Urfi Javed: ಇದೇನಿದು ಹೊಸ ಅವತಾರ! ಉರ್ಫಿ ಜಾವೇದ್‌ ಇತ್ತೀಚಿನ ವಿಡಿಯೋ ನೋಡಿದ್ದೀರಾ?

Urfi Javed Video: ಗುಲಾಬಿ ಹೂಗಳ ಪಕಳೆಗಳಿರುವ ಹಾಸಿಗೆಯ ಮೇಲೆ ಮಲಗಿರುವಾಗ ಉರ್ಫಿ ಜಾವೇದ್ ಅವರ ವಿಡಿಯೋವೊಂದು ಎಲ್ಲರ ಗಮನಸೆಳೆಯುತ್ತಿದೆ. ಉರ್ಫಿಯ ಈ ಹೊಸ ಅವತಾರ ಕಂಡು ನೆಟ್ಟಿಗರು ತಬ್ಬಿಬ್ಬಾಗಿದ್ದಾರೆ. 

Written by - Chetana Devarmani | Last Updated : Jul 25, 2022, 01:39 PM IST
  • ಇದೇನಿದು ಹೊಸ ಅವತಾರ!
  • ಉರ್ಫಿ ಜಾವೇದ್‌ ಇತ್ತೀಚಿನ ವಿಡಿಯೋ ನೋಡಿದ್ದೀರಾ?
  • ಗುಲಾಬಿ ಹೂಗಳ ಪಕಳೆಗಳಿರುವ ಹಾಸಿಗೆಯ ಮೇಲೆ ಉರ್ಫಿ
Urfi Javed: ಇದೇನಿದು ಹೊಸ ಅವತಾರ! ಉರ್ಫಿ ಜಾವೇದ್‌ ಇತ್ತೀಚಿನ ವಿಡಿಯೋ ನೋಡಿದ್ದೀರಾ? title=
ಉರ್ಫಿ ಜಾವೇದ್‌

Urfi Javed Video: ಇಂದು ಸಾಮಾಜಿಕ ಮಾಧ್ಯಮವನ್ನು ಬಳಸುವ ಬಹುತೇಕ ಎಲ್ಲರಿಗೂ ಉರ್ಫಿ ಜಾವೇದ್ ಹೆಸರು ತಿಳಿದಿದೆ. ನಟಿ ಮತ್ತು ರೂಪದರ್ಶಿ ಉರ್ಫಿ ತನ್ನ ವಿಶಿಷ್ಟವಾದ ಫ್ಯಾಶನ್ ಸೆನ್ಸ್‌ನಿಂದ ಪ್ರಪಂಚದಾದ್ಯಂತ ಗುರುತಿಸಲ್ಪಟ್ಟಿದ್ದಾರೆ. ಪ್ರತಿದಿನ, ಉರ್ಫಿ ವಿಭಿನ್ನ ಬಟ್ಟೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ತನ್ನ ಇತ್ತೀಚಿನ ವಿಡಿಯೋದಲ್ಲಿ, ಉರ್ಫಿ ತನ್ನ ಬಟ್ಟೆಗಳನ್ನು ಬಿಟ್ಟು ತನ್ನ ದೇಹವನ್ನು ಪ್ರದರ್ಶಿಸಲು ಗುಲಾಬಿ ದಳಗಳನ್ನು ಆಶ್ರಯಿಸಿದ್ದಾರೆ. ಅಭಿಮಾನಿಗಳು ಅವರ ವಿಡಿಯೋವನ್ನು ಮತ್ತೆ ಮತ್ತೆ ವೀಕ್ಷಿಸುತ್ತಿದ್ದಾರೆ ಮತ್ತು ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಳ್ಳುತ್ತಿದ್ದಾರೆ. 

ಇದನ್ನೂ ಓದಿ: Vicky Katrina: ಸಲ್ಮಾನ್‌ ಖಾನ್‌ ಬಳಿಕ ವಿಕ್ಕಿ ಕೌಶಲ್-ಕತ್ರಿನಾಗೆ ಬಂತು ಕೊಲೆ ಬೆದರಿಕೆ

ಉರ್ಫಿ ಜಾವೇದ್ ಗುಲಾಬಿ ದಳಗಳ ನಡುವೆ ಮಲಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅವರು ತಮ್ಮ ಖಾಸಗಿ ಅಂಗಗಳನ್ನು ಬಟ್ಟೆಯಿಂದ ಮುಚ್ಚುವ ಬದಲು ಗುಲಾಬಿ ದಳಗಳಿಂದ ಮುಚ್ಚಿದ್ದಾರೆ. ಉರ್ಫಿ ಜಾವೇದ್ ತನ್ನ ಶೈಲಿಯಿಂದ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಿದ್ದಾರೆ. ನಾಚಿಕೆ ಮತ್ತು ನಗುತ್ತಿರುವ ಉರ್ಫಿ ಅವರ ಮುಖ ಎಲ್ಲರ ಗಮನಸೆಳೆಯುತ್ತಿದೆ. 

 

 
 
 
 

 
 
 
 
 
 
 
 
 
 
 

A post shared by Uorfi (@urf7i)

 

ಭಾನುವಾರ ಪೋಸ್ಟ್ ಮಾಡಿದ ವಿಡಿಯೋಗೆ ಇದುವರೆಗೆ 1.67 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಇದಲ್ಲದೇ ಅಭಿಮಾನಿಗಳು ಉರ್ಫಿಯ ಬೋಲ್ಡ್ ನೆಸ್ ಗೆ ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ರಣವೀರ್ ಸಿಂಗ್ ಬಳಿಕ ಬೆತ್ತಲಾದ ಸೌತ್‌ ಸ್ಟಾರ್‌, ಪತ್ನಿಗೆ ಸಿಕ್ತು ಕ್ರೆಡಿಟ್‌

ಗುಲಾಬಿ ಹೂವಿನ ಪಕಳೆಯಿರುವ ಹಾಸಿಗೆಯ ಮೇಲೆ ಮಲಗಿರುವ ಉರ್ಫಿ ಜಾವೇದ್ ಮೇಲೆ ಹೂವಿನ ಮಳೆ ಸುರಿಯುತ್ತಿದೆ. 'ರೂಪ್ ಸುಹಾನಾ ಲಗ್ತಾ ಹೈ...' ಎಂದು ವಿಡಿಯೋ ಹಿನ್ನಲೆಯಲ್ಲಿ ಪ್ಲೇ ಆಗುತ್ತಿದ್ದು, ಉರ್ಫಿ ಸ್ಟೈಲ್ ಮತ್ತಷ್ಟು ಆಕರ್ಷಕವಾಗಿದೆ. ಉರ್ಫಿ ಇನ್‌ಸ್ಟಾಗ್ರಾಮ್‌ನಲ್ಲಿ 3 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News