ರಾಕಿ ಭಾಯ್‌ ʼನೀಚ್‌__ ಕುತ್ತೆʼ. ಎಂದ ತೆಲುಗು ಡೈರೆಕ್ಟರ್‌..! ನೊಂದಿಲ್ಲ, ಕ್ಷಮೆನೂ ಕೇಳಿಲ್ಲ

ಇತ್ತೀಚೆಗೆ ಕೆಜಿಎಫ್ ಸಿನಿಮಾದ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದ ನಿರ್ದೇಶಕ ವೆಂಕಟೇಶ್ ಮಹಾ, ಈ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷಮೆಯಾಚಿಸಿ ಐದು ನಿಮಿಷದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಆದ್ರೆ ಅ ವಿಡಿಯೋದಲ್ಲಿ ಕೆಜಿಎಫ್‌ ಕುರಿತ ತಮ್ಮ ಹೇಳಿಕೆಗೆ ಬದ್ದ ಎಂದು ಹೇಳುವ ಮೂಲಕ ಅಹಂಕಾರ ಪ್ರದರ್ಶನ ಮಾಡಿದ್ದಾರೆ. ಅಲ್ಲದೆ, ತಾವು ಬಳಸಿದ ಅಸಭ್ಯ ಪದಗಳಿಗೆ, ಮತ್ತು ತಮ್ಮ ಸಿನಿಮಾ ಅಭಿಮಾನಿಗಳ ಮನಸ್ಸಿಗೆ ನೋವಾಗಿದ್ದಕ್ಕೆ ಕ್ಷಮೆ ಕೇಳಿದ್ದಾರೆ.

Written by - Krishna N K | Last Updated : Mar 7, 2023, 02:19 PM IST
  • ಇತ್ತೀಚೆಗೆ ಕೆಜಿಎಫ್ ಸಿನಿಮಾದ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದ ನಿರ್ದೇಶಕ ವೆಂಕಟೇಶ್ ಮಹಾ.
  • ಈ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷಮೆಯಾಚಿಸಿ ಐದು ನಿಮಿಷದ ವಿಡಿಯೋ ಬಿಡುಗಡೆ ಮಾಡಿದ್ದಾರೆ.
  • ಅ ವಿಡಿಯೋದಲ್ಲಿ ತಮ್ಮ ಹೇಳಿಕೆಗೆ ಬದ್ದ ಎಂದು ಹೇಳುವ ಮೂಲಕ ಅಹಂಕಾರ ಪ್ರದರ್ಶನ ಮಾಡಿದ್ದಾರೆ.
ರಾಕಿ ಭಾಯ್‌ ʼನೀಚ್‌__ ಕುತ್ತೆʼ. ಎಂದ ತೆಲುಗು ಡೈರೆಕ್ಟರ್‌..! ನೊಂದಿಲ್ಲ, ಕ್ಷಮೆನೂ ಕೇಳಿಲ್ಲ title=

Maha Venkatesh on KGF 2 : ಇತ್ತೀಚೆಗೆ ಕೆಜಿಎಫ್ ಸಿನಿಮಾದ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದ ನಿರ್ದೇಶಕ ವೆಂಕಟೇಶ್ ಮಹಾ, ಈ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷಮೆಯಾಚಿಸಿ ಐದು ನಿಮಿಷದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಆದ್ರೆ ಅ ವಿಡಿಯೋದಲ್ಲಿ ಕೆಜಿಎಫ್‌ ಕುರಿತ ತಮ್ಮ ಹೇಳಿಕೆಗೆ ಬದ್ದ ಎಂದು ಹೇಳುವ ಮೂಲಕ ಅಹಂಕಾರ ಪ್ರದರ್ಶನ ಮಾಡಿದ್ದಾರೆ. ಅಲ್ಲದೆ, ತಾವು ಬಳಸಿದ ಅಸಭ್ಯ ಪದಗಳಿಗೆ, ಮತ್ತು ತಮ್ಮ ಸಿನಿಮಾ ಅಭಿಮಾನಿಗಳ ಮನಸ್ಸಿಗೆ ನೋವಾಗಿದ್ದಕ್ಕೆ ಕ್ಷಮೆ ಕೇಳಿದ್ದಾರೆ.

ಹೌದು.. ವೆಂಕಟೇಶ್‌ ಮಹಾ ತೆಲುಗು ನಿರ್ದೇಶಕ. ಮಾಡಿದ್ದು, ಎರಡು ಸಿನಿಮಾಗಳು, ಒಂದು ಸ್ವಂತದ್ದು, ಆದ್ರೆ, ಇನ್ನೊಂದು ರಿಮೇಕ್‌. ಸಮಾಜಕ್ಕೆ ಉತ್ತಮ ತಿಳುವಳಿಕೆ ನೀಡಬೇಕಾದ ನಿರ್ದೇಶಕ ಕನ್ನಡ ಸಿನಿಮಾ ಕಥೆ ಕುರಿತು ಅಸಭ್ಯವಾಗಿ ಅತೀರೆಕದಿಂದ ಮಾತನಾಡಿದ್ದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಅಲ್ಲದೆ, ಕೆಜಿಎಫ್‌ ಸಿನಿಮಾ ಹಾಗೂ ಯಶ್‌ ಅಭಿಮಾನಿಗಳಿಗೆ ಇದರಿಂದ ನೋವು ಉಂಟಾಗಿತ್ತು. ಇದರ ಬೆನ್ನಲ್ಲೆ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರು.

