್ ರೋಣ! ಒಟ್ಟಾರೆಯಾಗಿ, ವಿಕ್ರಾಂತ್ ರೋಣ ಹಿಂದಿ ವರ್ಷನ್ ಗೆ ಪೈಸಾ ವಸೂಲ್ ಎಂಟರ್‌ಟೈನರ್ ಆಗಿದ್ದು, ನಿರ್ದೇಶಕ ಅನುಪ್ ಭಂಡಾರಿ ನಿರ್ದೇಶನ, ಎಂಗೇಜಿಂಗ್ ಸ್ಟೋರಿ, ಉಸಿರುಗಟ್ಟಿಸುವ ಛಾಯಾಗ್ರಹಣ, ಆಕ್ಷನ್, ಥ್ರಿಲ್ಸ್ ಮತ್ತು ಸುದೀಪ್ ತಾರಾಗಣದಲ್ಲಿ ಸಖತ್ ಆಗಿ ಮೂಡಿ ಬಂದಿದೆ. ಈ ಸಿನಿಮಾ ಹಿಟ್ ಆಗುವುದರ ಯಾವುದೇ ಸಂಶಯವಿಲ್ಲ
ಎಂದು ಬರೆದುಕೊಡಿದ್ದಾರೆ. 

ವಿಕ್ರಾಂತ್​ ರೋಣ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಸುದೀಪ್‌, ಜಾಕ್ವೆಲಿನ್‌ ಫರ್ನಾಂಡೀಸ್‌, ನಿರೂಪ್​ ಭಂಡಾರಿ, ನೀತಾ ಅಶೋಕ್ ನಟಿಸಿದ್ದು ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿದೆ. 3ಡಿ ಅವತರಣಿಕೆಯಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಶಾಲಿನಿ ಆರ್ಟ್ಸ್ ಬ್ಯಾನರ್​ ಅಡಿ ಜಾಕ್​ ಮಂಜು ಚಿತ್ರ ನಿರ್ಮಾಣ ಮಾಡಿದ್ದು, ಅಲಂಕಾರ್​ ಪಾಂಡಿಯನ್​ ಸಹ-ನಿರ್ಮಾಪಕರಾಗಿದ್ದಾರೆ.  

ಅನೂಪ್‌ ಭಂಡಾರಿ ನಿರ್ದೇಶನದ ಈ ಸಿನಿಮಾ ಮೂಲಕ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಡುತ್ತಿದ್ದಾರೆ. ರಕೇಲ್‌ ಡಿಕೋಸ್ಟ ಉರ್ಫ್‌ ಗಡಂಗ್‌ ರಕ್ಕಮ್ಮನಾಗಿ ತೆರೆ ಮೇಲೆ ಅವರು ಕಾಣಿಸಿಕೊಂಡಿದ್ದಾರೆ. ನಿರೂಪ್‌ ಭಂಡಾರಿ ಹಾಗೂ ನೀತಾ ಅಶೋಕ್‌ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. 

ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಸುದೀಪ್‌ ಅವರೇ ಡಬ್‌ ಮಾಡಿದ್ದಾರೆ. ಇಷ್ಟೆಲ್ಲ ವಿಶೇಷತೆ ಹೊಂದಿರುವ ಈ ಸಿನಿಮಾ ಸದ್ಯ ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಸಹ ಸ್ಥಾನ ಪಡೆದುಕೊಂಡಿದೆ. ವಿಕ್ರಾಂತ್ ರೋಣ ಸಿನಿಮಾ ಜುಲೈ 28ರಂದು ರಿಲೀಸ್‌ ಆಗಲು ಸಿದ್ಧವಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News