Veena Ponnappa: ಐದು ವರ್ಷಗಳ ನಂತರ ಮತ್ತೆ ಕಿರುತೆರೆಗೆ ಕಾಲಿಟ್ಟಿರುವ ವೀಣಾ ಪೊನ್ನಪ್ಪ! 

  Kannada new serial​:  ಹೊಚ್ಚ ಹೊಸ ಧಾರವಾಹಿ ಶ್ರೀ ಉಧೋ ಉಧೋ ರೇಣುಕಾ ಯಲ್ಲಮ್ಮ ಸೀರಿಯಲ್‌ನಲ್ಲಿ ರಾಣಿಯ ಪಾತ್ರದ ಮೂಲಕ  ಜನರನ್ನ ಸೆಳೆಯುತ್ತಿರುವ ವೀಣಾ ಪೊನ್ನಪ್ಪ ಸುಮಾರು 5 ವರ್ಷಗಳ ನಂತರ ಕಿರುತೆರೆಗೆ ಕಮ್‌ ಬ್ಯಾಕ್‌ ಆಗಿದ್ದಾರೆ.

Written by - Zee Kannada News Desk | Last Updated : Mar 29, 2023, 07:22 PM IST
  • ಐದು ವರ್ಷಗಳ ನಂತರ ಮತ್ತೆ ಕಿರುತೆರೆಗೆ ಕಾಲಿಟ್ಟಿರುವ ವೀಣಾ ಪೊನ್ನಪ್ಪ
  • ರಾಣಿ ಮಂಗಳಾದೇವಿಯಾಗಿ ವೀಣಾ
  • ಪೌರಾಣಿಕ ಪಾತ್ರಧಾರಿಯಾಗಿ ಕಮ್‌ ಬ್ಯಾಕ್‌
Veena Ponnappa: ಐದು ವರ್ಷಗಳ ನಂತರ ಮತ್ತೆ ಕಿರುತೆರೆಗೆ ಕಾಲಿಟ್ಟಿರುವ ವೀಣಾ ಪೊನ್ನಪ್ಪ!  title=

Veena Ponnappa: ಹೊಚ್ಚ ಹೊಸ ಧಾರವಾಹಿ ಶ್ರೀ ಉಧೋ ಉಧೋ ರೇಣುಕಾ ಯಲ್ಲಮ್ಮ ಸೀರಿಯಲ್‌ನಲ್ಲಿ ರಾಣಿಯ ಪಾತ್ರದ ಮೂಲಕ  ಜನರನ್ನ ಸೆಳೆಯುತ್ತಿರುವ ವೀಣಾ ಪೊನ್ನಪ್ಪ ಸುಮಾರು 5 ವರ್ಷಗಳ ನಂತರ ಕಿರುತೆರೆಗೆ ಕಮ್‌ ಬ್ಯಾಕ್‌ ಆಗಿದ್ದಾರೆ...ಹಾಗಾದ್ರೆ ಹೊಸ ಪಾತ್ರ, ಪೌರಾಣಿಕ ಧಾರವಾಹಿ ಬಗ್ಗೆ  ವೀಣಾ ಪೊನ್ನಪ್ಪ ಏನ್‌ ಹೇಳಿದ್ರು? 

ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಭಕ್ತಿಪ್ರಧಾನ ಧಾರಾವಾಹಿ "ಶ್ರೀ ಉಧೋ ಉಧೋ ರೇಣುಕಾ ಯಲ್ಲಮ್ಮ" ಧಾರಾವಾಹಿಯಲ್ಲಿ ರಾಣಿ ಮಂಗಳಾದೇವಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಮರಳಿದ್ದಾರೆ ವೀಣಾ ಪೊನ್ನಪ್ಪ. ಹೆಚ್ಚು ಕಮ್ಮಿ ಐದು ವರ್ಷದ ನಂತರ ಮತ್ತೆ ಕಿರುತೆರೆಗೆ ಕಾಲಿಟ್ಟಿರುವ ವೀಣಾ ಪೊನ್ನಪ್ಪ ಪೌರಾಣಿಕ ಧಾರಾವಾಹಿಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದ್ದಾರೆ..

ರಾಣಿ ಮಂಗಳಾದೇವಿ ಪಾತ್ರದ ಬಗ್ಗೆ ಮಾತನಾಡಿದ ವೀಣಾ ಪೊನ್ನಪ್ಪ ,ನನಗೆ ಮಂಗಳ ದೇವಿ ಪಾತ್ರ ಬಹಳ ವಿಶೇಷ. ಯಾಕೆಂದರೆ ಮೊದಲಿಗೆ ಒಳ್ಳೆಯವಳಾಗಿ ನಂತರ ಅಷ್ಟೇನೂ ಸಮಾಧಾನಕರವಲ್ಲದ ಪ್ರೀತಿಯ ಸ್ವಭಾವವನ್ನು ತೋರ್ಪಡಿಸುವ ಪಾತ್ರವಾಗಿದೆ."ಈ ಧಾರಾವಾಹಿಯಲ್ಲಿ ರಾಜ ಹೇಗೆ ತನ್ನ ಮಗುವಿನ ಆರೈಕೆಯನ್ನು ಬೇರೆಯವರಿಗೆ ಹಸ್ತಾಂತರಿಸುತ್ತಿದ್ದಂತೆ ಮಗುವಿನ ಸ್ವಭಾವ ಬದಲಾಗುತ್ತದೆ ಎಂಬುದನ್ನು ಅದ್ಭುತವಾಗಿ ಚಿತ್ರಿಸಲಾಗಿದೆ.