ಇದನ್ನೂ ಓದಿ:Bollywood: ಕಾಶ್ಮೀರಿ  ಫೈಲ್ಸ್ ನಿಂದ ಮನೆಮಾತಾದ ಅನುಪಮ್ ಖೇರ್ ಗೆ ಹುಟ್ಟು ಹಬ್ಬದ ಸಂಭ್ರಮ

ವ್ಯಾಪಕ ಆಕ್ರೋಶ ಕೇಳಿಬಂದ ಹಿನ್ನೆಲೆ ವಿಡಿಯೋ ಮಾಡಿ ವೆಂಕೆಟೇಶ್‌ ಕ್ಷಮೆ ಕೇಳಿದರು. ಅದರಲ್ಲಿ ಅವರು, ಭಾರತದಲ್ಲಿ ಹುಟ್ಟಿದ ವ್ಯಕ್ತಿಯಾಗಿ ನನಗೆ ಯಾವುದೇ ಸಿನಿಮಾ ಇಷ್ಟವಾಗದಿದ್ದರೆ ಅದರ ಬಗ್ಗೆ ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ. ನಾನು ನನ್ನ ಮಾತನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ. ಆದ್ರೆ ನಾನು ಬಳಸಿದ ಪದಗಳಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ, ತಮ್ಮಿಂದ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿರ್ದೇಶಕರಿಗೆ ತೊಂದರೆ ಆಗಿದೆ ಅದಕ್ಕಾಗಿ ಕ್ಷಮೆ ಇರಲಿ ಎಂದಿದ್ದಾರೆ.

ಇನ್ನು ಮಹಾ ಬಿಟ್ಟು ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ನಿರ್ದೇಶಕರು ಸಹ ಈಗ ಒಬ್ಬೊಬ್ಬರಾಗಿ ಕ್ಷಮೆ ಕೇಳುತ್ತಿದ್ದಾರೆ. ಮೊದಮೊದಲು ನಂದಿನಿ ರೆಡ್ಡಿ ಕ್ಷಮೆ ಕೇಳಿದ್ದು, ಇದೀಗ ವಿವೇಕ್ ಆತ್ರೇಯ ಹಾಗೂ ಮೋಹನಕೃಷ್ಣ ಇಂದ್ರಗಂಟಿ ಕೂಡ ಕ್ಷಮೆ ಯಾಚಿಸಿದ್ದಾರೆ. ವಿವೇಕಾತ್ರೇಯ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ನಿನ್ನೆ ನೀವು ನೋಡಿದ ಸಂದರ್ಶನದಲ್ಲಿ ಅವರು ಹೇಳಿದ್ದಕ್ಕೆ ನಾನು ಪ್ರತಿಕ್ರಿಯಿಸಿದ್ದೇನೆ ಮತ್ತು ಯಾರ ಕೆಲಸವನ್ನು ಕಡಿಮೆ ಮಾಡುವುದು ನನ್ನ ಉದ್ದೇಶವಲ್ಲ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Balam Pichkari Song ಶೂಟಿಂಗ್‌ ವೇಳೆ ಭಾಂಗ್‌ ಮತ್ತಲ್ಲಿ ದೀಪಿಕಾ - ರಣಬೀರ್‌... ಸೆಟ್‌ಲ್ಲಿದ್ದವರೆಲ್ಲ ಶಾಕ್‌.!!

ಅಲ್ಲದೆ ಪ್ರತಿ ಸಿನಿಮಾದ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಮತ್ತು ಪ್ರತಿ ಸಿನಿಮಾದ ಬಗ್ಗೆಯೂ ಪ್ರತಿಯೊಬ್ಬರು ತಮ್ಮದೇ ಆದ ಅಭಿಪ್ರಾಯವನ್ನು ಹೊಂದಿರುತ್ತಾರೆ. ವೆಂಕಟೇಶ ಮಹಾ ಮಾತನಾಡುವ ರೀತಿಯಿಂದ ನಮಗೆ ನಗು ಬಂತು, ಯಾರನ್ನೂ ನಿಂದಿಸುತ್ತಿಲ್ಲ ಎಂದರು. ನಮ್ಮ ಪ್ರತಿಕ್ರಿಯೆಯಿಂದ ಕೆಜಿಎಫ್ 2 ಅಭಿಮಾನಿಗಳಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ, ಯಾರನ್ನೂ ನೋಯಿಸುವುದು ನಮ್ಮ ಉದ್ದೇಶವಲ್ಲ, ಜನರು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ, ಎಂದು ಅವರು ಬರೆದುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News