UI Song: ನಂದು ತುಂಬಾ ದೊಡ್ಡದು .. ಎಂದ ರಿಯಲ್‌ ಸ್ಟಾರ್:‌ ಚೀಪ್‌ ಸಾಂಗ್‌ ಪ್ರೋಮೋ ಔಟ್!

UI Movie First Song Promo: ಚಂದನವನದ ರಿಯಲ್‌ ಸ್ಟಾರ್‌ ಉಪೇಂದ್ರ ನಿರ್ದೇಶಿಸಿ ನಟಿಸಿರುವ ಯುಐ ಸಿನಿಮಾದ ಮೊದಲ ಹಾಡು ಚೀಪ್‌ ಸಾಂಗ್‌ ಪ್ರೋಮೋ ರಿಲೀಸ್‌ ಮಾಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Feb 14, 2024, 02:57 PM IST
  • ಉಪೇಂದ್ರ 'ವ್ಯಾಲಂಟೈನ್ಸ್ ಡೇ' ಅಂದರೇ ಫೆಬ್ರವರಿ 14 ರಂದು ಯುಐ ಸಿನಿಮಾದ ಮೊದಲ ಹಾಡಿನ ಟೀಸರ್‌ ರಿಲೀಸ್‌ ಮಾಡಿದ್ದಾರೆ.
  • ಒಟ್‌ನಲ್ಲಿ ಉಪ್ಪಿ ಈ ಸಣ್ಣ ಸಾಂಗ್ ಝಲಕ್‌ನಿಂದಲೇ ಗೆದ್ದಿದ್ದು, ಇದರ ಕಂಪ್ಲಿಟ್ ಸಾಂಗ್ ಇದೇ ತಿಂಗಳು 26ರಂದು ರಿಲೀಸ್‌ ಆಗಲಿದೆ.
  • ರಿಯಲ್‌ ಸ್ಟಾರ್‌ ಬಹಳ ವಿಭಿನ್ನ ಗೆಟಪ್‌ನಲ್ಲಿ ಸ್ಟೆಪ್‌ ಹಾಕಿದ್ದು, ಒಂದಷ್ಟು ಡ್ಯಾನ್ಸರ್ಸ್ ಉಪೇಂದ್ರಗೆ ಸಾಥ್ ಕೊಟ್ಟಿದ್ದಾರೆ.
UI Song: ನಂದು ತುಂಬಾ ದೊಡ್ಡದು .. ಎಂದ ರಿಯಲ್‌ ಸ್ಟಾರ್:‌ ಚೀಪ್‌ ಸಾಂಗ್‌ ಪ್ರೋಮೋ ಔಟ್! title=

UI Movie Cheap Song Promo Released: ಸ್ಯಾಂಡಲ್‌ವುಡ್‌ ರಿಯಲ್‌ ಸ್ಟಾರ್‌ ಉಪೇಂದ್ರ ಯುಐ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿರುವವರು, ಚಿತ್ರದಲ್ಲಿ ಅಭಿನಯಿಸುವುದರ ಜೊತೆಗೆ ಆಕ್ಷನ್‌ ಕಟ್‌ ಕೂಡ ಹೇಳುತ್ತಿದ್ದಾರೆ. ಇದೀಗ ಉಪೇಂದ್ರ 'ವ್ಯಾಲಂಟೈನ್ಸ್ ಡೇ' ಅಂದರೇ ಫೆಬ್ರವರಿ 14 ರಂದು  ಯುಐ ಸಿನಿಮಾದ  ಮೊದಲ ಹಾಡಿನ ಟೀಸರ್‌ ರಿಲೀಸ್‌ ಮಾಡಿದ್ದಾರೆ. ಅದುವೇ ಚೀಪ್‌ ಸಾಂಗ್. ಈ ಹಾಡಿನ ಸಣ್ಣ ಝಲಕ್ ಕೇಳಿದವರು ಉಪ್ಪಿ ಚಮಕ್ಕು, ಗಿಮಿಕ್ಕು ನೋಡಿ ಅಚ್ಚರಿ ಪಟ್ಟಿದ್ದಾರೆ. 

