Toxic: ಟಾಕ್ಸಿಕ್‌ ಚಿತ್ರದ ಅಪ್‌ಡೇಟ್‌ ಕೊಟ್ರು ರಾಕಿಂಗ್‌ ಸ್ಟಾರ್!

Toxic Update: ಚಂದನವನದ ನಟ ಯಶ್‌ ಟಾಕ್ಸಿಕ್‌ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಇತ್ತೀಚೆಗೆ ಒಂದು ಜಿಮ್‌ ಓಪನಿಂಗ್‌ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ತಮ್ಮ ಅಭಿಮಾನಿಗಳಿಗಾಗಿ ಟಾಕ್ಸಿಕ್‌ ಚಿತ್ರದ ಅಪ್‌ಡೇಟ್‌ ನೀಡಿದ್ದಾರೆ. ಇಲ್ಲಿದೆ ಇನ್ನಷ್ಟು ಇಂಟ್ರಸ್ಟೆಂಗ್‌ ಮಾಹಿತಿ.

Written by - Zee Kannada News Desk | Last Updated : Feb 15, 2024, 10:03 AM IST
  • ರಾಕಿ ಭಾಯ್ ಪ್ರೇಮಿಗಳ ದಿನ ಫೆಬ್ರವರಿ 14 ರಂದು ಸಂಜೆ ಜಿಮ್ ಓಪನಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಟಾಕ್ಸಿಕ್‌ ಬಗ್ಗೆ ಮಾತನಾಡಿದ್ದಾರೆ.
  • ಈಗಾಗಲೇ ಟಾಕ್ಸಿಕ್ ಸಿನಿಮಾದ ಟೈಟಲ್ ಬಿಟ್ಟರೇ ಬೇರೆ ಯಾವ ಅಪ್‌ಡೇಟ್‌ ರಿವೀಲ್‌ ಆಗಿಲ್ಲ. ಇಲ್ಲಿಯವರೆಗೂ ಚಿತ್ರದ ಡೈರೆಕ್ಟರ್ ಗೀತು ಮೋಹನ್ ದಾಸ್ ಕೂಡ ಏನು ಹೇಳಿಲ್ಲ.
  • ‘ಕಿಟ್ಟೀಸ್ ಮಸಲ್ ಪ್ಲಾನೆಟ್’ ಓಪನಿಂಗ್‌ಗೆ ಯಶ್‌ ಜೊತೆಗೆ ನೆನಪಿರಲಿ ಪ್ರೇಮ್, ಅಜಯ್ ರಾವ್ ಕೂಡ ಆಗಮಿಸಿದ್ದರು.
Toxic: ಟಾಕ್ಸಿಕ್‌ ಚಿತ್ರದ ಅಪ್‌ಡೇಟ್‌ ಕೊಟ್ರು ರಾಕಿಂಗ್‌ ಸ್ಟಾರ್! title=

Toxic Update By Yash: ಸ್ಯಾಂಡಲ್‌ವುಡ್‌ ನಟ ರಾಕಿಂಗ್ ಸ್ಟಾರ್ ಯಶ್ ಸದ್ಯ ಟಾಕ್ಸಿಕ್ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಇನ್ನೊಂದೆಡೆ ಸಿನಿಮಾದ ಬಗ್ಗೆ ಇದುವರೆಗೂ ಯಾವುದೇ ಹೊಸ ಮಾಹಿತಿ ಸಿಕ್ಕಿಲ್ಲ. ಆದರಿಂದ ನಟ ಯಶ್‌ ಇತ್ತೀಚೆಗೆ ಎಲ್ಲಿಯೂ ಕಾಣಿಸಿಕೊಳ್ಳದವರು, ನಿನ್ನೆ ಸಡನ್‌ ಆಗಿ ಅಭಿಮಾನಿಗಳ ಕಣ್ಣಿಗೆ ಬಿದ್ದಿದ್ದಾರೆ. ರಾಕಿ ಭಾಯ್ ಪ್ರೇಮಿಗಳ ದಿನ ಫೆಬ್ರವರಿ 14 ರಂದು ಸಂಜೆ ಜಿಮ್ ಓಪನಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಟಾಕ್ಸಿಕ್‌ ಬಗ್ಗೆ ಮಾತನಾಡಿದ್ದಾರೆ. 

