ಫ್ಯಾನ್ಸ್‌ಗೆ ಎಕೋ ಫ್ರೆಂಡ್ಲಿ ಮೇಸೆಜ್‌ ಕೊಟ್ಟ ಉರ್ಫಿ, ಇದೊಂದು ಬಾಕಿ ಇತ್ತು ಎಂದ ನೆಟ್ಟಿಗರು..!

Urfi Javed : ನಟಿ ಉರ್ಫಿ ಜಾವೇದ್ ಅವರು ಫ್ಯಾಷನ್ ಮಾಡೋದು ಎಲ್ಲರಿಗೂ ಗೊತ್ತು. ಇಂಟರ್ನೆಟ್ ಸೆನ್ಸೇಷನ್ ಮತ್ತು ಪಾಪರಾಜಿಗಳ ನೆಚ್ಚಿನ ಮಾಡೆಲ್ ಇವರು. ತಮ್ಮ ವಿಚಿತ್ರವಾದ ಬಟ್ಟೆ ಮತ್ತು ಬೋಲ್ಡ್ ಲುಕ್‌ನಿಂದಾಗಿ ಯಾವಾಗಲೂ ಚರ್ಚೆಯಲ್ಲಿರುತ್ತಾರೆ. ಅಲ್ಲದೇ ಆಗಾಗ್ಗೆ ತನ್ನ ಉಡುಗೆಯಿಂದ ಜನರ ಗಮನವನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ.   

Written by - Zee Kannada News Desk | Last Updated : Apr 4, 2023, 07:12 PM IST
  • ತನ್ನ ವಿಚಿತ್ರ ಫ್ಯಾಷನ್ ಸೆನ್ಸ್​ನಿಂದಲೇ ಫೇಮಸ್ ಆಗಿರುವ ಉರ್ಫಿ ಜಾವೇದ್
  • ಬಿಗ್ ಬಾಸ್ OTT ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದರು.
  • ಕಸೌತಿ ಜಿಂದಗಿ ಕೇ ಚಿತ್ರದಲ್ಲಿ ತನಿಶಾ ಚಕ್ರವರ್ತಿಯಾಗಿ ಕಾಣಿಸಿಕೊಂಡರು.
ಫ್ಯಾನ್ಸ್‌ಗೆ ಎಕೋ ಫ್ರೆಂಡ್ಲಿ ಮೇಸೆಜ್‌ ಕೊಟ್ಟ ಉರ್ಫಿ, ಇದೊಂದು ಬಾಕಿ ಇತ್ತು ಎಂದ ನೆಟ್ಟಿಗರು..!  title=

Eco Friendly Dress Of Urfi : ತನ್ನ ವಿಚಿತ್ರ ಫ್ಯಾಷನ್ ಸೆನ್ಸ್​ನಿಂದಲೇ ಫೇಮಸ್ ಆಗಿರುವ ಉರ್ಫಿ ಜಾವೇದ್ ಅವರ ಬೋಲ್ಡ್‌ನೆಸ್ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತನ್ನ ಪ್ರತಿಯೊಂದು ಪೋಸ್ಟ್‌ ಮತ್ತು ವೀಡಿಯೋಗಳೊಂದಿಗೆ ಉರ್ಫಿ ಹೊಸದಾದ ಅಸಾಮಾನ್ಯ ಮತ್ತು ಮಿತಿ ಮೀರಿ, ಚಿತ್ರ ವಿಚಿತ್ರವಾದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಉರ್ಫಿ ಜಾವೇದ್ ತನ್ನ ನೋಟದಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಲು ಅವರ ಒಂದು ಫೋಟೋ ಸಾಕು. 

ಇದೀಗ ಉರ್ಫಿ ಜಾವೇದ್‌ ಹೊಸ ಉಡುಗೆಯ ಪೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಶೇರ್‌ ಮಾಡಿದ್ದಾರೆ. ಅದರಲ್ಲಿ  ನೀಲಿ ಬಣ್ಣದ ಕೋಟ್‌ ಮೇಲೆ ಹುಲ್ಲು ಬೆಳೆದಿರುವುದು ಕಾಣುತ್ತಿದೆ. ಉರ್ಫಿಯ ಹೊಸ ಲುಕ್‌ ಚೆನ್ನಾಗಿದೆ, ಎಕೋ ಪ್ರೆಂಡ್ಲಿ, ಇದೊಂದು ಬಾಕಿ ಇತ್ತು ಎಂದೆಲ್ಲಾ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. 

