Upasana Ramcharan : ಆಸ್ಪತ್ರೆಯಿಂದ ಅರಮನೆಗೆ ಮೆಗಾ ಪ್ರಿನ್ಸೆಸ್‌

Upasana ramcharan Daughter : ಇತ್ತೀಚೆಗೆ ರಾಮ್‌ಚರಣ್‌ ಹಾಗೂ ಉಪಾಸನಾ ಫ್ಯಾಮಿಲಿಗೆ ರಾಜಕುಮಾರಿಯ ಎಂಟ್ರಿಯಾಗಿತ್ತು. ಇದೀಗ ಮೆಗಾ ಪ್ರಿನ್ಸೆಸ್‌ ಗ್ರ್ಯಾಂಡ್‌ ಆಗಿ ಅರಮನೆ ಸೇರಿದ್ದಾಳೆ. ಹೌದು ರಾಮ್‌ ಚರಣ್‌ ಪತ್ನಿಯವರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.   

Written by - Savita M B | Last Updated : Jun 23, 2023, 06:59 PM IST
  • ಆಸ್ಪತ್ರೆಯಿಂದ ಉಪಾಸನಾ ರಾಮ್‌ಚರಣ್‌ ಡಿಸ್ಚಾರ್ಜ್‌ ಆಗಿದ್ದಾರೆ.
  • ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ್ದಾರೆ.
  • ಮೆಗಾ ಸ್ಟಾರ್‌ ಅಭಿಮಾನಿಗಳು ವಿದೇಶದಲ್ಲಿಯೂ ಇದ್ದಾರೆ ಇ
Upasana Ramcharan : ಆಸ್ಪತ್ರೆಯಿಂದ ಅರಮನೆಗೆ ಮೆಗಾ ಪ್ರಿನ್ಸೆಸ್‌  title=

Ramcharan-Upasana : ಡಿಸೆಂಬರ್‌ನಲ್ಲಿ ಮೆಗಾ ಫ್ಯಾಮಿಲಿ ಸೊಸೆ ಗರ್ಭಿಣಿಯಾಗಿರುವ ವಿಚಾರವನ್ನು ಚಿರಂಜೀವಿ ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ನಂತರ ಆಸ್ಕರ್‌ ಪ್ರಶಸ್ತಿ ಸಮಾರಂಭಕ್ಕೆ ಬಂದಾಗ ರಾಮ್‌ಚರಣ್‌ ದಂಪತಿ ಈ ವಿಚಾರವನ್ನು ರಿವೀಲ್‌ ಮಾಡಿದ್ದರು. ದುಬೈನಲ್ಲಿ ಸೀಮಂತ ಕಾರ್ಯಕ್ರಮ ನಡೆದಿತ್ತು. ಇದಾದ ಬಳಿಕ ರಾಮ್‌ಚರಣ್‌ ಹಾಗೂ ಉಪಾಸನಾ ವಿದೇಶಗಳಲ್ಲಿ ಮಸ್ತ್‌ ಎಂಜಾಯ್‌ ಮಾಡಿದ್ದರು. 

ಇನ್ನು ಆಸ್ಪತ್ರೆಯಿಂದ ಉಪಾಸನಾ ರಾಮ್‌ಚರಣ್‌ ಡಿಸ್ಚಾರ್ಜ್‌ ಆಗಿದ್ದಾರೆ. ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ್ದಾರೆ. ಮೆಗಾ ಪವರ್‌ ಸ್ಟಾರ್‌ ಮಾದ್ಯಮಗಳೊಂದಿಗೆ ಮಾತನಾಡಿ "ನನಗೆ ತುಂಬಾ ಸಂತೋಷವಾಗಿದೆ. ಪ್ರಪಂಚಾದ್ಯಂತ ಇರುವ ಅಭಿಮಾನಿಗಳ ಹಾಗೂ ಮೆಗಾ ಫ್ಯಾನ್ಸ್‌ಗಳ ಆಶೀರ್ವಾದ ನಮ್ಮ ಮಗುವಿಗೆ ಸಿಕ್ಕಿದೆ ಎಲ್ಲರಿಗೂ ಧನ್ಯವಾದ" ಎಂದಿದ್ದಾರೆ.  

