ವಿಜಯ್‌ ದೇವರಕೊಂಡ ಸಿನಿಮಾದಿಂದ ಶ್ರೀಲೀಲಾ ಔಟ್,ನ್ಯಾಷನಲ್‌ ಕ್ರಷ್‌ ಇನ್‌..! ಕಾರಣ ಇದೇನಾ?

Rashmika-Srileela: ಟಾಲಿವುಡ್‌ನಲ್ಲಿ ಕನ್ನಡ ನಟಿಯರ ಹಾವಳಿ ಜೋರಾಗಿದೆ. ಜೊತೆಗೆ ಪೈಪೋಟಿಯೂ ಭರ್ಜರಿಯಾಗಿದೆ. ಇದೀಗ ಶ್ರೀಲೀಲಾ ನಟಿಸಬೇಕಿದ್ದ ವಿಜಯ್‌ ದೇವರಕೊಂಡ ಸಿನಿಮಾದಲ್ಲಿ  ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಎನ್ನಲಾಗುತ್ತಿದೆ.  

Written by - Savita M B | Last Updated : Sep 27, 2023, 01:02 PM IST
  • ನಟಿಯರು ಕನ್ನಡದಲ್ಲಿ ಒಂದೆರಡು ಸಿನಿಮಾಗಳನ್ನು ಮಾಡಿ ಟಾಲಿವುಡ್‌ಗೆ ಹಾರಿದ್ದಾರೆ
  • ರಶ್ಮಿಕಾ ಹಾಗೂ ಶ್ರೀಲೀಲಾ ಒಂದೆಜ್ಜೆ ಮುಂದಿದ್ದಾರೆ
  • ಸದ್ಯ ಇವರಿಬ್ಬರ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ.
ವಿಜಯ್‌ ದೇವರಕೊಂಡ ಸಿನಿಮಾದಿಂದ ಶ್ರೀಲೀಲಾ ಔಟ್,ನ್ಯಾಷನಲ್‌ ಕ್ರಷ್‌ ಇನ್‌..! ಕಾರಣ ಇದೇನಾ?  title=

Tollywood: ಸಾಕಷ್ಟು ನಟ ನಟಿಯರು ಕನ್ನಡದಲ್ಲಿ ಒಂದೆರಡು ಸಿನಿಮಾಗಳನ್ನು ಮಾಡಿ ಟಾಲಿವುಡ್‌ಗೆ ಹಾರಿದ್ದಾರೆ. ಅವರಲ್ಲಿ ರಶ್ಮಿಕಾ ಹಾಗೂ ಶ್ರೀಲೀಲಾ ಒಂದೆಜ್ಜೆ ಮುಂದಿದ್ದಾರೆ. ಸದ್ಯ ಇವರಿಬ್ಬರ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಸಾಕಷ್ಟು ಸ್ಟಾರ್‌ ನಟರ ಜೊತೆ ನಟಿಸಿ ಸೈ ಎನಿಸಿಕೊಂಡ ಈ ನಟಿಯರಿಗೆ ಇದೀಗ ಟಾಲಿವುಡ್‌ನಲ್ಲಿ ಸಖತ್‌ ಬೇಡಿಕೆಯಿದೆ.

ಇನ್ನು ಜೆರ್ಸಿ’ ಡೈರೆಕ್ಟರ್ ಗೌತಮ್ ನಾಯ್ಡು ತಿಣ್ಣನುರಿ ನಿರ್ದೇಶನದಲ್ಲಿ  ಮೂಡಿಬರಲಿರುವ ಹೊಸ ಸಿನಿಮಾವೊಂದು ಮೇನಲ್ಲಿ ಘೋಷಣೆಯಾಗಿತ್ತು. ವಿಜಯ್‌ಗೆ ನಾಯಕಿಯಾಗಿ ಶ್ರೀಲೀಲಾ ನಟಿಸಲಿದ್ದಾರೆ ಎನ್ನುವ ವಿಷಯವನ್ನು ಬಹಿರಂಗಪಡಿಸಲಾಗಿತ್ತು. ಜೊತೆಗೆ ಸಿನಿಮಾದ ಮುಹೂರ್ತ ಕಾರ್ಯಕ್ರಮ ಕೂಡ ಅದ್ದೂರಿಯಾಗಿ ನೆರವೇರಿತ್ತು.

ಇದನ್ನೂ ಓದಿ-‘ರಕ್ತಾಕ್ಷ’ ಸಿನಿಮಾದ ಬೆಂಕಿ ಹಾಡಿಗೆ ನೀವು ಸೊಂಟ ಕುಣಿಸೋದು ಪಕ್ಕಾ ಕಣ್ರೀ...!

ಆದರೆ ಈಗ ಈ ಸಿನಿಮಾದ ನಾಯಕಿಯ ಪಾತ್ರದಲ್ಲಿ ಬೇರೆ ಖ್ಯಾತ ನಟಿ ನಟಿಸಲಿದ್ದಾರೆ. ಅವರೇ ನಮ್ಮ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ. ಹೌದು ಶ್ರೀಲೀಲಾ ನಾಯಕಿಯಾಗಿ ನಟಿಬೇಕಿದ್ದ ವಿಜಯ್‌ ಸಿನಿಮಾದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಎಂಟ್ರಿ ಕೊಟ್ಟಿದ್ದಾರೆ. ಶ್ರೀಲೀಲಾ ಈ ಚಿತ್ರವನ್ನು ಕೈಬಿಟ್ಟಿದ್ದಾರಂತೆ. ಡಿಯರ್‌ ಕಾಮ್ರೇಡ್‌ ಜೋಡಿ ಇದೀಗ 3ನೇ ಬಾರಿ ಒಂದಾಗುತ್ತಿರೋದು ಅಭಿಮಾನಿಗಳಲ್ಲಿ ಖುಷಿ ಹೆಚ್ಚಿಸಿದೆ. 

ಇನ್ನು ಕಿಸ್‌ ಬೆಡಗಿ ಈ ಸಿನಿಮಾ ಕೈಬಿಡಲು ಕಾರಣ ಏನಿರಬಹುದು ಅಂತೀರಾ... ಇಲ್ಲಿದೆ ಉತ್ತರ. 9ಕ್ಕೂ ಹೆಚ್ಚು ಸಿನಿಮಾಗಳಿಗೆ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಶ್ರೀಲೀಲಾ ಡೇಟ್ ಸಮಸ್ಯೆಯಿಂದ ಗೌತಮ್- ವಿಜಯ್ ಕಾಂಬೀನೇಷನ್‌ ಸಿನಿಮಾಗೆ ನೋ ಎಂದಿದ್ದಾರೆ. ಇದರಿಂದಾಗಿ ನಾಯಕಿ ಪಾತ್ರಕ್ಕೆ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಅವರನ್ನೇ ಪೈನಲ್‌ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ-ಅಂದು ಆಂಕರ್‌.. ಇಂದು ಪ್ರಸಿದ್ಧ ನಟಿ :‌ ಕೋಟಿ ಕೋಟಿ ಸಂಪಾದಿಸುವ ಇವರು ಯಾರು ಬಲ್ಲಿರಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News