ವಸಿಷ್ಠ ಸಿಂಹ ಚಿತ್ರದ ಸಾಂಗ್‌ ರಿಲೀಸ್‌; ಲವ್‌ ಲಿ ಗೆ ರವೀಚಂದ್ರನ್‌, ಉಪೇಂದ್ರ, ಪ್ರೇಮ್‌ ಸಾತ್‌

Love li  Film : ನಟ ವಸಿಷ್ಠ ಸಿಂಹ ನಟಿಸಿರುವ ಲವ್‌ ಲಿ ಚಿತ್ರದ ಮೊದಲ ಹಾಡು ರಿಲೀಸ್‌ ಆಗಿದ್ದು, ಸ್ಯಾಂಡಲ್‌ವುಡ್‌ನ ಸ್ಟಾರ್‌ ಕಲಾವಿದರು ಆಗಮಿಸಿ ಚಿತ್ರಕ್ಕೆ ಶುಭ ಕೋರಿದ್ದಾರೆ.   

Written by - Savita M B | Last Updated : Jun 13, 2023, 02:06 PM IST
  • ನಟ ವಸಿಷ್ಠ ಸಿಂಹ ನಾಯಕನಾಗಿ ನಟಿಸಿರುವ ಲವ್‌ ಲಿ ಸಿನಿಮಾ
  • ತನ್ನ ಖಡಕ್‌ ಲುಕ್‌ಗೆ ಸಖತ್‌ ಫೇಮಸ್‌ ಆಗಿರೋ ನಟ ವಸಿಷ್ಠ ಸಿಂಹ
  • ಇದೀಗ ನಟ ತಮ್ಮ ಚಿತ್ರದ ಹಾಡನ್ನು ಬಿಡುಗಡೆ ಮಾಡುವ ಸಂಭ್ರಮದಲ್ಲಿದ್ದಾರೆ.
ವಸಿಷ್ಠ ಸಿಂಹ ಚಿತ್ರದ ಸಾಂಗ್‌ ರಿಲೀಸ್‌; ಲವ್‌ ಲಿ ಗೆ ರವೀಚಂದ್ರನ್‌, ಉಪೇಂದ್ರ, ಪ್ರೇಮ್‌ ಸಾತ್‌  title=

Vasishta Simha : ಸ್ಯಾಂಡಲ್‌ವುಡ್‌ನ ನಟ ವಸಿಷ್ಠ ಸಿಂಹ ನಾಯಕನಾಗಿ ನಟಿಸಿರುವ ಲವ್‌ ಲಿ ಸಿನಿಮಾ ಅಭಿಮಾನಿಗಳಲ್ಲಿ ಸಖತ್‌ ಕೂತೂಹಲ ಮೂಡಿಸಿದೆ. ತನ್ನ ಖಡಕ್‌ ಲುಕ್‌ಗೆ ಸಖತ್‌ ಫೇಮಸ್‌ ಆಗಿರೋ ನಟ ವಸಿಷ್ಠ ಸಿಂಹ. ಇದೀಗ ನಟ ತಮ್ಮ ಚಿತ್ರದ  ಹಾಡನ್ನು ಬಿಡುಗಡೆ ಮಾಡುವ ಸಂಭ್ರಮದಲ್ಲಿದ್ದಾರೆ. 

ಇನ್ನೂ ವಸಿಷ್ಠ ಸಿಂಹ ಅವರಿಗೆ ಈ ಸಿನಿಮಾ ಸಖತ್‌ ಸ್ಪೇಷಲ್‌ ಅಂದ್ರೆ ತಪ್ಪಾಗಲ್ಲ. ಕಾರಣ ತಮ್ಮ ಪತ್ನಿ ಹರಿಪ್ರಿಯಾ ಅವರಿಂದ ವಸಿಷ್ಠ ಸಿಂಹ ಅವರ ಚಿತ್ರದ ಹಾಡು ರಿಲೀಸ್‌ ಆಗುತ್ತಿದೆ. ಇತ್ತೀಚೆಗಷ್ಟೇ ಈ ಜೋಡಿ ಒಟ್ಟಿಗೆ ನಟಿಸಿರುವ ಯದಾಯದಾಹಿ ಸಿನಿಮಾ ರಿಲೀಸ್‌ ಆಗಿತ್ತು. 

ಇದನ್ನೂ ಓದಿ-ಕೆಟ್ಟ VFX, 500 ಕೋಟಿ ವೇಸ್ಟ್‌..! ʼಆದಿಪುರುಷ ಫಸ್ಟ್‌ ವಿಮರ್ಶೆ ಪೋಸ್ಟ್ ವೈರಲ್‌

ಇದಲ್ಲದೇ ಚಂದನವನದಲ್ಲಿ ರಸಿಕರ ರಾಜ ರವಿಚಂದ್ರನ್‌, ಸೂಪರ್‌ ಸ್ಟಾರ್‌ ಉಪೇಂದ್ರ ಮತ್ತು ಲವ್ಲಿ ಸ್ಟಾರ್‌ ಪ್ರೇಮ್‌ ಅವರು ಒಟ್ಟಾಗಿ ಈ ಸಿನಿಮಾಗೆ ಬೆಂಬಲ ನೀಡಿದ್ದಾರೆ. ಪ್ರಿಯಾಂಕಾ ಉಪೇಂದ್ರ ಸಹ ಅಥಿತಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಈ ಸಿನಿಮಾ ಚೇತನ್‌ ನಿರ್ದೇಶನದ ಮೊದಲ ಸಿನಿಮಾ ಆಗಿದ್ದು, ಅಭುವನಾಸ್‌ ಕ್ರೀಯೆಷನ್ಸ್‌ ಬ್ಯಾನರ್‌ನಡಿಯಲ್ಲಿ ರವೀಂದ್ರ ಕುಮಾರ್‌ ಅವರು ಚಿತ್ರವನ್ನು ನಿರ್ಮಿಸಿದ್ದಾರೆ. 

ಸಿನಿಮಾದ ಹೃದಯ ಭಾಗವಾದ ವಸಿಷ್ಠ ಸಿಂಹ ಖುಷಿಯಲ್ಲಿ "ನನ್ನನ್ನು ತುಂಬಾ ಕಾಡಿದಂತಹ ಸಿನಿಮಾ ಇದು. ಈಗ ಈ ಹಾಡಿನಿಂದ ಪ್ರಮೋಷನ್‌ ಮಾಡಿದ್ದು, ಆಗಸ್ಟ್‌ನ್ಲಿ ಸಿನಿಮಾ ರಿಲೀಸ್‌ ಮಾಡುವ ಯೋಜನೆ ಇದೆ. ಇದು ಸುಂದರ ಪ್ರೇಮಕಥೆಯ ಚಿತ್ರ. ಕಥೆ ತುಂಬಾ ಇಷ್ಟವಾಯಿತು. ನಿರ್ಮಾಪಕರು ಸೇರಿದಂತೆ ಚಿತ್ರತಂಡ ಸಹಕಾರಕ್ಕೆ ಧನ್ಯವಾದ" ಎಂದರು. 

 

ಇದನ್ನೂ ಓದಿ-Tamannaah : ವಿಜಯ್ ವರ್ಮಾ ಜೊತೆಗಿನ ಸಂಬಂಧವನ್ನು ಖಚಿತಪಡಿಸಿದ ತಮನ್ನಾ ಭಾಟಿಯಾ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News