Urfi Javed : ʼಅಲ್ಲಿಗೆ ಪ್ಲಾಸ್ಟಿಕ್‌ ಸುತ್ತಿಕೊಂಡುʼ ರಸ್ತೆಗೆ ಬಂದ ವೈರಲ್‌ ಉರ್ಫಿ..! ವಿಡಿಯೋ ನೋಡಿ

ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್ ಭಯಂಕರ ಪ್ರಸಿದ್ಧಳಾಗಿದ್ದಾಳೆ. ಅವಳನ್ನು ಪ್ರೀತಿಸಿ ಅಥವಾ ಅವಳನ್ನು ದ್ವೇಷಿಸಿ, ಆದ್ರೆ, ಅದನ್ನು ಅವಳು ಕೆರ್‌ ಮಾಡಲ್ಲ. ಬಿಗ್ ಬಾಸ್ ಓಟಿಟಿ ಬೆಡಗಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಚಿತ್ರ ವಿಚಿತ್ರ ಬಟ್ಟೆತೊಟ್ಟು ನೆಟ್ಟಿಗರಿಗೆ ಶಾಕ್‌ ನೀಡುತ್ತಿರುತ್ತಾರೆ. ನೆಟ್ಟಿಗರು ಏನೇ ಎಷ್ಟೇ ಮಾತಾಡ್ಲಿ ಕಿವಿಗೆ ಹಾಕಿಕೊಳ್ಳುವುದಿಲ್ಲ. ಇತ್ತೀಚೆಗೆ, ಉರ್ಫಿ ಸೊಂಟದ ಭಾಗಕ್ಕೆ ಪ್ಲಾಸ್ಟಿಕ್‌ ಸುತ್ತಿಕೊಂಡು ರಸ್ತೆಗಿಳಿದ ವಿಡಿಯೋ ವೈರಲ್‌ ಆಗುತ್ತಿದೆ.

Written by - Krishna N K | Last Updated : Mar 2, 2023, 07:56 PM IST
  • ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್ ಭಯಂಕರ ಪ್ರಸಿದ್ಧಳಾಗಿದ್ದಾಳೆ.
  • ಅವಳನ್ನು ಪ್ರೀತಿಸಿ ಅಥವಾ ಅವಳನ್ನು ದ್ವೇಷಿಸಿ, ಆದ್ರೆ, ಅದನ್ನು ಅವಳು ಕೆರ್‌ ಮಾಡಲ್ಲ.
  • ಇತ್ತೀಚೆಗೆ, ಉರ್ಫಿ ಸೊಂಟದ ಭಾಗಕ್ಕೆ ಪ್ಲಾಸ್ಟಿಕ್‌ ಸುತ್ತಿಕೊಂಡು ರಸ್ತೆಗಿಳಿದ ವಿಡಿಯೋ ವೈರಲ್‌ ಆಗುತ್ತಿದೆ.
Urfi Javed : ʼಅಲ್ಲಿಗೆ ಪ್ಲಾಸ್ಟಿಕ್‌ ಸುತ್ತಿಕೊಂಡುʼ ರಸ್ತೆಗೆ ಬಂದ ವೈರಲ್‌ ಉರ್ಫಿ..! ವಿಡಿಯೋ ನೋಡಿ title=

Urfi Javed viral video : ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್ ಭಯಂಕರ ಪ್ರಸಿದ್ಧಳಾಗಿದ್ದಾಳೆ. ಅವಳನ್ನು ಪ್ರೀತಿಸಿ ಅಥವಾ ಅವಳನ್ನು ದ್ವೇಷಿಸಿ, ಆದ್ರೆ, ಅದನ್ನು ಅವಳು ಕೆರ್‌ ಮಾಡಲ್ಲ. ಬಿಗ್ ಬಾಸ್ ಓಟಿಟಿ ಬೆಡಗಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಚಿತ್ರ ವಿಚಿತ್ರ ಬಟ್ಟೆತೊಟ್ಟು ನೆಟ್ಟಿಗರಿಗೆ ಶಾಕ್‌ ನೀಡುತ್ತಿರುತ್ತಾರೆ. ನೆಟ್ಟಿಗರು ಏನೇ ಎಷ್ಟೇ ಮಾತಾಡ್ಲಿ ಕಿವಿಗೆ ಹಾಕಿಕೊಳ್ಳುವುದಿಲ್ಲ. ಇತ್ತೀಚೆಗೆ, ಉರ್ಫಿ ಸೊಂಟದ ಭಾಗಕ್ಕೆ ಪ್ಲಾಸ್ಟಿಕ್‌ ಸುತ್ತಿಕೊಂಡು ರಸ್ತೆಗಿಳಿದ ವಿಡಿಯೋ ವೈರಲ್‌ ಆಗುತ್ತಿದೆ.

