'ರಜಿನಿಕಾಂತ್ ಸರ್ 6 ಫ್ಲಾಪ್ಸ್...' ವಿವಾದಕ್ಕೆ ಕಾರಣವಾದ ವಿಜಯ್ ದೇವರಕೊಂಡ ಕಾಮೆಂಟ್

Vijay Devarakonda On Rajinikanth : ಖುಶಿ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ, ವಿಜಯ್ ದೇವರಕೊಂಡ ರಜನಿಕಾಂತ್ ಮತ್ತು ಚಿರಂಜೀವಿ ಹಿಟ್ ಮತ್ತು ಫ್ಲಾಪ್‌ಗಳ ಬಗ್ಗೆ ಮಾತನಾಡಿದ್ದಾರೆ.  

Written by - Chetana Devarmani | Last Updated : Aug 22, 2023, 04:58 PM IST
  • ಖುಶಿ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ವಿಜಯ್‌
  • ಸೂಪರ್‌ ಸ್ಟಾರ್‌ಗಳ ಫ್ಲಾಪ್‌ ಬಗ್ಗೆ ಮಾತನಾಡಿದ ನಟ
  • ವಿವಾದಕ್ಕೆ ಕಾರಣವಾದ ವಿಜಯ್ ದೇವರಕೊಂಡ ಕಾಮೆಂಟ್
'ರಜಿನಿಕಾಂತ್ ಸರ್ 6 ಫ್ಲಾಪ್ಸ್...' ವಿವಾದಕ್ಕೆ ಕಾರಣವಾದ ವಿಜಯ್ ದೇವರಕೊಂಡ ಕಾಮೆಂಟ್  title=

Vijay Devarakonda On Chiranjeevi : ನಟ ವಿಜಯ್ ದೇವರಕೊಂಡ ಅವರು ರಜನಿಕಾಂತ್ ಬಗ್ಗೆ ಮಾಡಿದ ಕಾಮೆಂಟ್‌ ಇದೀಗ ವಿವಾದಕ್ಕೆ ಕಾರಣವಾಗಿದೆ. ರಜನಿ ಅಭಿಮಾನಿಗಳ ಅಸಮಾಧಾನಕ್ಕೆ ಇದು ಕಾರಣವಾಗಿದೆ. ವಿಜಯ್‌ ದೇವರಕೊಂಡ ಮುಂಬರುವ ಚಿತ್ರ ಖುಶಿ ಸಿನಿಮಾದ ಪ್ರಚಾರ ಕಾರ್ಯಕ್ರಮವೊಂದರಲ್ಲಿ, ವಿಜಯ್ ಅವರು ರಜನಿಕಾಂತ್ ಮತ್ತು ಚಿರಂಜೀವಿಯಂತಹ "ಸೂಪರ್‌ಸ್ಟಾರ್" ಗಳ ಫ್ಲಾಪ್ ಬಗ್ಗೆ ಮಾತನಾಡಿದ್ದಾರೆ. 

ಕೆಲವು ಫ್ಲಾಪ್‌ಗಳು ರಜನಿಕಾಂತ್ ಮತ್ತು ಚಿರಂಜೀವಿಯಂತಹ ಸೂಪರ್‌ಸ್ಟಾರ್‌ಗಳ ಸ್ಟಾರ್‌ಡಮ್ ಅನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ವಿಜಯ್‌ ದೇವರಕೊಂಡ ಹೇಳಿದ್ದಾರೆ. “ಸೂಪರ್‌ಸ್ಟಾರ್‌ಗಳು ಹಿಟ್ ಮತ್ತು ಫ್ಲಾಪ್‌ಗಳನ್ನು ಮೀರಿದವರು. ರಜನಿ ಸರ್ ಬ್ಯಾಕ್‌ ಟು ಬ್ಯಾಕ್‌ 6 ಫ್ಲಾಪ್‌ಗಳನ್ನು ಹೊಂದಿ, 500 ಕೋಟಿ ಗಳಿಸುವ ‘ಜೈಲರ್‌’ ನಂತಹ ಸಿನಿಮಾವನ್ನು ಮಾಡಬಹುದು. ನಾವು ಸುಮ್ಮನೆ ಬಾಯಿಮುಚ್ಚಿಕೊಂಡು ನೋಡಬೇಕು" ಎಂದು ವಿಜಯ್ ಹೇಳಿದ್ದಾರೆ. 

ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿಯನ್ನೇ ಆಯ್ಕೆ ಮಾಡಿದ್ಯಾಕೆ ಲೈಕಾ ಪ್ರೊಡಕ್ಷನ್ಸ್‌?

ಮೆಗಾಸ್ಟಾರ್ ಚಿರಂಜೀವಿ ಬಗ್ಗೆ ಮಾತನಾಡಿದ ವಿಜಯ್, “ಅವರು ಬ್ಯಾಕ್-ಟು-ಬ್ಯಾಕ್ ಫ್ಲಾಪ್‌ಗಳನ್ನು ಸಹ ನೀಡಬಲ್ಲರು, ಆದರೆ ಅವರು ಸರಿಯಾದ ಶಕ್ತಿಯಿರುವ ನಿರ್ದೇಶಕರನ್ನು ಭೇಟಿ ಮಾಡಿದರೆ, ಸಂಚಲನದೊಂದಿಗೆ ಹಿಂತಿರುಗುತ್ತಾರೆ. ಚಿರು ಸರ್ ಇಂಡಸ್ಟ್ರಿ ಬದಲಾಯಿಸಿದರು. ಬಂದ ಮೇಲೆ ಅಲ್ಲಿದ್ದ ಆ್ಯಕ್ಷನ್, ಡ್ಯಾನ್ಸ್, ಪರ್ಫಾರ್ಮೆನ್ಸ್ ಎಲ್ಲವೂ ಸಂಪೂರ್ಣ ಬದಲಾಯಿತು. ಅವರು ಉದ್ಯಮಕ್ಕೆ ಪ್ರವೇಶಿಸಲು ಅನೇಕ ಜನರನ್ನು ಪ್ರೇರೇಪಿಸಿದರು ಎಂದಿದ್ದಾರೆ. 

ರಜನಿಕಾಂತ್‌ ಫ್ಲಾಪ್‌ ಬಗ್ಗೆ ಮಾತನಾಡಿದ ವಿಜಯ್‌ ದೇವರಕೊಂಡ ವಿರುದ್ಧ ರಜನಿ ಫ್ಯಾನ್ಸ್‌ ಅಸಮಾಧಾನ ಹೊರಹಾಕುತ್ತಿದ್ದಾರೆ. ಇತ್ತ ವಿಜಯ್ ಅಭಿಮಾನಿಗಳು ಅವರ ರಕ್ಷಣೆಗೆ ಮುಂದಾಗಿದ್ದಾರೆ. ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ನಟನೆಯ ನಿರ್ದೇಶಕ ಶಿವ ನಿರ್ವಾಣ ಅವರ ಮುಂಬರುವ ಖುಶಿ ಚಿತ್ರವು ಸೆಪ್ಟೆಂಬರ್ 1 ರಂದು ಥಿಯೇಟರ್‌ಗಳಿಗೆ ಬರಲಿದೆ.

ಇದನ್ನೂ ಓದಿ: ಮದುವೆಗೂ ಮುನ್ನವೇ ಭುವನ್ - ಹರ್ಷಿಕಾ ಹೊಸ ಮನೆ ಗೃಹ ಪ್ರವೇಶ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News