Prabhas: ಟಾಲಿವುಡ್‌ ಯಂಗ್‌ ರೆಬಲ್‌ ಸ್ಟಾರ್‌ಗೆ ಬಂದ ಮದುವೆ ಪ್ರಪೋಸಲ್‌ಗಳು ಎಷ್ಟು ಗೊತ್ತೇ?

Prabhas Proposals: ಟಾಲಿವುಡ್‌ ಯಂಗ್‌ ರೆಬಲ್‌ ಸ್ಟಾರ್‌ ನಟ ಪ್ರಭಾಸ್‌ ಈಗಾಗಾಲೇ 40 ದಾಟಿದರೂ ಮದುವೆ ಆಗಿಲ್ಲ. ಇದೀಗ ಸೋಶಿಯಲ್‌ ಮಡಿಯಾದಲ್ಲಿ ಈ ನಟನಿಗೆ ಇದುವರೆಗೂ ಎಷ್ಟು ಪ್ರಪೋಸಲ್‌ಗಳು ಬಂದಿವೆ ಅನ್ನೊದರ ಬಗ್ಗೆ ಚರ್ಚೆಯಾಗುತ್ತಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Apr 2, 2024, 10:22 AM IST
  • ಸದ್ಯ ಪ್ರಭಾಸ್‌ ಫ್ಯಾನ್ಸ್‌ ಈ ನಟನ ಸಿನಿಮಾಗಳ ಬಗ್ಗೆ ತೆಲೆಕೆಡಿಸಿಕೊಳ್ಳುವುದನ್ನು ಬಟ್ಟಿದ್ದಾರೆ. ಇದೀಗ ತಮ್ಮ ಫೇವರೇಟ್‌ ನಟನ ಮದುವೆ ಯಾವಾಗ ಅನ್ನೋದರ ಬಗೆ ಚಿಂತಿಸುತ್ತಿದ್ದಾರೆ.
  • ನಟ ಪ್ರಭಾಸ್‌ ಒಳ್ಳೆ ಹೈಟ್‌, ಒಳ್ಳೆಯ ಪರ್ಸನಾಲಿಟಿ, ಸ್ಟಾರ್‌ಡಮ್ ಎಲ್ಲವೂ ಇದ್ದು, ಈತನನ್ನು ಮದುವೆಯಾಗಲು ಹುಡುಗಿಯರು ಕ್ಯೂನಲ್ಲಿ ನಿಂತಿದ್ದಾರೆ.
  • ಕಳೆದ ವರ್ಷವಷ್ಟೇ ಪ್ರಭಾಸ್ ಅಜ್ಜಿ ಈ ವರ್ಷ ಪ್ರಭಾಸ್ ಮದುವೆ ಆಗುತ್ತಾರೆ ಎಂಬ ಹೇಳಿಕೆ ನೀಡಿದ್ದರು. ಅದರಿಂದ ಈ ನಟನ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.
Prabhas: ಟಾಲಿವುಡ್‌ ಯಂಗ್‌ ರೆಬಲ್‌ ಸ್ಟಾರ್‌ಗೆ ಬಂದ ಮದುವೆ ಪ್ರಪೋಸಲ್‌ಗಳು ಎಷ್ಟು ಗೊತ್ತೇ? title=

Prabhas Marriage Proposals: ಟಾಲಿವುಡ್‌ ಡಾರ್ಲಿಂಗ್‌ ಪ್ರಭಾಸ್‌ ಬಾಹುಬಲಿ ಸಿನಿಮಾದ ನಂತರ ಸಾಲು ಸಾಲು ಸೋಲು ಕಂಡ ನಟ, ಕಳೆದ ವರ್ಷ ತೆರೆಕಂಡ ಸಲಾರ್‌ ಚಿತ್ರದ ಮೂಲಕ ಮತ್ತೆ ಗೆಲುವಿನ ಮೆಟ್ಟಿಲು ಏರಿದ್ದಾರೆ. ಸದ್ಯ ಪ್ರಭಾಸ್‌ ಫ್ಯಾನ್ಸ್‌ ಈ ನಟನ ಸಿನಿಮಾಗಳ ಬಗ್ಗೆ ತೆಲೆಕೆಡಿಸಿಕೊಳ್ಳುವುದನ್ನು ಬಟ್ಟಿದ್ದಾರೆ. ಇದೀಗ ತಮ್ಮ ಫೇವರೇಟ್‌ ನಟನ ಮದುವೆ ಯಾವಾಗ ಅನ್ನೋದರ ಬಗೆ ಚಿಂತಿಸುತ್ತಿದ್ದಾರೆ.

