ತೋತಾಪುರಿ ಒಂದು ತಿಂದಾಯ್ತು...! ಎರಡನೇ ತೋತಾಪುರಿ ಸವಿಯಲು ನೀವು ರೆಡಿನಾ..?

Totapuri part 2 Cinema Update: ‘ತೋತಾಪುರಿ-2’  ಸಿನಿಮಾದ ಪೋಸ್ಟರ್‌’ಗಳು ಹಾಗೂ ಹಾಡೊಂದು ಸದ್ದು ಮಾಡಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿವೆ. ಡಾಲಿ ಧನಂಜಯ ಪ್ರೀತಿ ಪಾರ್ಟ್ 2ನಲ್ಲಿ ರಿವೀಲ್ ಆಗುತ್ತೆ ಅನ್ನೋ ಮ್ಯಾಟರ್ ಸಿನಿಮಾ ತಂಡದಿಂದ ಸಿಕ್ಕಿದೆ.

Written by - YASHODHA POOJARI | Edited by - Bhavishya Shetty | Last Updated : Aug 4, 2023, 01:47 PM IST
    • ತೋತಾಪುರಿ 2 ಸಿನಿಮಾ ರಿಲೀಸ್ ಗೆ ಸಜ್ಜಾಗಿ ನಿಂತಿದೆ.
    • ತೋತಾಪುರಿ ಪಾರ್ಟ್ 2 ನಿಮಗೆ ಬೇರೆಯದ್ದೇ ಲೋಕವನ್ನ ತೋರಿಸುತ್ತೆ
    • ಡಾಲಿ ಧನಂಜಯ ಪ್ರೀತಿ ಪಾರ್ಟ್ 2ನಲ್ಲಿ ರಿವೀಲ್ ಆಗುತ್ತೆ ಅನ್ನೋ ಮ್ಯಾಟರ್ ಸಿನಿಮಾ ತಂಡದಿಂದ ಸಿಕ್ಕಿದೆ.
ತೋತಾಪುರಿ ಒಂದು ತಿಂದಾಯ್ತು...! ಎರಡನೇ ತೋತಾಪುರಿ ಸವಿಯಲು ನೀವು ರೆಡಿನಾ..? title=
Totapuri part 2

Sandalwood New Cinema update: ತೋತಾಪುರಿ… ನವರಸನಾಯಕ ಜಗ್ಗೇಶ್ ಮತ್ತು ಅದಿತಿ ಪ್ರಭುದೇವ್ ನಟನೆಯ ಸಿನಿಮಾ. ಕಳೆದ ವರ್ಷ ತೆರೆಕಂಡು  ಸುದ್ದಿಯಾಗಿತ್ತು. ಆದರೆ ಎಲ್ಲೋ ಒಂದು ಕಡೆ ನಿರ್ಮಾಪಕರಿಗೆ ಜೇಬು ತುಂಬಲಿಲ್ಲ. ಆದರೆ ಇದೀಗ ಸಿಕ್ಕಿರೋ ಸಿಹಿಸುದ್ದಿ ಏನಪ್ಪಾ ಅಂದ್ರೆ ತೋತಾಪುರಿ 2 ಸಿನಿಮಾ ರಿಲೀಸ್ ಗೆ ಸಜ್ಜಾಗಿ ನಿಂತಿದೆ. ತೋತಾಪುರಿ ಪಾರ್ಟ್ 2 ನಿಮಗೆ ಬೇರೆಯದ್ದೇ ಲೋಕವನ್ನ ತೋರಿಸುತ್ತೆ. ಹಲವು ಅದ್ಭುತ ವಿಚಾರಗಳಿಗೆ ತೋತಾಪುರಿ ಸಾಕ್ಷಿಯಾಗುತ್ತೆ ಅನ್ನೋ ಸುದ್ದಿ ರಿಲೀಸ್ ಗೂ ಮುನ್ನ ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಡಾಲಿ ಧನಂಜಯ ಪ್ರೀತಿ ಪಾರ್ಟ್ 2ನಲ್ಲಿ ರಿವೀಲ್ ಆಗುತ್ತೆ ಅನ್ನೋ ಮ್ಯಾಟರ್ ಸಿನಿಮಾ ತಂಡದಿಂದ ಸಿಕ್ಕಿದೆ.

