Vedha Teaser Release: ರಕ್ತ ಮತ್ತು ಕ್ರೂರತೆಯ ಕಥೆ ಹೇಳುವ ವೇದ ಚಿತ್ರದ ಟೀಸರ್

ಶಿವಣ್ಣ ಅಭಿನಯದ ಬಹುನಿರೀಕ್ಷಿತ ವೇದ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ.ರಕ್ತ ಮತ್ತು ಕ್ರೂರತೆಯ ಕಥನವನ್ನು ಈ ಚಿತ್ರವು ಸಾರುತ್ತದೆ ಎನ್ನುವುದಕ್ಕೆ ಇದರ ಟೀಸರ್ ಸಾಕ್ಷಿಯಾಗಿದೆ.

Written by - Zee Kannada News Desk | Last Updated : Nov 11, 2022, 10:11 PM IST
  • ಈ ವರ್ಷ ಡಿಸೆಂಬರ್ 23 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ಗೀತಾ ಪಿಕ್ಚರ್ಸ್ ಹಾಗೂ ಜೀ ಸ್ಟುಡಿಯೊಸ್ ಬಂಡವಾಳ ಹೂಡಿದೆ.
  • ಹರ್ಷ ಈ ಚಿತ್ರವನ್ನು ನಿರ್ದೇಶಿಸಿದರೆ, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.
  • ಈ ಚಿತ್ರದ ತಾರಾಗಣದಲ್ಲಿ ಡಾ.ಶಿವರಾಜ ಕುಮಾರ್,ಗನವಿ ಲಕ್ಷಣ್, ಉಮಾಶ್ರೀ, ಅದಿತಿ ಸಾಗರ್, ಶ್ವೇತಾ ಚಂಗಪ್ಪ, ಕಾಣಿಸಿಕೊಂಡಿದ್ದಾರೆ.
Vedha Teaser Release: ರಕ್ತ ಮತ್ತು ಕ್ರೂರತೆಯ ಕಥೆ ಹೇಳುವ ವೇದ ಚಿತ್ರದ ಟೀಸರ್ title=
Photo Courtsey: Twitter

ಬೆಂಗಳೂರು: ಶಿವಣ್ಣ ಅಭಿನಯದ ಬಹುನಿರೀಕ್ಷಿತ ವೇದ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ.ರಕ್ತ ಮತ್ತು ಕ್ರೂರತೆಯ ಕಥನವನ್ನು ಈ ಚಿತ್ರವು ಸಾರುತ್ತದೆ ಎನ್ನುವುದಕ್ಕೆ ಇದರ ಟೀಸರ್ ಸಾಕ್ಷಿಯಾಗಿದೆ.

ಹೌದು, ಈಗಾಗಲೇ ಭಜರಂಗಿ, ಹಾಗೂ ಭಜರಂಗಿ 2 ನಂತಹ ಚಿತ್ರಗಳನ್ನು ಶಿವಣ್ಣನಿಗೆ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನಿರ್ದೇಶಕ ಹರ್ಷ ಈಗ ಕನ್ನಡದಿಂದ ಮತ್ತೊಂದು ಪ್ಯಾನ್ ಇಂಡಿಯಾಗೆ ಹೊಂದಬಹುದಾದ ಕಥಾಹಂದರವನ್ನು ಸಿದ್ಧಪಡಿಸಿದ್ದಾರೆ.1960ರ ದಶಕದಲ್ಲಿನ ಕಥೆ ಹೇಳುವ ಚಿತ್ರವು ದೃಶ್ಯ ಸಂಯೋಜನೆಯಿಂದಲೇ ಈ ಚಿತ್ರದ ಟೀಸರ್ ಗಮನ ಸೆಳೆಯುತ್ತದೆ.

ಈ ವರ್ಷ ಡಿಸೆಂಬರ್ 23 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ಗೀತಾ ಪಿಕ್ಚರ್ಸ್ ಹಾಗೂ ಜೀ ಸ್ಟುಡಿಯೊಸ್ ಬಂಡವಾಳ ಹೂಡಿದೆ. ಹರ್ಷ ಈ ಚಿತ್ರವನ್ನು ನಿರ್ದೇಶಿಸಿದರೆ, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.ಈ ಚಿತ್ರದ ತಾರಾಗಣದಲ್ಲಿ ಡಾ.ಶಿವರಾಜ ಕುಮಾರ್,ಗನವಿ ಲಕ್ಷಣ್, ಉಮಾಶ್ರೀ, ಅದಿತಿ ಸಾಗರ್, ಶ್ವೇತಾ ಚಂಗಪ್ಪ, ವೀಣಾ ಪೊನ್ನಪ್ಪ, ರಘು ಶಿವಮೊಗ್ಗ ಅವರು ಕಾಣಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

Trending News