ಟಿಪಿಎಲ್ ಜೆರ್ಸಿ-ಟ್ರೋಫಿ ಬಿಡುಗಡೆ: ಇನ್ಮುಂದೆ ನಡೆಯಲಿದೆ ಕಿರುತೆರೆ ಕಲಾವಿದರ ಕ್ರಿಕೆಟ್ ಲೀಗ್

ಆಯೋಜಕರಾದ ಬಿ.ಆರ್.ಸುನಿಲ್ ಕುಮಾರ್ ಮಾತನಾಡಿ, ಮೊದಲ ಬಾರಿಗೆ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಯುತ್ತಿದ್ದು, ಐಪಿಎಲ್ ರೇಂಜ್ ಗೆ ಮಾಡಬೇಕೆಂಬ ಕನಸು ಇತ್ತು. ಇದು ಮೊದಲ ಹೆಜ್ಜೆಯಷ್ಟೇ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡದಾಗಿ ಮಾಡುವ ಕನಸಿದೆ ಎಂದರು.

Written by - YASHODHA POOJARI | Edited by - Bhavishya Shetty | Last Updated : Aug 17, 2022, 01:25 PM IST
    • ಮೊದಲ ಬಾರಿಗೆ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಯುತ್ತಿದೆ
    • ಎನ್ 1 ಕ್ರಿಕೆಟ್ ಅಕಾಡೆಮಿ ವತಿಯಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್ ಆಯೋಜನೆ
    • ಕಿರುತೆರೆ ಕಲಾವಿದರು ಹಾಗೂ ತಂತ್ರಜ್ಞರು ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗಿಯಾಗಲಿದ್ದಾರೆ
ಟಿಪಿಎಲ್ ಜೆರ್ಸಿ-ಟ್ರೋಫಿ ಬಿಡುಗಡೆ: ಇನ್ಮುಂದೆ ನಡೆಯಲಿದೆ ಕಿರುತೆರೆ ಕಲಾವಿದರ ಕ್ರಿಕೆಟ್ ಲೀಗ್ title=
Television Premier League

ಎನ್ 1 ಕ್ರಿಕೆಟ್ ಅಕಾಡೆಮಿ ವತಿಯಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್-ಟಿಪಿಎಲ್ ಶುರುವಾಗ್ತಿದ್ದು, ಇದೇ ತಿಂಗಳ 18, 19 ಹಾಗೂ 20 ಈ ಮೂರು ದಿನಗಳ ಕಾಲ ಪಂದ್ಯಾವಳಿ ನಡೆಯುತ್ತಿದೆ. ಈ ಹಿನ್ನೆಲೆ ನಿನ್ನೆ ಖಾಸಗಿ ಹೋಟೆಲ್ ವೊಂದರಲ್ಲಿ ಜೆರ್ಸಿ ಹಾಗೂ ಟ್ರೋಫಿ ಬಿಡುಗಡೆ ಮಾಡಲಾಯಿತು. ಕಿರುತೆರೆ ಕಲಾವಿದರು ಹಾಗೂ ತಂತ್ರಜ್ಞರು ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗಿಯಾಗಲಿದ್ದಾರೆ. 

ಇದನ್ನೂ ಓದಿ: ರಕ್ಕಮ್ಮನಿಗೆ ಸಂಕಷ್ಟ: ಜಾಕ್ವೆಲಿನ್ ವಿರುದ್ಧ ಚಾರ್ಜ್ ಶೀಟ್ ಫೈಲ್, ಬಂಧನದ ಸುಳಿಯಲ್ಲಿ ನಟಿ?

ಆಯೋಜಕರಾದ ಬಿ.ಆರ್.ಸುನಿಲ್ ಕುಮಾರ್ ಮಾತನಾಡಿ, ಮೊದಲ ಬಾರಿಗೆ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಯುತ್ತಿದ್ದು, ಐಪಿಎಲ್ ರೇಂಜ್ ಗೆ ಮಾಡಬೇಕೆಂಬ ಕನಸು ಇತ್ತು. ಇದು ಮೊದಲ ಹೆಜ್ಜೆಯಷ್ಟೇ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡದಾಗಿ ಮಾಡುವ ಕನಸಿದೆ ಎಂದರು.

ಬೆಂಗಳೂರಿನ ಪೆಸೆಟ್ ಕಾಲೇಜು ಗ್ರೌಂಡ್ ನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ, ದಿ ಬುಲ್ ಸ್ಕ್ವಾಡ್, ಭಜರಂಗಿ ಲಯನ್ಸ್, ಎಂಜೆಲ್ XI, ವಿನ್ ಟೈಮ್ ರಾಕರ್ಸ್, ಅಶ್ವ ಸೂರ್ಯ ರೈಡರ್ಸ್, ಸ್ಯಾಂಡಲ್ ವುಡ್ ಕಿಂಗ್ಸ್ ಎಂಬ ಆರು ತಂಡಗಳು ಭಾಗಿಯಾಗಲಿದ್ದು, ಒಟ್ಟು 102 ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಥ್ ಕೊಡಲಿದ್ದಾರೆ. ಈ ಆರು ತಂಡಗಳಿಗೂ ಅಂಬಾಸಿಡರ್ ಹಾಗೂ ಓನರ್ ಗಳಿರಲಿದ್ದಾರೆ. 

ಇದನ್ನೂ ಓದಿ: ಇಂಡಿಯಾ ಪೋಸ್ಟ್ನಲ್ಲಿ ಬಂಪರ್ ಉದ್ಯೋಗಾವಕಾಶ

ದಿ ಬುಲ್ ಸ್ಕ್ವಾಡ್ ಟೀಂಗೆ ಶರತ್ ಪದ್ಮನಾಭ್ ನಾಯಕನಾಗಿದ್ದು, ಈ ತಂಡದ ಒಡೆತನವನ್ನು ಮೋನಿಶ್ ಹೊತ್ತುಕೊಂಡಿದ್ದಾರೆ. ಭಜರಂಗಿ ಲಯನ್ಸ್ ಗೆ ರಂಜಿತ್ ಕುಮಾರ್ ನಾಯಕ- ಮಹೇಶ್ ಗೌಡ ಓನರ್, ಎಂಜಲ್ XI ತಂಡಕ್ಕೆ ಹರ್ಷ ಸಿಎಂ ಗೌಡ ನಾಯಕ-ಜಗದೀಶ್ ಬಾಬು ಆರ್ ಓನರ್, ವಿನ್ ಟೈಮ್ ರಾಕರ್ಸ್ ತಂಡಕ್ಕೆ ಅರ್ಜುನ್ ಯೋಗಿ ನಾಯಕ-ಅನಿಲ್ ಬಿಆರ್ ಮತ್ತು ದೇವನಾಥ್ ಓನರ್, ಅಶ್ವಸೂರ್ಯ ರೈಡರ್ಸ್ ತಂಡಕ್ಕೆ ಮಂಜು ಪಾವಗಡ ನಾಯಕ-ರಂಜಿತ್ ಕುಮಾರ್ ಓನರ್, ಸ್ಯಾಂಡಲ್ ವುಡ್ ಕಿಂಗ್ಸ್ ತಂಡಕ್ಕೆ ವಿವಾನ್ ನಾಯಕ-ದೀಪಶ್ರೀ ಮಿಸ್ಟ್ರೀ ಒಡೆತನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News