ಇದನ್ನೂ ಓದಿ: ನನಗೆ ಈಗಾಗಲೇ ಮದುವೆಯಾಗಿದೆ, ಮನಸಲ್ಲಿರೋದು ಅವನೊಬ್ಬನೇ : ರಶ್ಮಿಕಾ ಮಂದಣ್ಣ

 ‘ತೋತಾಪುರಿ-2’  ಸಿನಿಮಾದ ಪೋಸ್ಟರ್‌’ಗಳು ಹಾಗೂ ಹಾಡೊಂದು ಸದ್ದು ಮಾಡಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿವೆ. ಜಗ್ಗೇಶ್-ಡಾಲಿ ಧನಂಜಯ್ ಕಾಂಬಿನೇಷನ್ ಇದೇ ಮೊದಲ ಬಾರಿಗೆ ಎಂಬುದು ಒಂದೆಡೆಯಾದರೆ, ಎರಡು ಭಾಗಗಳಲ್ಲಿ ಮೂಡಿಬಂದಿರುವ ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ಕಾಣಿಸಿಕೊಂಡಿರೋದು ಮತ್ತೊಂದು ವಿಶೇಷ.

ಡಾಲಿ ಧನಂಜಯ್ ಈವರೆಗೂ ವಿಭಿನ್ನ ರೀತಿಯ ಪಾತ್ರಗಳ ಮೂಲಕ ಮಿಂಚು ಹರಿಸಿದ್ದಾರೆ. ಅವರು ನಟಿಸಿರುವ ಪಾತ್ರಗಳಲ್ಲಿ ನಾಯಕ-ಖಳನಾಯಕನಾಗಿ ಅಬ್ಬರಿಸಿದ್ದಾರೆ. ಇದೀಗ ‘ತೋತಾಪುರಿ-2’ ಸಿನಿಮಾದ ಮೂಲಕ ಮತ್ತಷ್ಟು ಸೌಂಡು ಮಾಡಲು ಸಜ್ಜಾಗಿದ್ದಾರೆ.

ನಾರಾಯಣ್ ಪಿಳ್ಳೈ ಎಂಬ ಪಾತ್ರ ನಿರ್ವಹಿಸುತ್ತಿರುವ ಡಾಲಿ, ಬೃಹತ್ ಉದ್ಯಮಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಲೈಫ್‌ಸ್ಟೈಲ್, ಲವ್‌ ಸ್ಟೋರಿ ಸೇರಿದಂತೆ ಇನ್ನಿತರ ವಿಷಯಗಳನ್ನು ‘ತೋತಾಪುರಿ-2’ರಲ್ಲಿ ತೆರೆದಿಡುವ ಪ್ರಯತ್ನವಾಗಿದೆಯಂತೆ.

ಇದನ್ನೂ ಓದಿ: NRI news: ಜಗತ್ತಿನ 6 ಗಲ್ಫ್ ರಾಷ್ಟ್ರಗಳಲ್ಲಿ 88.8 ಲಕ್ಷ ಭಾರತೀಯರೇ… ಅದರಲ್ಲೂ ಹೆಚ್ಚು ವಲಸಿಗರಿರೋದು ಈ ದೇಶದಲ್ಲಿ!

ಡಾಲಿ ಜೋಡಿಯಾಗಿ ಸುಮನ್ ರಂಗನಾಥ್ ನಟಿಸಿದ್ದಾರೆ. ಹಾಗೆಯೇ ಈ ಚಿತ್ರದಲ್ಲಿ ಜಗ್ಗೇಶ್, ಅದಿತಿ ಪ್ರಭುದೇವ, ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಸೇರಿದಂತೆ ಬೃಹತ್ ತಾರಾಗಣವೇ ಇದೆ. ವಿಜಯಪ್ರಸಾದ್ ನಿರ್ದೇಶನವಿರುವ ಈ ಚಿತ್ರವನ್ನು ಕೆ.ಎ.ಸುರೇಶ್ ನಿರ್ಮಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News