Viral Video:ಫ್ರೆಂಡ್ಸ್ ಜೊತೆ ಮಸ್ತಿ ಮಾಡ್ತಿದ್ದ ಸನ್ನಿ ಲಿಯೋನ್ ಮಾಡಿದ್ದೇನು ಗೊತ್ತಾ?

ಇತ್ತೀಚೆಗಷ್ಟೇ ಸನ್ನಿ ಲಿಯೋನ್ ಸ್ವಿಮ್ಮಿಂಗ್ ಪೂಲ್ ಬಳಿ ತನ್ನ ಸ್ನೇಹಿತರೊಂದಿಗೆ ಪಂಜಾಬಿ ಹಾಡಿಗೆ ನೃತ್ಯ ಮಾಡುತ್ತಿರುವ ವೀಡಿಯೋ ಒಂದನ್ನು ಶೇರ್ ಮಾಡಿದ್ದಾರೆ.

Last Updated : Feb 8, 2019, 10:40 PM IST
Viral Video:ಫ್ರೆಂಡ್ಸ್ ಜೊತೆ ಮಸ್ತಿ ಮಾಡ್ತಿದ್ದ ಸನ್ನಿ ಲಿಯೋನ್ ಮಾಡಿದ್ದೇನು ಗೊತ್ತಾ? title=

ನವದೆಹಲಿ: ಬಾಲಿವುಡ್ ನಟಿ ಸನ್ನಿ ಲಿಯೋನ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಅದರಲ್ಲೂ ತಮ್ಮ ಅಭಿಮಾನಿಗಳೊಂದಿಗಿನ ಮೋಜು, ಮಸ್ತಿ ಮಾಡುತ್ತಿರುವ ವೀಡಿಯೋಗಳನ್ನು ಶೇರ್ ಮಾಡುವುದೆಂದರೆ ಸನ್ನಿಗೆ ತುಂಬಾ ಖುಷಿ. ಇದೀಗ ಅಂತಹದ್ದೇ ಒಂದು ವೀಡಿಯೋ ಒಂದನ್ನು ಸನ್ನಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 

ಇತ್ತೀಚೆಗಷ್ಟೇ ಸನ್ನಿ ಲಿಯೋನ್ ಸ್ವಿಮ್ಮಿಂಗ್ ಪೂಲ್ ಬಳಿ ತನ್ನ ಸ್ನೇಹಿತರೊಂದಿಗೆ ಪಂಜಾಬಿ ಹಾಡಿಗೆ ನೃತ್ಯ ಮಾಡುತ್ತಿರುವ ವೀಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಸ್ನೇಹಿತರೊಂದಿಗೆ ಡ್ಯಾನ್ಸ್ ಮಾಡುತ್ತಿದ್ದ ಸನ್ನಿ ಲಿಯೋನ್ ಅಲ್ಲಿದ್ದ ಒಬ್ಬ ಹುಡುಗನನ್ನು ಇದ್ದಕ್ಕಿದ್ದಂತೆ ಸ್ವಿಮ್ಮಿಂಗ್ ಪೂಲ್ ಗೆ ತಳ್ಳಿದ್ದಾರೆ. ಬಳಿಕ ಆಕೆಯ ಹಿಂದಿದ್ದ ಯುವಕನೊಬ್ಬ ಸನ್ನಿಯನ್ನು ನೀರಿಗೆ ತಳ್ಳಿದ್ದಾನೆ. ಇದನ್ನು ಕಂಡು ಅಲ್ಲಿದ್ದವರು ಸಿಕ್ಕಾಪಟ್ಟೆ ನಕ್ಕಿದ್ದಾರೆ. ಈ ವೀಡಿಯೋಗೆ "ನಾನಂದುಕೊಂಡಂತೆ ಆಗಲಿಲ್ಲ, ಆದರೂ ಸಿಕ್ಕಾಪಟ್ಟೆ ಹಾಸ್ಯಭರಿತವಾಗಿತ್ತು" ಎಂದು ಬರೆಯುತ್ತಾ ಹಿತೇಂದ್ರ ಕಪೋಪಾರ ಮತ್ತು ಹೇರ್ ಸ್ಟೈಲಿಸ್ಟ್ ಜೀತಿ ಅವರನ್ನು ಸನ್ನಿ ಟ್ಯಾಗ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ರಂಗೀಲಾ ಸಿನಿಮಾವನ್ನೂ ಸಹ ಸನ್ನಿ ಟ್ಯಾಗ್ ಮಾಡಿದ್ದು, ಬಹುಶಃ ಈ ಸಿನಿಮಾ ಚಿತ್ರೀಕರಣ ಸಂದರ್ಭದ ವೀಡಿಯೋ ಇರಬಹುದು ಎಂದು ಅಂದಾಜಿಸಲಾಗಿದೆ.

ಸದ್ಯ ಮಲಯಾಳಂ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿರುವ ಸನ್ನಿ ಲಿಯೋನ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಸರು ಮಾಡಲು ಹೆಜ್ಜೆಯಿಟ್ಟಿದ್ದಾರೆ ಎನ್ನಲಾಗಿದೆ. ಏತನ್ಮಧ್ಯೆ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

Trending News