ಹೌದು.. ಪ್ರಭಾಸ್‌ ಅಭಿಮಾನಿಗಳು ತಮ್ಮನೆಚ್ಚಿನ ಸ್ಟಾರ್‌ ಫ್ಯಾಮಿಲಿ ಮ್ಯಾನ್ ಆಗ್ಬೇಕು ಎಂಬ ಕನಸನ್ನು ಹೊತ್ತಿದ್ದು, ಇದು ಯಾವಾಗ ಈಡೇರುತ್ತೇ ಅನ್ನೋದು ಮಾತ್ರ ಗೊತ್ತಿಲ್ಲ. ನಟ ಪ್ರಭಾಸ್‌ ಒಳ್ಳೆ ಹೈಟ್‌, ಒಳ್ಳೆಯ ಪರ್ಸನಾಲಿಟಿ, ಸ್ಟಾರ್‌ಡಮ್ ಎಲ್ಲವೂ ಇದ್ದು, ಈತನನ್ನು ಮದುವೆಯಾಗಲು ಹುಡುಗಿಯರು ಕ್ಯೂನಲ್ಲಿ ನಿಂತಿದ್ದಾರೆ.ಆದರೆ, ಪ್ರಭಾಸ್ ಯಾಕೋ ಮನಸ್ಸು ಮಾಡುತ್ತಿಲ್ಲ ಅಷ್ಟೇ. ಇದೀಗ ಸೋಶಿಯಲ್‌ ಮಿಡಿಯಾದಲ್ಲಿ ಈ ನಟನಿಗೆ ಇಲ್ಲಿಯವರೆಗೂ ಬಂದಿರೋ ಪ್ರಪೋಸಲ್‌ಗಳ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: ಜೂ.ಎನ್‌ಟಿಆರ್‌ ಪತ್ನಿ ಯಾರು ಗೊತ್ತೇ... ಮುದ್ದಿನ ಮಡದಿಯನ್ನು ತಾರಕ್‌ ಏನೆಂದು ಕರೆಯುತ್ತಾರೆ ನೋಡಿ!

ಯಂಗ್‌ ರೆಬಲ್‌ ಸ್ಟಾರ್‌ 'ಬಾಹುಬಲಿ' ಚಿತ್ರ ಬೆಳ್ಳಿತೆರೆಯ ಮೇಲೆ ರಾರಾಜಿಸಿದ ನಂತರ ಈತನ ಮದುವೆ ನೋಡುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಕಳೆದ ವರ್ಷವಷ್ಟೇ ಪ್ರಭಾಸ್ ಅಜ್ಜಿ ಈ ವರ್ಷ ಪ್ರಭಾಸ್ ಮದುವೆ ಆಗುತ್ತಾರೆ ಎಂಬ ಹೇಳಿಕೆ ನೀಡಿದ್ದರು. ಅದರಿಂದ ಈ ನಟನ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಇಲ್ಲಿಯವರೆಗೂ ಪ್ರಭಾಸ್‌  ಮದುವೆ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

ನಟ ಪ್ರಭಾಸ್‌ಗೆ ಈಗಾಗಲೇ  44 ವರ್ಷ ವಯಸ್ಸಾಗಿದೆ. ಇದುವರೆಗೂ ಈತನಿಗೆ ಸುಮಾರು 5000ಕ್ಕೂ ಅಧಿಕ ಪ್ರಪೋಸಲ್‌ಗಳು ಬಂದಿವೆ ಅಂತೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಡಾರ್ಲಿಂಗ್ ಫ್ಯಾನ್ಸ್‌ಗೆ ಖುಷಿಯನ್ನು ತಂದಿದೆ. ಆದರೆ ಈ ವಿಷಯದ ಬಗ್ಗೆ ಪ್ರಭಾಸ್‌ ಎಲ್ಲಿಯೂ ಮಾತನಾಡಿಲ್ಲ. ಕೆಲವು ದಿನಗಳ ಹಿಂದೆಯೂ ಕೂಡ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ   ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿದ್ರು, ಇವರೆಬ್ಬರು ಇದನ್ನ ಪಕ್ಕಕ್ಕೆ ಇಟ್ಟರು. ಇದೆಲ್ಲಾ ನೋಡ್ತಾಯಿದ್ರೆ ಪ್ರಭಾಸ್ ಈ ವರ್ಷವೂ ಮದುವೆಯಾಗುವ ಯಾವ ಲಕ್ಷಣವು ಇಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

  

 

 

Trending News