ತನ್ನ ಗೆಳೆಯನ ಬಗ್ಗೆ ತಮಾಷೆಯ ಪೋಸ್ಟ್ ಹಂಚಿಕೊಂಡ ಊರ್ವಶಿ ರೌತೆಲಾ

ಊರ್ವಶಿ ರೌತೆಲಾ ಇತ್ತೀಚಿಗೆ ತಮ್ಮ ಫೋಟೋವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಗುಲಾಬಿ ಬಣ್ಣದ ಸ್ವೆಟ್ಶರ್ಟ್ ಮತ್ತು ನೀಲಿ ಜೀನ್ಸ್ನಲ್ಲಿ ಕಾಣಿಸಿಕೊಂಡಿದ್ದಾರೆ.

Last Updated : Jul 6, 2020, 09:31 AM IST
ತನ್ನ ಗೆಳೆಯನ ಬಗ್ಗೆ ತಮಾಷೆಯ ಪೋಸ್ಟ್ ಹಂಚಿಕೊಂಡ ಊರ್ವಶಿ ರೌತೆಲಾ  title=

ನವದೆಹಲಿ: ನಟಿ ಮತ್ತು ಮಾಜಿ ಸೌಂದರ್ಯ ರಾಣಿ ಊರ್ವಶಿ ರೌತೆಲಾ (Urvashi Rautela) ತಮ್ಮ ಗೆಳೆಯ 'ಫೆಬ್ರವರಿ 30' ನಂತೆ ಇದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಮಾಷೆಯ ಪೋಸ್ಟ್ ಹಂಚಿಕೊಂಡಿದ್ದಾರೆ. ಊರ್ವಶಿ ತನ್ನ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಅವಳು ಗುಲಾಬಿ ಬಣ್ಣದ ಸ್ವೆಟ್‌ಶರ್ಟ್ ಮತ್ತು ನೀಲಿ ಜೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾಳೆ.

ಈ ಚಿತ್ರದೊಂದಿಗೆ ಅವಳು, "ನನ್ನ ಗೆಳೆಯ ಫೆಬ್ರವರಿ 30 ರಂತೆ ಅವನು ಅಸ್ತಿತ್ವದಲ್ಲಿಲ್ಲ" ಎಂದು ಬರೆದುಕೊಂಡಿದ್ದಾರೆ.

 
 
 
 

 
 
 
 
 
 
 
 
 

My boyfriend is like the February 30th. He doesn’t exist 😞 ~ VIRGIN BHANUPRIYA premiers JULY 16th. Thanks a trillion guys for immense love for the trailer💘 I LOVE YOU 💖💜💛🖤❤️🤎🤍💚🧡💙💗 . . . . . . . . . . . . . . . . . . . . . . . . . . . . . . . . . . . . . . . . #love #UrvashiRautela #VirginBhanupriya @zee5premium @zee5

A post shared by URVASHI RAUTELA 🇮🇳Actor🇮🇳 (@urvashirautela) on

ಇದರೊಂದಿಗೆ ಅವರು "ವರ್ಜಿಲ್ ಭಾನುಪ್ರಿಯಾ" ಜುಲೈ 16 ರಂದು ಪ್ರಸಾರವಾಗಲಿದೆ ಎಂದು ಮಾಹಿತಿ ನೀಡಿರುವ ಊರ್ವಶಿ ಟ್ರೈಲರ್‌ಗೆ ನೀವು ನೀಡಿದ ಪ್ರೀತಿ ಅಭಿಮಾನಕ್ಕಾಗಿ ತುಂಬು ಹೃದಯದ ಧನ್ಯವಾದಗಳು ಎಂದು ಬರೆದಿದ್ದಾರೆ.

'ವರ್ಜಿನ್ ಭಾನುಪ್ರಿಯಾ'ದಲ್ಲಿ ಗೌತಮ್ ಗುಲಾಟಿ, ಅರ್ಚನಾ ಪುರಾನ್ ಸಿಂಗ್, ಡೆಲ್ನಾಜ್ ಇರಾನಿ, ರಾಜೀವ್ ಗುಪ್ತಾ ಮತ್ತು ಬ್ರಿಜೇಂದ್ರ ಕಲಾ, ನಿಕ್ಕಿ ಅನೆಜಾ ವಾಲಿಯಾ ಮತ್ತು ರುಮಾನ ಮೋಲಾ ಮುಂತಾದ ನಟರು ನಟಿಸಿದ್ದಾರೆ. ಊರ್ವಶಿ ರೌತೆಲಾ ಅವರ ಚಿತ್ರ ‘ವರ್ಜಿನ್ ಭನುಪ್ರಿಯಾ’ ಜುಲೈ 16 ರಂದು Zee5 ನಲ್ಲಿ ಬಿಡುಗಡೆಯಾಗುತ್ತಿದೆ.

ಅಜಯ್ ಲೋಹನ್ ಇದರ ನಿರ್ದೇಶಕರು ಮತ್ತು ಹನ್ವಂತ್ ಖತ್ರಿ ಮತ್ತು ಲಲಿತ್ ಕೆರ್ರಿ ಇದರ ನಿರೂಪಕರು.

ಊರ್ವಶಿ ಈ ಚಿತ್ರದಲ್ಲಿ ಭಾನುಪ್ರಿಯ ಪಾತ್ರ ನಿರ್ವಹಿಸಿದ್ದು, ಇದರಲ್ಲಿ ಆಕೆ ಕಾಲೇಜಿಗೆ ಹೋಗುವ ಸಂಪ್ರದಾಯವಾದಿ ಹುಡುಗಿಯಾಗಿದ್ದು, ತನ್ನ ಕನ್ಯತ್ವವನ್ನು ಕಳೆದುಕೊಳ್ಳಲು ನಿರ್ಧರಿಸುತ್ತಾಳೆ. ಇಂದಿನ ಜಗತ್ತಿನಲ್ಲಿ ಇದು ಸುಲಭವಾದ ವಿಷಯವಾಗಿರಬೇಕು ಎಂದು ಅವಳು ಭಾವಿಸುತ್ತಾಳೆ. ಹೇಗಾದರೂ ಅವರ ಎಲ್ಲಾ ಪ್ರಯತ್ನಗಳು ವ್ಯರ್ಥವಾಗುತ್ತವೆ ಮತ್ತು ಭವಿಷ್ಯ ಹೇಳುವವರ ಮುನ್ಸೂಚನೆಯ ಪ್ರಕಾರ, ಇದು ಅಸಾಧ್ಯವಾದ ಕೆಲಸವಾಗಿದೆ, ಅದು ಅವರ ಜೀವನದಲ್ಲಿ ಎಂದಿಗೂ ಸಂಭವಿಸುವುದಿಲ್ಲ. ಅದರ ನಂತರ ಏನಾಗುತ್ತದೆ ಎಂದು ಚಿತ್ರದಲ್ಲಿ ಹೇಳಲಾಗಿದೆ.

Trending News