ಇದನ್ನೂ ಓದಿ: Puttakkana Makkalu Serial: ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಕಂಠಿ ವಿದ್ಯಾರ್ಹತೆ ಗೊತ್ತಾ..? 

ಒಳ್ಳೆಯದರಿಂದ ಕೆಟ್ಟದರ ಸ್ವಭಾವದೆಡೆಗೆ ತಿರುಗುವ ಈ ಟ್ರಾನ್ಸಿಷನ್ ನನಗೆ ಬಹಳ ಹಿಡಿಸಿತು. ಭಾವನೆಗಳನ್ನು ತೋರ್ಪಡಿಸಲು ಈ ಪಾತ್ರ ಬಹಳ ಸಹಕಾರಿ. ನಮ್ಮನ್ನು ನಾವು ಚೆನ್ನಾಗಿ ವ್ಯಕ್ತಪಡಿಸುವುದನ್ನು ಈ ಪಾತ್ರ ನಿರೀಕ್ಷಿಸುತ್ತದೆ  ಭಾವನೆಗಳನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತಿದ್ದೇನೆಂದರು. ನಂತರ 'ಶ್ರೀ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿಯಲ್ಲಿ ರಾಣಿ ಪಾತ್ರ ಸಿಕ್ಕಿದೆ. ಬಹಳ ಸಮಯದ ನಂತರ ಮತ್ತೆ ಕನ್ನಡ ಧಾರಾವಾಹಿಯಲ್ಲಿ ನಟಿಸುತ್ತಿರುವುದು ನನಗೆ ಬಹಳ ಸಂತೋಷವಿದೆ" ಎಂದಿದ್ದಾರೆ..

ಇದನ್ನೂ ಓದಿ: Barane aiti Song: ಗುರುದೇವ್ ಹೊಯ್ಸಳ ಚಿತ್ರದ ಟ್ರೈಲರ್‌ ಖಡಕ್‌ ಆಗಿ ಐತಿ ಇದರ ಹಾಡು ʼಬ್ಯಾರೇನೇ ಐತಿʼ

ಪುಟ್ಮಲ್ಲಿಯ ನಂತರ ನನಗೆ ತೆಲುಗಿನಲ್ಲಿ ಬಹಳಷ್ಟು ಅವಕಾಶಗಳು ಬರುತ್ತ ಹೋದವು. ಹಾಗಾಗಿ ನಾನು ತೆಲುಗು ಇಂಡಸ್ಟ್ರಿಯಲ್ಲಿ ಬ್ಯುಸಿ ಇದ್ದೆ. ಈ ನಡುವೆ ಕನ್ನಡದಿಂದ ಬಹಳ ಅವಕಾಶಗಳು ಬಂದರೂ ಸಹ ಒಂದೊಳ್ಳೆ ಪ್ರಾಜೆಕ್ಟ್‌ಗಾಗಿ ಕಾಯುತ್ತಿದ್ದೆ. ಕೊನೆಗೂ ಶ್ರೀನಿವಾಸ ಸರ್ ಅವನಿಂದ ಕರೆ ಬಂತು. ಕನ್ನಡ ಕಿರುತೆರೆಗೆ ವಾಪಸ್ ಆಗಲು ಇದೊಂದು ಒಳ್ಳೆಯ ಪಾತ್ರ ಎಂದು ನನಗೆ ಅನಿಸಿತು. ಲುಕ್ ಟೆಸ್ಟ್‌ನಲ್ಲಿಯೂ ಅದ್ಭುತವಾಗಿ ಪಾಸಾದ ಕಾರಣ ಈಗ ಇಲ್ಲಿ ನಾನು ರಾಣಿ ಪಾತ್ರವನ್ನು ಮಾಡುತ್ತಿದ್ದೇನೆ.

ಇನ್ನು ಪೌರಾಣಿಕ ಪಾತ್ರ ಎಂದಾಗ ಅದರಂತೆ ಒಂದಷ್ಟು ಸವಾಲುಗಳಿರುತ್ತವೆ. ಭಾರವಾದ ಕಾಸ್ಟಿಂಗ್ ಜೊತೆಗೆ ಭಾಷೆಯಲ್ಲಿಯೂ ಬಹಳ ವಿಭಿನ್ನವಾಗಿ ನಾವು ಡೈಲಾಗ್ ಡೆಲಿವರಿ ಮಾಡಬೇಕಾಗುತ್ತದೆ. ಎಲ್ಲವನ್ನು ಹೊರತಾಗಿ ಪೌರಾಣಿಕ ಪಾತ್ರಗಳು ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕಾಗ ಇಂತಹ ಅದ್ಭುತ ಅವಕಾಶಗಳನ್ನು ಬಿಡಬಾರದು ಈ ನಿಟ್ಟಿನಲ್ಲಿ ನಾನು ಬಹಳ ಲಕ್ಕಿ ಎಂದು ಭಾವಿಸುತ್ತೇನೆ ಎಂದಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News