ಯುಐ ಚಿತ್ರದ ಮೊದಲ ಹಾಡು 'ಚೀಪ್.. ಚೀಪ್ ಎಲ್ಲಾ ಚೀಪ್ ಚೀಪ್' ಎಂದು ಶುರುವಾಗುತ್ತಿದ್ದು, ನಂತರ ನಂದು ತುಂಬಾ ದೊಡ್ಡದು ಅವನಿಗಿಂತ ನಿಂದು ಚಿಕ್ಕದು, ನಿಂದು ತುಂಬಾ ಚಿಕ್ಕದು, ಇವನಿಗಿಂತ ಅವಂದು ದೊಡ್ಡದು ಎಂದು ಸಾಂಗ್‌ ಮುಂದುವರೆಯುತ್ತದೆ. ಅಭಿಮಾನಿಗಳು ಉಪೇಂದ್ರ ಸಾಂಗ್‌ನಲ್ಲಿ ಬರೆದದಿರುವ ಆ ದೊಡ್ಡದು, ಚಿಕ್ಕದು ಏನು? ಎನ್ನುವುದರ ಬಗ್ಗೆ ಸಾಕಷ್ಟು ಕುತೂಹಲ ಮೂಡಿದ್ದು, ಅದರ ಅರ್ಥವೇನೆಂಬುದು ಪ್ರೇಕ್ಷಕರು ತೆರೆಯ ಮೇಲೆ ನೋಡಬೇಕಿದೆ. ಒಟ್‌ನಲ್ಲಿ ಉಪ್ಪಿ ಈ ಸಣ್ಣ ಸಾಂಗ್ ಝಲಕ್‌ನಿಂದಲೇ ಗೆದ್ದಿದ್ದು, ಇದರ ಕಂಪ್ಲಿಟ್ ಸಾಂಗ್ ಇದೇ ತಿಂಗಳು  26ರಂದು ರಿಲೀಸ್‌ ಆಗಲಿದೆ. 

ಇದನ್ನೂ ಓದಿ: Upendra UI Film Song: ಪ್ರೇಮಿಗಳ ದಿನಕ್ಕೆ ಹೊಸ ಸರ್ಪ್ರೈಸ್‌ ನೀಡಲಿದ್ದಾರೆ ರಿಯಲ್‌ ಸ್ಟಾರ್‌

ರಿಯಲ್‌ ಸ್ಟಾರ್‌ ಬಹಳ ವಿಭಿನ್ನ ಗೆಟಪ್‌ನಲ್ಲಿ ಸ್ಟೆಪ್‌ ಹಾಕಿದ್ದು, ಒಂದಷ್ಟು ಡ್ಯಾನ್ಸರ್ಸ್ ಉಪೇಂದ್ರಗೆ ಸಾಥ್ ಕೊಟ್ಟಿದ್ದಾರೆ. ಕೇವಲ ಎರಡು ಸಾಲುಗಳ ಚೀಪ್‌ ಸಾಂಗ್‌ ಪ್ರೋಮೋವನ್ನು ಕೇಳಿದ ಫ್ಯಾನ್ಸ್‌ ಉಪ್ಪ ಈಸ್‌ ಬ್ಯಾಕ್‌ ಎನ್ನುತ್ತಿದ್ದು, ಕಾಮೆಂಟ್‌ ಬಾಕ್ಸ್‌ನಲ್ಲಿ ಚಿಕ್ಕದೋ ದೊಡ್ಡದೋ ಸಾಂಗ್ ಮಾತ್ರ ಸೂಪರ್, ಕಂಪ್ಲೀಟ್ ಸಾಂಗ್‌ಗಾಗಿ ಕಾಯ್ತಿದ್ದೀವಿ ಎಂದು ಬರೆದಿದ್ದಾರೆ. ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಗಾಯಕರಾದ ವಿಜಯ್ ಪ್ರಕಾಶ್, ನಕಾಶ್ ಹಾಗೂ ದೀಪಕ್ ಬ್ಲೂ ಧ್ವನಿಯಾಗಿದ್ದಾರೆ.

ಸದ್ಯ ನಟ-ನಿರ್ದೇಶಕ ಉಪೇಂದ್ರ ತುಂಬಾ ಡಿಫ್‌ರೆಂಟ್ ಆಗಿ ಯೋಚಿಸುತ್ತಿದ್ದು, ತಮ್ಮ ಚಿತ್ರದ  ಹಾಡುಗಳಲ್ಲಿಯೂ ಸಹ ಇಂತಹದೊಂದು ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ರಿಯಲ್‌ ಸ್ಟಾರ್‌ ಒಂಬತ್ತು ವರ್ಷಗಳ ಬಳಿಕ ನಿರ್ದೇಶನ ಮತ್ತು ನಟನೆಯ ಮೂಲಕ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಮೂಡಿಸಿದ್ದಾರೆ. ಉಪೇಂದ್ರ ಇದು AI ಪ್ರಪಂಚ ಅಲ್ಲ, UI ಪ್ರಪಂಚ ಎಂದು ಹೇಳುತ್ತಿದ್ದು, ದೊಡ್ಡಮಟ್ಟದಲ್ಲಿ ಸಿನಿಮಾ ಮೇಕಿಂಗ್, ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ. ಈ ಚಿತ್ರದಲ್ಲಿ ಸಾಕಷ್ಟು ಗ್ರಾಫಿಕ್ಸ್ ವರ್ಕ್ ಇರುವುದರಿಂದ ಈ ಸಿನಿಮಾ ತೆರೆಗೆ ಬರಲುತಡವಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News