ಇದನ್ನೂ ಓದಿ-ಹಸಿಬಿಸಿ ಸೀನ್‌ಗಳನ್ನು ಮಾಡುವಾಗ ಕಂಪರ್ಟ್‌ ಫೀಲ್‌ ನೀಡಿದ್ದು ವಿಜಯ್‌ ವರ್ಮಾ-ತಮನ್ನಾ

ಮೆಗಾ ಸ್ಟಾರ್‌ ಅಭಿಮಾನಿಗಳು ವಿದೇಶದಲ್ಲಿಯೂ ಇದ್ದಾರೆ ಇವರ ಕುರಿತಾಗಿಯೂ ರಾಮ್‌ಚರಣ್‌ ಮಾತನಾಡಿದ್ದು, "ವಿದೇಶದಲ್ಲಿರುವ ಅಭಿಮಾನಿಗಳು ಸಹ ನಮ್ಮ ಮಗುವಿನ ಬಗ್ಗೆ ಸಂತಸ ವ್ಯಪಡಿಸಿರುವುದು ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಮಗುವಿಗೆ ನಿಮ್ಮೆಲ್ಲರ ಆಶೀರ್ವಾದ ಸದಾ ಬೇಕು. ಶೀಘ್ರದಲ್ಲೇ ಮಗುವಿನ ನಾಮಕರಣವನ್ನೂ ಮಾಡುತ್ತೇವೆ. ನನಗೆ ಸಂಪ್ರದಾಯಗಳ ಬಗ್ಗೆ ಅಷ್ಟಾಗಿ ಗೊತ್ತಿಲ್ಲ, 13 ಅಥವಾ 21 ನೇ ದಿನ ಮಗುವಿನ ಹೆಸರನ್ನು ರಿವೀಲ್‌ ಮಾಡುತ್ತೇವೆ. ಈಗಾಗಲೇ ನಾವಿಬ್ಬರು ಒಂದು ಹೆಸರನ್ನು ಆರಿಸಿದ್ದೇವೆ". 

ಇನ್ನು ಮಾದ್ಯಮ ಮಿತ್ರರು ನಿಮ್ಮ ಮಗು ಯಾರನ್ನು ಹೋಲುತ್ತದೆ ಎಂದು ರಾಮ್‌ಚರಣ್‌ ಅವರಿಗೆ ಕೇಳುತ್ತಾರೆ ಇದಕ್ಕೆ ಉತ್ತರಿಸಿದ ಅವರು "ಖಂಡಿತ ತನ್ನ ತಂದೆಯಂತೆ ಇದ್ದಾಳೆ" ಎಂದು ನಸುನಕ್ಕಿದ್ದಾರೆ. ಮೆಗಾ ಫ್ಯಾಮಿಲಿಯಲ್ಲಿ ಪ್ರಿನ್ಸೆಸ್‌ ಆಗಮನವಾಗಿರುವುದು ಮೆಗಾಸ್ಟಾರ್‌ ಕುಟುಂಬಕ್ಕೂ ಹಾಗೂ ಅವರ ಅಭಿಮಾನಿಗಳಿಗೂ ಸಖತ್‌ ಖುಷಿ ನೀಡಿದೆ. ಚಿರಂಜೀವಿ ಮನೆಯಲ್ಲಿ ಸಡಗರದ ವಾತಾವರಣ ಸೃಷ್ಠಿಯಾಗಿದೆ. 

ಇದನ್ನೂ ಓದಿ-Shiva Rajkumar: ಶಿವಣ್ಣನ ನಟನೆಯ ʼಜೈಲರ್ʼ ಸಿನಿಮಾ ರಿಲೀಸ್ ಗೆ ಡೇಟ್‌ ಫಿಕ್ಸ್‌ ; ಇಲ್ಲಿದೆ ಈ ಚಿತ್ರದ ಅಪ್​ಡೇಟ್ಸ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News