 

 
 
 
 

 
 
 
 
 
 
 
 
 
 
 

A post shared by Uorfi (@urf7i)

 

ಇದನ್ನೂ ಓದಿ-Maajar Movie: "ಮಾಜರ್" ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ ಸಚಿವ ಕೆ.ಗೋಪಾಲಯ್ಯ

ಉರ್ಫಿ ಜಾವೇದ್ ಅವರು ಅಕ್ಟೋಬರ್ 15, 1997 ರಂದು ಭಾರತದ ಉತ್ತರ ಪ್ರದೇಶದ ಲಕ್ನೋದಲ್ಲಿ ಜನಿಸಿದರು. 2016 ರಿಂದ 2017 ರವರೆಗೆ, ಅವರು ಸ್ಟಾರ್ ಪ್ಲಸ್ ಸರಣಿ ಚಂದ್ರ ನಂದಿನಿಯಲ್ಲಿ ಛಾಯಾ ಪಾತ್ರವನ್ನು ನಿರ್ವಹಿಸಿದರು. ಸೋನಿ ಟಿವಿಯಲ್ಲಿ 2016 ರ ಬಡೇ ಭಯ್ಯಾ ಕಿ ದುಲ್ಹನಿಯಾ ಸೀಸನ್‌ನಲ್ಲಿ, ಜಾವೇದ್ ಅವ್ನಿ ಪಂತ್ ಪಾತ್ರವನ್ನು ನಿರ್ವಹಿಸಿದ್ದಾರೆ. ನಂತರ, ಸ್ಟಾರ್ ಪ್ಲಸ್‌ನಲ್ಲಿ, ಅವರು ಮೇರಿ ದುರ್ಗಾದಲ್ಲಿ ಆರತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

ಅವರು ಕಲರ್ಸ್ ಟಿವಿಯ ಬೇಪನ್ನಾದಲ್ಲಿ ಬೆಲ್ಲಾ ಕಪೂರ್, ಸ್ಟಾರ್ ಭಾರತ್‌ನ ಜಿಜಿ ಮಾದಲ್ಲಿ ಪಿಯಾಲಿ, ಎಸ್‌ಎಬಿ ಟಿವಿಯ ಸಾತ್ ಫೆರೋ ಕಿ ಹೆರಾ ಫೆರಿಯಲ್ಲಿ ಕಾಮಿನಿ ಜೋಶಿ ಮತ್ತು 2018 ರಲ್ಲಿ ದಯಾನ್‌ನಲ್ಲಿ ನಂದಿನಿ ಪಾತ್ರವನ್ನು ನಿರ್ವಹಿಸಿದ್ದಾರೆ. 2020 ರಲ್ಲಿ, ಅವರು ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಚಿತ್ರದಲ್ಲಿ ಶಿವಾನಿ ಭಾಟಿಯಾ ಆಗಿ ತಮ್ಮ ಮೊದಲ ನಟನೆಯನ್ನು ಮಾಡಿದರು. ನಂತರ ಅವರು ಕಸೌತಿ ಜಿಂದಗಿ ಕೇ ಚಿತ್ರದಲ್ಲಿ ತನಿಶಾ ಚಕ್ರವರ್ತಿಯಾಗಿ ಕಾಣಿಸಿಕೊಂಡರು.

​ಇದನ್ನೂ ಓದಿ-Kannada New Serial : ಮೌನ ಹಾಗೂ ಸನ್ನೆಯನ್ನು  ಅರ್ಥ ಮಾಡಿಸಲು  ಬರುತ್ತಿದೆ ʼರಾಣಿʼ ಎಂಬ ಹೊಸ ಧಾರವಾಹಿ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News