ಇಂದು ಭಾರತದ ಅತಿ ದೊಡ್ಡ ಡಿಜಿಟಲ್ ಎಂಟರ್ಟೈನ್ಮೆಂಟ್ ವೇದಿಕೆ ಝೀ 5ಗೆ ಚಾಲನೆ

    

Last Updated : Feb 14, 2018, 08:04 PM IST
ಇಂದು ಭಾರತದ ಅತಿ ದೊಡ್ಡ ಡಿಜಿಟಲ್ ಎಂಟರ್ಟೈನ್ಮೆಂಟ್ ವೇದಿಕೆ ಝೀ 5ಗೆ ಚಾಲನೆ  title=

ನವದೆಹಲಿ: ಭಾರತದ ಅತಿ ದೊಡ್ಡ ಮನರಂಜನಾ ವೇದಿಕೆಯಾದ ಝೀ 5 ಗೆ ಕಂಪನಿಯ ಸಿಇಒ ಅಮಿತ್ ಗೋಯೆಂಕಾ ಬುಧವಾರದಂದು ಚಾಲನೆ ನೀಡಿದ್ದಾರೆ. 

ಫೆಬ್ರವರಿ 14, 2018 ರಿಂದ ಚಾಲನೆಗೊಂಡಿರುವ  ಝೀ 5ಯು ಮುಂದೆ ಜಾಗತಿಕ ಮಾಧ್ಯಮ ಮತ್ತು ಎಂಟರ್ಟೈನ್ಮೆಂಟ್ ನ ಪ್ರಮುಖ ಡಿಜಿಟಲ್ ತಾಣವಾಗಲಿದೆ. ಈ ವೇದಿಕೆಯ ಮೂಲಕ ಅದು ನವ ಭಾರತದ ಮನರಂಜನಾ ಬೇಡಿಕೆಗಳನ್ನು ತಲುಪಲಿದೆ ಎಂದು ಹೇಳಲಾಗಿದೆ. ಝೀ 5 ಪ್ರಮುಖವಾಗಿ ಎಲ್ಲ ಭಾಷೆ ಮತ್ತು ಗಡಿಗಳನ್ನು ಮೀರಿದ ಮನರಂಜನೆ ಒದಗಿಸುವ ವೇದಿಕೆಯಾಗಲಿದೆ ಎಂದು ಅಮಿತ್ ಗೊಯೆಂಕಾ ತಿಳಿಸಿದರು.

ಝೀ 5 ಪ್ರಮುಖವಾಗಿ ಜಾಗತಿಕ ವಲಯದಲ್ಲಿ ಗ್ರಾಹಕರ ಇಚ್ಚೆಗನುಸಾರವಾಗಿ ನಾವು ಯಾವ ರೀತಿಯಲ್ಲಿ ವಸ್ತುವನ್ನು ಪ್ರಸ್ತುತಪಡಿಸುತ್ತೇವೆ ಎನ್ನುವುದು ಮಹತ್ತರ ಸಂಗತಿಯಾಗಲಿದೆ.ಅಲ್ಲದೆ ಇದು ಮನರಂಜನೆಯನ್ನು ಪ್ರತಿ ಪ್ರದೇಶಗಳ ಪ್ರಾದೇಶಿಕತೆಗೆ ಅನುಗುಣವಾಗಿ ಹೊಸ ತಂತ್ರಜ್ಞಾನದ ಸಹಾಯದಿಂದ ಗ್ರಾಹಕರು ಮನರಜನೆಯನ್ನು ನೋಡುವ ಮತ್ತು ಅದನ್ನು ಅನುಭವಿಸುವ ವಿಧಾನದಲ್ಲಿ ವ್ಯಾಪಕವಾದ ಬದಲಾವಣೆಯನ್ನು ತರಲಿದೆ ಎಂದು ಗೋಯಂಕಾ  ತಿಳಿಸಿದರು. ಆದ್ದರಿಂದ ಇಂತಹ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಹೊಸ ಮಾದರಿಯ ಮನರಂಜನೆಯನ್ನು ಈ ವೇದಿಕೆ ಒದಗಿಸಲಿದೆ ಎನ್ನಲಾಗಿದೆ.

ಝೀ 5 ಪ್ರಮುಖವಾಗಿ ಮಾಧ್ಯಮ ಮತ್ತು ಮನರಂಜನೆಯ ಕೇಂದ್ರಗಳನ್ನು ಸಂಪೂರ್ಣವಾಗಿ ಬದಲಾವಣೆ ಮಾಡಲಿದೆ. ಅಲ್ಲದೆ ಇದು ಎರಡನ್ನು ಮೇಳೈಸಿದ ವಸ್ತು ಮತ್ತು ಹೊಸ ತಂತ್ರಜ್ನಾನದ  ಸಹಾಯದಿಂದ ಕೇವಲ ದೇಶದ ವಿಕ್ಷರಲ್ಲದೆ ಜಾಗತಿಕವಾಗಿಯೂ ಕೂಡಾ ಇದು ಹೊಸ ರೀತಿಯ ಬದಲಾವಣೆಯನ್ನು ತರಬಲ್ಲದು ಎಂದು ಪುನಿತ್ ಗೋಯಂಕಾ ತಿಳಿಸಿದರು.

Trending News