ರಾಕಿಂಗ್‌ ಸ್ಟಾರ್‌ ಯಶ್‌ 'ಬಾಲಿವುಡ್‌ ಬಾದ್‌ ಷಾ' ಎಂದ ಈ ಸ್ಟಾರ್‌ ನಟ..!

ಕನ್ನಡಿಗರ 'ಕೆಜಿಎಫ್ ಚಾಪ್ಟರ್-2'‌ ಹವಾ ಹೇಗಿದೆ ಅಂದ್ರೆ ಉತ್ತರ ಭಾರತದ ಹತ್ತಾರು ಸ್ಕ್ರೀನ್‌ಗಳಲ್ಲಿ ಈಗಲೂ 'ಕೆಜಿಎಫ್-2'‌ ಅದ್ಧೂರಿ ಪ್ರದರ್ಶನ ಕಾಣ್ತಿದೆ. ಅದರಲ್ಲೂ ಬಾಲಿವುಡ್‌ ಸ್ಟಾರ್‌ ನಟರೇ ಕನ್ನಡ ಸಿನಿಮಾ ಕುರಿತು ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಅದರಲ್ಲೂ 'ಕೆಜಿಎಫ್'‌ ಹೀರೋ ರಾಕಿಂಗ್‌ ಸ್ಟಾರ್‌ ಯಶ್‌ ನಟನೆಗೆ ಸ್ವತಃ ಬಾಲಿವುಡ್‌ ನಟರೇ ಫಿದಾ ಆಗಿದ್ದಾರೆ. ಈಗ ಆ ಪಟ್ಟಿಗೆ ಮತ್ತೊಬ್ಬ ಸ್ಟಾರ್‌ ಸೇರ್ಪಡೆಯಾಗಿದ್ದು, ರಾಕಿಂಗ್‌ ಸ್ಟಾರ್‌ ಯಶ್‌ 'ಬಾಲಿವುಡ್‌ ಬಾದ್‌ ಷಾ' ಎಂಬ ಬಿರುದು ನೀಡಿದ್ದಾರೆ.

Written by - Malathesha M | Edited by - Manjunath Naragund | Last Updated : Aug 25, 2022, 10:26 PM IST
  • ಕನ್ನಡ ಸಿನಿಮಾಗಳ ತಾಕತ್ತು ಏನೆಂಬುದು ಜಗತ್ತಿಗೇ ಗೊತ್ತು. ಇನ್ನೇನು 100 ವರ್ಷ ಪೂರೈಸಲಿರುವ ಕನ್ನಡ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಇತಿಹಾಸವಿದೆ.
ರಾಕಿಂಗ್‌ ಸ್ಟಾರ್‌ ಯಶ್‌ 'ಬಾಲಿವುಡ್‌ ಬಾದ್‌ ಷಾ' ಎಂದ ಈ ಸ್ಟಾರ್‌ ನಟ..! title=
file photo

ಬೆಂಗಳೂರು: ಕನ್ನಡಿಗರ 'ಕೆಜಿಎಫ್ ಚಾಪ್ಟರ್-2'‌ ಹವಾ ಹೇಗಿದೆ ಅಂದ್ರೆ ಉತ್ತರ ಭಾರತದ ಹತ್ತಾರು ಸ್ಕ್ರೀನ್‌ಗಳಲ್ಲಿ ಈಗಲೂ 'ಕೆಜಿಎಫ್-2'‌ ಅದ್ಧೂರಿ ಪ್ರದರ್ಶನ ಕಾಣ್ತಿದೆ. ಅದರಲ್ಲೂ ಬಾಲಿವುಡ್‌ ಸ್ಟಾರ್‌ ನಟರೇ ಕನ್ನಡ ಸಿನಿಮಾ ಕುರಿತು ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಅದರಲ್ಲೂ 'ಕೆಜಿಎಫ್'‌ ಹೀರೋ ರಾಕಿಂಗ್‌ ಸ್ಟಾರ್‌ ಯಶ್‌ ನಟನೆಗೆ ಸ್ವತಃ ಬಾಲಿವುಡ್‌ ನಟರೇ ಫಿದಾ ಆಗಿದ್ದಾರೆ. ಈಗ ಆ ಪಟ್ಟಿಗೆ ಮತ್ತೊಬ್ಬ ಸ್ಟಾರ್‌ ಸೇರ್ಪಡೆಯಾಗಿದ್ದು, ರಾಕಿಂಗ್‌ ಸ್ಟಾರ್‌ ಯಶ್‌ 'ಬಾಲಿವುಡ್‌ ಬಾದ್‌ ಷಾ' ಎಂಬ ಬಿರುದು ನೀಡಿದ್ದಾರೆ.

