Tripti Dimri: ಖ್ಯಾತ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿರುವ ʼಅನಿಮಲ್‌ʼ ಬೋಲ್ಡ್‌ ಬ್ಯೂಟಿ..! ತೃಪ್ತಿ ಬಾಯ್‌ಫ್ರೆಂಡ್‌ ಯಾರು ಗೊತ್ತಾ?

Tripti Dimri Boy Friend: ಅನಿಮಲ್‌ನಲ್ಲಿ ಜೋಯಾ ಪಾತ್ರದ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದ ತೃಪ್ತಿ ಡಿಮ್ರಿ ಈಗ ನ್ಯಾಷನಲ್ ಕ್ರಶ್ ಆಗಿದ್ದಾರೆ. ರಣಬೀರ್ ಕಪೂರ್ ಜೊತೆ ಈ ಬ್ಯೂಟಿಯ ಕೆಮಿಸ್ಟ್ರಿ ತುಂಬಾ ಚರ್ಚೆಗೆ ಗ್ರಾಸವಾಗಿತ್ತು. ಈ ನಡುವೆ ನಟಿ ಡೇಟಿಂಗ್ ಸುದ್ದಿ ವೈರಲ್ ಆಗಿದೆ.  

Written by - Savita M B | Last Updated : Dec 18, 2023, 12:22 PM IST
  • ಅನಿಮಲ್ ಸಿನಿಮಾದ ರೊಮ್ಯಾಂಟಿಕ್ ಸೀನ್ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ ತೃಪ್ತಿ ಡಿಮ್ರಿ
  • ಚಿಕ್ಕ ಪಾತ್ರದಲ್ಲಿ ತೃಪ್ತಿ ಸಖತ್ ಹೈಲೈಟ್ ಆದ ಬೋಲ್ಡ್‌ ಬ್ಯೂಟಿ
  • ಈ ನಡುವೆ ನಟಿ ಡೇಟಿಂಗ್ ಸುದ್ದಿ ವೈರಲ್ ಆಗಿದೆ.
Tripti Dimri: ಖ್ಯಾತ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿರುವ ʼಅನಿಮಲ್‌ʼ ಬೋಲ್ಡ್‌ ಬ್ಯೂಟಿ..! ತೃಪ್ತಿ ಬಾಯ್‌ಫ್ರೆಂಡ್‌ ಯಾರು ಗೊತ್ತಾ? title=

Tripti Dimri: ಅನಿಮಲ್ ಸಿನಿಮಾದ ರೊಮ್ಯಾಂಟಿಕ್ ಸೀನ್ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ ತೃಪ್ತಿ ಡಿಮ್ರಿ... ಚಿಕ್ಕ ಪಾತ್ರದಲ್ಲಿ ತೃಪ್ತಿ ಸಖತ್ ಹೈಲೈಟ್ ಆದ ಬೋಲ್ಡ್‌ ಬ್ಯೂಟಿಯ ಲವ್ ಅಫೇರ್ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ... 

ತೃಪ್ತಿ ಡಿಮ್ರಿ ಈಗ ನಟಿ ಅನುಷ್ಕಾ ಶರ್ಮಾ ತನ್ನ ಸಹೋದರ ಕರ್ಣೇಶ್ ಶರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾಳೆ. ಕರ್ಣೇಶ್ 'ಬುಲ್ಬುಲ್' ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ತೃಪ್ತಿ ಕರ್ಣೇಶ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಷಯ ಹಾಟ್ ಟಾಪಿಕ್ ಆಗಿತ್ತು..

ಇದನ್ನೂ ಓದಿ-BBK10: ʼನಮಸ್ಕಾರ, ಬಿಗ್‌ಬಾಸ್‌ ನ್ಯೂಸ್‌ಗೆ ಸ್ವಾಗತ ಸುಸ್ವಾಗತʼ.. ದೊಡ್ಮನೆ ಈಗ ನ್ಯೂಸ್‌ ರೂಮ್!

ಇನ್ನು ಕರ್ನೇಶ್ ಶರ್ಮಾ ಮತ್ತು ತೃಪ್ತಿ ಹೆಚ್ಚಾಗಿ ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇದಲ್ಲದೇ ಅವರ ರೊಮ್ಯಾಂಟಿಕ್ ಫೋಟೋಗಳು ಜನರ ಗಮನ ಸೆಳೆಯುತ್ತಿವೆ. ಆದರೆ, ತೃಪ್ತಿ ಅಥವಾ ಕರ್ನೇಶ್ ತಮ್ಮ ಸಂಬಂಧದ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಮಾತನಾಡಿಲ್ಲ.. 

ಇದನ್ನೂ ಓದಿ-ವಿಚ್ಛೇದನ ವದಂತಿ ಮಧ್ಯೆಯೇ ಐಶ್ವರ್ಯಾ ತಾಯಿ ಜೊತೆ ಅಭಿಷೇಕ್ ನಡೆದುಕೊಂಡದ್ದು ಹೀಗೆ ! ಪತ್ನಿ ಮಗಳ ಬಗ್ಗೆಯೂ ಹೊರ ಬಿತ್ತು ಕೆಲ ಮಾತು

ಕೆಲ ತಿಂಗಳ ಹಿಂದೆ ಇವರಿಬ್ಬರ ಬ್ರೇಕಪ್ ಸುದ್ದಿ ಕೂಡ ವೈರಲ್ ಆಗಿತ್ತು. ಆದರೆ, ಬೇರ್ಪಡಲು ಕಾರಣಗಳನ್ನು ಬಹಿರಂಗಪಡಿಸಲಾಗಿಲ್ಲ. ಈಗ ಕರ್ನೇಶ್ ಜೊತೆಗಿನ ಬ್ರೇಕಪ್‌ ನಂತರ ತೃಪ್ತಿಯ ಹೆಸರು ಬೇರೆಯವರೊಂದಿಗೆ ತಳುಕು ಹಾಕಿಕೊಂಡಿದೆ. 

ಅವರೇ ಖ್ಯಾತ ಉದ್ಯಮಿ ಸ್ಯಾಮ್ ಮರ್ಚೆಂಟ್.. ಹೌದು ಇತ್ತೀಚೆಗೆ ತೃಪ್ತಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ಅಲ್ಲಿ ಇವರಿಬ್ಬರ ಫೋಟೋ ವೈರಲ್ ಆಗುತ್ತಿದ್ದಂತೆ ಇಬ್ಬರ ಡೇಟಿಂಗ್ ವದಂತಿಗಳು ಸುದ್ದಿಯಾಗಿದ್ದವು. ಸ್ಯಾಮ್ ಒಬ್ಬ ಉದ್ಯಮಿಯಾಗಿರುವುದರಿಂದ ನಟಿಯರು ಉದ್ಯಮಿಗಳನ್ನು ಮದುವೆಯಾದ ಉದಾಹರಣೆಗಳೂ ಸಾಕಷ್ಟಿವೆ ಎಂದು ನೆಟಿಜನ್‌ಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.. ಸ್ಯಾಮ್ ಮತ್ತು ತೃಪ್ತಿ ನಿಜವಾಗಿಯೂ ಡೇಟಿಂಗ್ ಮಾಡುತ್ತಿದ್ದಾರಾ ಅಥವಾ ಇದು ಕೇವಲ ವದಂತಿಯೇ ಎಂದು ತಿಳಿಯಲು ಅಭಿಮಾನಿಗಳು ಸಹ ಕುತೂಹಲರಾಗಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News