ಹೌದು...! ಉರ್ಫಿಗೆ ಬಟ್ಟೆ ಅಂದ್ರೆ ಅಷ್ಟು ಇಷ್ಟವಿಲ್ಲ. ಈ ಮಾತು ನಾವು ಹೇಳ್ತಿಲ್ಲ ಬದಲಿವೆ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅವಾಗಿನಿಂದ ಇನ್ನೂ ಜಾಸ್ತಿನೇ ಬಟ್ಟೆ ತೊಡುವುದನ್ನು ಮರೆತು ಬಿಟ್ಟಿದ್ದಾರೆ. ತಮ್ಮ ವಿಚಿತ್ರ ಪ್ಯಾಶನ್‌ ಸೆನ್ಸ್‌ನಿಂದಾಗಿ ಕೆಲ ಮಂಡಿವಂತ ನೆಟ್ಟಿಗರ ಆಕ್ರೋಶಕ್ಕೂ ಕಾರಣವಾಗಿದ್ದಾರೆ. ಮೊನ್ನೆಯಷ್ಟೇ ಸ್ಟಾರ್‌ಗಳಿಂದ ತಮ್ಮ ಸ್ತನಗಳನ್ನು ಮುಚ್ಚಿಕೊಂಡು ನೋಡುಗರಿಗೆ ಶಾಕ್‌ ಉಂಟು ಮಾಡಿದ್ದರು. ಇದೀಗ ಊಟದ ಟೇಬಲ್‌ ಮೇಲೆ ಹಾಕುವ ಪ್ಲಾಸ್ಟಿಕ್‌ ಸುತ್ತಿಕೊಂಡು ಎಲ್ಲರಿಗೂ ಶಾಕ್‌ ನೀಡಿದ್ದಾಳೆ.

 
 
 
 

 
 
 
 
 
 
 
 
 
 
 

A post shared by Viral Bhayani (@viralbhayani)

ಇದನ್ನೂ ಓದಿ: Prabhas Anushka Shetty : ʼಈ ನಟನʼ ಜೊತೆ ʼಅನುಷ್ಕಾ ಸಂಬಂಧʼ..! ಇದೇ ʼಪ್ರಭಾಸ್‌-ಶೆಟ್ಟಿ ಬ್ರೇಕ್‌ಅಪ್‌ʼಗೆ ಕಾರಣ..!

ಉರ್ಫಿ ತನ್ನ ವೀಡಿಯೊ ಹಾಗೂ ಫೋಟೋಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ಫೇಮಸ್‌ ಆಗಿದ್ದಾರೆ. ಕಸದಿಂದ ರಸ ಎನ್ನುವಂತೆ ಕೆಲಸಕ್ಕೆ ಬಾರದ ವಸ್ತುಗಳಿಂದ ಮಾಡಿದ ಉಡುಪನ್ನು ಉರ್ಫಿ ಧರಿಸಿ ವಿಡಿಯೋವನ್ನು ಆನ್‌ಲೈನ್ ಪೋಸ್ಟ್‌ ಮಾಡ್ತಾರೆ. 25 ವರ್ಷದ ಈ ಸುಂದರಿ, ಮೊದಲು 2016 ರ ಟಿವಿ ಶೋ ಬಡೇ ಭಯ್ಯಾ ಕಿ ದುಲ್ಹನಿಯಾದಲ್ಲಿ ಕಾಣಿಸಿಕೊಂಡರು, ನಂತರ ಮೇರಿ ದುರ್ಗಾ, ಬೆಪನ್ನಾಹ್ ಮತ್ತು ಪಂಚ್ ಬೀಟ್ ಸೀಸನ್ 2 ರಲ್ಲಿ ಕಾಣಿಸಿಕೊಂಡರು. ಉರ್ಫಿ ಜಾವೇದ್ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಮತ್ತು ಕಸೌತಿ ಜಿಂದಗಿ ಕೇ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಉರ್ಫಿ ಆಗಾಗ್ಗೆ ಅಸಭ್ಯತೆ ಮತ್ತು ನಗ್ನತೆಯನ್ನು ಪ್ರದರ್ಶಿಸುತ್ತಿರುವ ಆರೋಪವನ್ನು ಎದುರಿಸುತ್ತಿದ್ದಾಳೆ. ಆದ್ರೂ ಟ್ರೋಲ್‌ ಮತ್ತು ಡ್ರೆಸ್ಸಿಂಗ್ ಶೈಲಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವವರ ವಿರುದ್ಧ ತಮ್ಮದೇ ಶೈಲಿಯಲ್ಲಿ ಉತ್ತರ ನೀಡುವ ಮೂಲಕ ಅವರ ಬಾಯಿಮುಚ್ಚಿಸುತ್ತಾರೆ. ಬಿಗ್ ಬಾಸ್ OTT ಸ್ಪರ್ಧಿ ಉರ್ಫಿ ಜಾವೇದ್ ಇತ್ತೀಚೆಗೆ ಡೇಟಿಂಗ್ ರಿಯಾಲಿಟಿ ಶೋ ಸ್ಪ್ಲಿಟ್ಸ್ವಿಲ್ಲಾ X4 ನಲ್ಲಿ ಕಾಣಿಸಿಕೊಂಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News