'ಕೆಜಿಎಫ್-2'‌ ಇಂಡಿಯನ್‌ ಬಾಕ್ಸ್‌ ಆಫಿಸ್‌ನಲ್ಲಿ ದಾಖಲೆ ಬರೆದ ಕನ್ನಡಿಗರ ಸಿನಿಮಾ. ₹500 ಕೋಟಿ ಗಡಿ ದಾಟುವುದೇ ಸಾಹಸ ಎಂಬ ಪರಿಸ್ಥಿತಿ ಇರುವಾಗ ಕನ್ನಡಿಗರ ಸಿನಿಮಾ ಸಾವಿರ ಕೋಟಿ ಕ್ಲಬ್‌ ಸೇರಿದ್ದಾಗಿದೆ. ಬಾಕ್ಸ್‌ ಆಫಿಸ್‌ನಲ್ಲಿ ₹1300 ಕೋಟಿ ಬಾಚಿರುವ 'ಕೆಜಿಎಫ್-2'‌‌ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಗೋಲ್ಡ್.‌ ಇಂತಹ ಸಿನಿಮಾ ಕುರಿತಾಗಿ ಬಾಲಿವುಡ್‌ ಸ್ಟಾರ್‌ ಶಾಹಿದ್ ಕಪೂರ್ ಮುಕ್ತವಾಗಿ ಮಾತನಾಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಟ ಯಶ್‌ ಬಾಲಿವುಡ್‌ ಪಾಲಿಗೆ ನಂಬರ್‌ 1 ನಟ ಎಂದಿದ್ದಾರೆ ಶಾಹಿದ್.

ಇದನ್ನೂ ಓದಿ: ಡಿಜಿಟಲ್ ಆರ್ಥಿಕತೆಗೆ ರಾಜ್ಯದಿಂದ 300 ಬಿಲಿಯನ್ ಡಾಲರ್ ಕೊಡುಗೆ ಗುರಿ: ಅಶ್ವತ್ಥ ನಾರಾಯಣ

ಕನ್ನಡ ಶೈನಿಂಗ್..!
ಕನ್ನಡ ಸಿನಿಮಾಗಳ ತಾಕತ್ತು ಏನೆಂಬುದು ಜಗತ್ತಿಗೇ ಗೊತ್ತು. ಇನ್ನೇನು 100 ವರ್ಷ ಪೂರೈಸಲಿರುವ ಕನ್ನಡ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಇತಿಹಾಸವಿದೆ. ಆದರೆ ಇದು ಬಾಲಿವುಡ್‌ ಮಂದಿಗೆ ಗೊತ್ತಿದ್ದೂ, ಗೊತ್ತಿಲ್ಲದಂತೆ ನಾಟಕವಾಡಿ ಅಭ್ಯಾಸವಾಗಿತ್ತು. 'ಕೆಜಿಎಫ್-1'‌ & 'ಕೆಜಿಎಫ್-2'‌ ರಿಲೀಸ್‌ ಆದ ಬಳಿಕ ಇಂತಹ ಸೀಮಿತ ಯೋಚನೆಗಳು ಕಳಚಿಬಿದ್ದವು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಯುಗವೇ ಆರಂಭವಾಗಿ ಹೋಗಿತ್ತು.