ನಟ ಯಶ್‌ ನಿನ್ನೆ ಪಾನಿಪುರಿ ಕಿಟ್ಟಿ ಜಿಮ್ ‘ಕಿಟ್ಟೀಸ್ ಮಸಲ್ ಪ್ಲಾನೆಟ್’ ಓಪನಿಂಗ್‌ ಸೆರೆಮನಿಯಲ್ಲಿ ಪತ್ರಕರ್ತ ಪ್ರಶ್ನೆಗೆ ಉತ್ತರಿಸಿದ್ದಾರೆ. ಯಶ್‌ ಚಿತ್ರದ ಬಗ್ಗೆ ಇಂಟ್ರಸ್ಟಿಂಗ್‌ ಮಾಹಿತಿ ಹಂಚಿಕೊಂಡಿದ್ದು, ಇದರ ಜೊತೆಗೆ ಎಲ್ಲೋ ಒಂದು ಕಡೆಗೆ ಇನ್ನು  ಟಾಕ್ಸಿಕ್‌ ಚಿತ್ರೀಕರಣ ಪ್ರಾರಂಭವಾಗಿಲ್ಲವೇನೋ ಎಂಬ ಪ್ರಶ್ನೆಯೂ ಹುಟ್ಟುಕೊಂಡಿದೆ.  ಈಗಾಗಲೇ ಟಾಕ್ಸಿಕ್ ಸಿನಿಮಾದ  ಟೈಟಲ್ ಬಿಟ್ಟರೇ ಬೇರೆ ಯಾವ ಅಪ್‌ಡೇಟ್‌ ರಿವೀಲ್‌ ಆಗಿಲ್ಲ. ಇಲ್ಲಿಯವರೆಗೂ ಚಿತ್ರದ ಡೈರೆಕ್ಟರ್ ಗೀತು ಮೋಹನ್ ದಾಸ್ ಕೂಡ ಏನು ಹೇಳಿಲ್ಲ. 

ಇದನ್ನೂ ಓದಿ: ರಾಮಚರಣ್‌ "RC16" ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಪಾತ್ರ ಲೀಕ್.. ಯಾರೂ ಊಹಿಸದ ಗೆಟಪ್‌ನಲ್ಲಿ ಹ್ಯಾಟ್ರಿಕ್‌ ಹಿರೋ!

ಪ್ಯಾನ್‌ ಇಂಡಿಯಾ ಸ್ಟಾರ್‌ ಯಶ್‌ ನಿನ್ನೆ ಪರ್ತಕರ್ತರ ಪ್ರಶ್ನೆಗೆ "ಆದಷ್ಟು ಬೇಗ ಶೂಟಿಂಗ್ ಶುರುವಾಗಲಿದೆ. ಪ್ರೀ-ಪ್ರೊಡಕ್ಷನ್ಸ್ ಕೆಲಸಗಳು ಚಾಲ್ತಿಯಲ್ಲಿವೆ. ವಾರಕ್ಕೊಂದು ನ್ಯೂಸ್‌ಗಳು ಬರ್ತಿವೆ. ನಾನಾಗಿಯೇ ಹೇಳುವವರೆಗೂ ಕಾಯಿರಿ. ಶೂಟಿಂಗ್ ಇಲ್ಲ ಎಂದು ನಾನು ಸುಮ್ಮನೇ ಕೂತಿಲ್ಲ. ನಾನು ತುಂಬಾ ಬ್ಯುಸಿ ಇದ್ದೀನಿ. ಸಾಕಷ್ಟು ತಯಾರಿಗಳು ನಡೆಯುತ್ತಿವೆ" ಎಂದು ಮಾತನಾಡಿದ್ದಾರೆ. ಈ ನಟನ ಮಾತು ಕೇಳಿದ ಬಳಿಕ ಇನ್ನೂ ಟಾಕ್ಸಿಕ್‌ ಶೂಟಿಂಗ್‌ ಶುರುವಾಗಿಲ್ಲ ಎಂದು ತಿಳಿದುಬಂದಿದೆ.

ಟಾಕ್ಸಿಕ್‌ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಹಂಚಿಕೊಳ್ಳುತ್ತಾ ಯಶ್‌, " ಟಾಕ್ಸಿಕ್‌ ಸಿನಿಮಾಗೆ ಸಂಬಂಧಿಸಿದಂತೆ ದೊಡ್ಡ ಪ್ಲಾನ್‌ಗಳೇ ಆಗುತ್ತಿದೆ. ದೊಡ್ಡಮಟ್ಟದಲ್ಲಿಯೇ ಟಾಕ್ಸಿಕ್ ಸಿನಿಮಾ ತಯಾರಾಗುತ್ತದೆ. ಅತಿ ದೊಡ್ಡಮಟ್ಟದಲ್ಲಿಯೇ ಟಾಕ್ಸಿಕ್ ಪ್ಲಾನಿಂಗ್ ಆಗುತ್ತಿದೆ. ಟಾಕ್ಸಿಕ್ ಸಿನಿಮಾವನ್ನ ಪಕ್ಕಾ ಪ್ಲಾನ್ ಅಲ್ಲಿಯೇ ಮಾಡ್ತಾ ಇದ್ದೇವೆ. ಯಾವುದೇ ಕಾಂಪ್ರಮೈಸ್ ಇಲ್ಲದೇ ಸಿನಿಮಾ ಮಾಡ್ತಿದ್ದೇವೆ" ಎಂದು ಹೇಳಿಕೊಂಡಿದ್ದಾರೆ. ಇನ್ನೂ ‘ಕಿಟ್ಟೀಸ್ ಮಸಲ್ ಪ್ಲಾನೆಟ್’ ಓಪನಿಂಗ್‌ಗೆ ಯಶ್‌ ಜೊತೆಗೆ ನೆನಪಿರಲಿ ಪ್ರೇಮ್, ಅಜಯ್ ರಾವ್ ಕೂಡ ಆಗಮಿಸಿದ್ದರು.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News