ಸ್ಯಾಂಡಲ್‌ವುಡ್‌ ಪವರ್‌ಗೆ ಇದೀಗ ಬಾಲಿವುಡ್‌ ಗಾಳಿಪಟವಾಗಿ ಹೋಗಿದೆ. ಒಂದೊಂದು ಬಾಲಿವುಡ್‌ ಸಿನಿಮಾ ಕೂಡ ಹಾಕಿದ ಬಂಡವಾಳ ತೆಗೆಯೋಕೆ ಪರದಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಚಿತ್ರ ರಂಗದ ಬಗ್ಗೆ ಹಲವು ಸ್ಟಾರ್‌ ನಟರು ಮುಕ್ತವಾಗಿ ಮಾತನಾಡುತ್ತಿದ್ದಾರೆ. ಈಗ ಈ ಸಾಲಿಗೆ ಶಾಹಿದ್ ಕಪೂರ್ ಸೇರ್ಪಡೆಯಾಗಿದ್ದಾರೆ. 'ಕಾಫಿ ವಿತ್ ಕರಣ್'‌ನಲ್ಲಿ ಭಾಗವಹಿಸಿದ್ದ ನಟ ಶಾಹಿದ್ ಕಪೂರ್, ಯಶ್‌ ಅವರನ್ನು ಬಾಲಿವುಡ್‌ ಪಾಲಿಗೆ ನಂಬರ್‌ 1 ನಟ ಎಂದಿದ್ದಾರೆ.

ಇದನ್ನೂ ಓದಿ: Tumkur Accident Case: ಪ್ರಧಾನಿ ಮೋದಿ ಸಂತಾಪ, ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಣೆ

ಇತ್ತೀಚೆಗೆ ಬಾಲಿವುಡ್‌ ಸಾಲು ಸಾಲು ಸೋಲು ಕಾಣುತ್ತಿದೆ. ಸ್ವತಃ ಶಾಹಿದ್ ಕಪೂರ್ ಸಿನಿಮಾ ಕೂಡ ಹೀನಾಯ ಸೋಲು ಕಂಡಿತ್ತು. ಶಾಹಿದ್ ನಟಿಸಿದ್ದ 'ಜೆರ್ಸಿ'‌ ಸಿನಿಮಾ 'ಕೆಜಿಎಫ್-2'‌ ಜೊತೆ ರಿಲೀಸ್‌ ಆಗಬೇಕಿತ್ತು. ಆದ್ರೆ 'ಕೆಜಿಎಫ್-2'‌ ಅಬ್ಬರ ಕಂಡು ಬೆಚ್ಚಿದ್ದ 'ಜೆರ್ಸಿ'‌ ಟೀಂ ರಿಲೀಸ್‌ ಡೇಟ್‌ ಮುಂದಕ್ಕೆ ಹಾಕಿತ್ತು. ಅದಕ್ಕೂ ಮೊದಲು 'ಜೆರ್ಸಿ'‌ ಸಿನಿಮಾವನ್ನ 'ಕೆಜಿಎಫ್-2'‌‌ ಬಿಡುಗಡೆಯಾಗಿದ ದಿನದಂದು ಅಂದರೆ ಏಪ್ರಿಲ್‌ 14ಕ್ಕೆ ರಿಲೀಸ್‌ ಮಾಡಲು ಯೋಜಿಸಿದ್ದರು. ಆದ್ರೆ 'ಕೆಜಿಎಫ್-2'‌ 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆಗೆ ಅಪ್ಪಳಿಸಲು ಸಜ್ಜಾದಾಗ ಬೆಚ್ಚಿಬಿದ್ದಿದ್ದರು ಜೆರ್ಸಿ ನಿರ್ಮಾಪಕರು. ಹೀಗಾಗಿ 2022ರ ಏಪ್ರಿಲ್‌ 22ರಂದು 'ಜೆರ್ಸಿ'‌ ಸಿನಿಮಾ ರಿಲೀಸ್‌ ಆಗಿತ್ತು. ಅಂದರೆ 'ಕೆಜಿಎಫ್-2'‌‌ ರಿಲೀಸ್‌ ಆದ ಒಂದು ವಾರದ ಬಳಿಕ. ಆದರೂ ನಟ ಶಾಹಿದ್ ಕಪೂರ್ ಸಿನಿಮಾ ಬಾಕ್ಸ್‌ ಆಫಿಸ್‌ನಲ್ಲಿ ಮಕಾಡೆ ಮಲಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News